ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ನಡೆಸುತ್ತಿರುವ ರೋಡ್ ಶೋಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ನೀಟ್ ಪರೀಕ್ಷಾರ್ಥಿಗಳು ಮತ್ತು ಬೆಂಗಳೂರಿನ ಜನರ ವಿರೋಧವನ್ನು ಧಿಕ್ಕರಿಸಿ ಪ್ರಧಾನಿ ಮೋದಿ ನಾಳೆ ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ. ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ?’ ಎಂದು ಪ್ರಶ್ನಿಸಿದ್ದಾರೆ.
ನೀಟ್ ಪರೀಕ್ಷಾರ್ಥಿಗಳು ಮತ್ತು ಬೆಂಗಳೂರಿನ ಜನರ ವಿರೋಧವನ್ನು ಧಿಕ್ಕರಿಸಿ ಪ್ರಧಾನಿ @narendramodi ಅವರು ನಾಳೆ ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ. ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ? 1/7
— Siddaramaiah (@siddaramaiah) May 6, 2023
‘ಪ್ರಧಾನಿ ಮೋದಿಯವರ ರೋಡ್ ಶೋವನ್ನು 1 ದಿನ ಮುಂದಕ್ಕೆ ಹಾಕಬಹುದು. ಆದರೆ ವಿದ್ಯಾರ್ಥಿಗಳು ಪರೀಕ್ಷೆ ನಾಳೆ ಬರೆಯುತ್ತೇನೆ ಎಂದರೆ ಆಗುತ್ತಾ? ವಿನಾಶಕಾಲೇ ವಿಪರೀತ ಬುದ್ದಿ ಎನ್ನುವ ಹಾಗಿದೆ ಬಿಜೆಪಿ ನಾಯಕರ ಹಠಮಾರಿತನ. ಜನಾಕ್ರೋಶಕ್ಕೆ ಮಣಿದು ರೋಡ್ ಶೋವನ್ನು ರದ್ದುಗೊಳಿಸುವುದು ಬಿಟ್ಟು ಅದನ್ನು ಸಮರ್ಥಿಸಿಕೊಂಡು, ವಿರೋಧಿಸುವವರ ಮೇಲೆ ಎರಗುತ್ತಿರುವುದು ಬಿಜೆಪಿ ನಾಯಕರ ತಲೆಗೇರಿರುವ ಅಧಿಕಾರದ ಮದವನ್ನು ತೋರಿಸುತ್ತದೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರಧಾನಿ @narendramodi ಅವರ ರೋಡ್ ಶೋವನ್ನು ಒಂದು ದಿನ ಮುಂದಕ್ಕೆ ಹಾಕಬಹುದು ಆದರೆ ವಿದ್ಯಾರ್ಥಿಗಳು ಪರೀಕ್ಷೆ ನಾಳೆ ಬರೆಯುತ್ತೇನೆ ಎಂದರೆ ಆಗುತ್ತಾ?
ವಿನಾಶಕಾಲೇ ವಿಪರೀತ ಬುದ್ದಿ ಎನ್ನುವ ಹಾಗಿದೆ @BJP4Karnataka ಹಠಮಾರಿತನ. 2/7
— Siddaramaiah (@siddaramaiah) May 6, 2023
ಇದನ್ನೂ ಓದಿ: Special Gift To Modi : ಮೋದಿಗೆ ವಿಶೇಷ ಉಡುಗೊರೆ ನೀಡಲು ಸಜ್ಜಾದ ಹಾವೇರಿ ಬಿಜೆಪಿ ನಾಯಕರು
ಜನಾಕ್ರೋಶಕ್ಕೆ ಮಣಿದು ರೋಡ್ ಶೋವನ್ನು ರದ್ದುಗೊಳಿಸುವುದು ಬಿಟ್ಟು ಅದನ್ನು ಸಮರ್ಥಿಸಿಕೊಂಡು, ವಿರೋಧಿಸುವವರ ಮೇಲೆ ಎರಗುತ್ತಿರುವುದು @BJP4Karnataka ನಾಯಕರ ತಲೆಗೇರಿರುವ ಅಧಿಕಾರದ ಮದವನ್ನು ತೋರಿಸುತ್ತದೆ. 3/7
— Siddaramaiah (@siddaramaiah) May 6, 2023
‘ರೋಡ್ ಶೋದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿದ್ದರೆ ಅವರು ಮುಂಚಿತವಾಗಿ ಹೋಗಿ ಉಳಿದುಕೊಳ್ಳಲ್ಲಿ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಅತ್ಯಂತ ಹೊಣೆಗೇಡಿತನ ಮತ್ತು ದುರಹಂಕಾರದ್ದು. ಬಡ ವಿದ್ಯಾರ್ಥಿಗಳಿಗೆ ಇದು ಆಗುತ್ತಾ? ವಿದ್ಯಾರ್ಥಿಗಳು ಅನುಭವಿಸಬೇಕಾಗಿರುವ ಕಷ್ಟಗಳನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತಂದು ರೋಡ್ ಶೋ ರದ್ದು ಮಾಡಬೇಕಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ರೋಡ್ ಶೋವನ್ನು ಸಮರ್ಥಿಸುತ್ತಿರುವುದು ಬಿಜೆಪಿ ಸಚಿವರ ಗುಲಾಮಗಿರಿ ಮನಸ್ಥಿತಿಗೆ ಒಂದು ಉದಾಹರಣೆ’ ಎಂದು ಟೀಕಿಸಿದ್ದಾರೆ.
ರೋಡ್ ಶೋ ದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿದ್ದರೆ ಅವರು ಮುಂಚಿತವಾಗಿ ಹೋಗಿ ಉಳಿದುಕೊಳ್ಳಲ್ಲಿ ಎಂಬ ಕೇಂದ್ರ ಸಚಿವೆ @ShobhaBJP ಅವರ ಹೇಳಿಕೆ ಅತ್ಯಂತ ಹೊಣೆಗೇಡಿತನ ಮತ್ತು ದುರಹಂಕಾರದ್ದು.
ಬಡ ವಿದ್ಯಾರ್ಥಿಗಳಿಗೆ ಇದು ಆಗುತ್ತಾ? 4/7— Siddaramaiah (@siddaramaiah) May 6, 2023
‘ಜವಾಬ್ದಾರಿ ಸ‍್ಥಾನದಲ್ಲಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ತಮ್ಮ ನಾಯಕನಿಗೆ ಸರಿಯಾದ ಸಲಹೆ ಕೊಡುವ ಧೈರ್ಯವಿಲ್ಲ. ಇದರ ಬದಲಾಗಿ ಅವರು ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಲು ಹೊರಟಿದ್ದಾರೆ, ಇದು ಖಂಡನೀಯ. ಪ್ರಧಾನಿ ಮೋದಿಯವರ ರೋಡ್ ಶೋ ಕಾರಣಕ್ಕೆ ನನ್ನ ಸಂಚಾರಕ್ಕೂ ಪೊಲೀಸರು ನಿರ್ಬಂಧ ಹಾಕಿದ್ದರು. ಮೋದಿಯವರು ಹೊಸಪೇಟೆಗೆ ಹೋಗುತ್ತಿದ್ದರು, ನಾನು ಗಂಗಾವತಿಗೆ ಹೊರಟಿದ್ದೆ. ಮೋದಿಯವರು ಹೋಗುತ್ತಿರುವ ಕಾರಣಕ್ಕೆ ನನಗೆ ಗಂಗಾವತಿ ಹೋಗಲು ಅನುಮತಿಯನ್ನೇ ನೀಡಿಲ್ಲ. ವಿಧವಿಧವಾಗಿ ನಾನು ಮನವಿ ಮಾಡಿದೆ, ಆದರೂ ಅನುಮತಿ ಕೊಡಲಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕನಿಗೆ ಹೀಗಾದರೆ, ಸಾಮಾನ್ಯ ಜನರ ಗತಿಯೇನು ಬಿಜೆಪಿ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪ್ರಧಾನಿ @narendramodi ಅವರ ರೋಡ್ ಶೋ ಕಾರಣಕ್ಕೆ ನನ್ನ ಸಂಚಾರಕ್ಕೂ ಪೊಲೀಸರು ನಿರ್ಬಂಧ ಹಾಕಿದ್ದರು. ಮೋದಿ ಅವರು ಹೊಸಪೇಟೆಗೆ ಹೋಗುತ್ತಿದ್ದರು, ನಾನು ಗಂಗಾವತಿಗೆ ಹೊರಟಿದ್ದೆ, ಮೋದಿ ಅವರು ಹೋಗುತ್ತಿರುವ ಕಾರಣಕ್ಕೆ ನನಗೆ ಗಂಗಾವತಿ ಹೋಗಲು ಅನುಮತಿಯನ್ನೇ ನೀಡಿಲ್ಲ. ವಿಧವಿಧವಾಗಿ ನಾನು ಮನವಿ ಮಾಡಿದೆ, ಆದರೂ ಅನುಮತಿ ಕೊಡಲಿಲ್ಲ.
ಒಬ್ಬ…
— Siddaramaiah (@siddaramaiah) May 6, 2023
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಭರ್ಜರಿ ಪ್ರಚಾರ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.