Sudha Murthy : ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿಯವರ ವಿಮಾನ ಹತ್ತುವಾಗ ಬಿಸಿನೆಸ್ ಕ್ಲಾಸ್ನ ಟಿಕೆಟ್ ಹಿಡಿದು ನಿಂತಾಗ ಅಲ್ಲಿದ್ದ ಸಹ ಪ್ರಯಾಣಿಕರು ಅವರನ್ನು ನೋಡಿ ಟೀಕೆ ಮಾಡಿದ ಕುರಿತು ಹೇಳಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿಗೆ ಕಪಿಲ್ ಶರ್ಮಾ ಶೋದಲ್ಲಿ ಭಾಗವಹಿಸಿದ್ದ ಸುಧಾ ಮೂರ್ತಿಯವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಕಪಿಲ್ ಶರ್ಮಾ ಶೋ ನಿರಂತರವಾಗಿ ಜನರನ್ನು ರಂಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರು, ಸೋಷಿಯಲ್ ಮೀಡಿಯಾ ಸ್ಟಾರ್ಸ್, ಗಾಯಕರು, ಸ್ಟ್ಯಾಂಡ್-ಅಪ್ ಕಾಮಿಡಿಯನ್ಸ್, ರಾಜಕಾರಣಿಗಳು, ನಿರ್ಮಾಪಕರು, ಬರಹಗಾರರು, ಕ್ರೀಡಾಪಟುಗಳು ಮತ್ತು ಇನ್ನೂ ಅನೇಕರು ಭಾಗವಹಿಸುದ್ದಾರೆ. ಸದ್ಯ ಮುಂಬರುವ ಸಂಚಿಕೆಯಲ್ಲಿ ಆಸ್ಕರ್ ವಿಜೇತ ನಿರ್ಮಾಪಕ ಗುನೀತ್ ಮೊಂಗಾ ಮತ್ತು ಲೇಖಕಿ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿ ಹಾಗೂ ನಟಿ ರವೀನಾ ಟಂಡನ್ ಅವರಿಂದ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಮೇ 13 ರಂದು ಮತ ಎಣಿಕೆ ಹಿನ್ನೆಲೆ ಬೆಂಗಳೂರಿನಾದ್ಯಂತ 144 ಸೆಕ್ಷನ್ ಜಾರಿ..!
ಈ ಕುರಿತು ಪ್ರಮೋ ಒಂದನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ, ಮೊದಲಿಗೆ ಸುಧಾ ಮೂರ್ತಿಯವರನ್ನು ಪರಿಚಯಿಸಿದ ಕಪಿಲ್, ಬ್ರಿಟನ್ ಪ್ರಧಾನಿಯೂ ಆಕೆಯ ಪಾದ ಮುಟ್ಟಿ ನಮಸ್ಕರಿಸುವಂತಹ ಶಕ್ತಿಶಾಲಿ ಮಹಿಳೆ ಎಂದು ತಮಾಷೆಯಾಗಿ ಹೇಳುತ್ತಾರೆ. ನಂತರ ಸುಧಾ ಮೂರ್ತಿ ಅವರು ಹಿಂದೆ ತಮಗೆ 'ದನ ವರ್ಗದ ವ್ಯಕ್ತಿ' ಎಂದು ಕರೆಯಲ್ಪಟ್ಟಿದ್ದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.
ನಾಲ್ಕೈದು ವರ್ಷಗಳ ಹಿಂದೆ, ನಾನು ಸಲ್ವಾರ್ ಸೂಟ್ ಧರಿಸಿ ವಿಮಾನ ಹತ್ತುವ ಸರದಿ ಸಾಲಿನಲ್ಲಿ ನಿಂತಿದ್ದೆ, ಬಿಸಿನೆಸ್ ಕ್ಲಾಸ್ ಟಿಕೆಟ್ ಹಿಡಿದಿದ್ದೆ. ಆ ಸಮಯದಲ್ಲಿ, ಕೆಲ ಜನರು ನನ್ನನ್ನು ನೋಡಿ ʼಜಾನುವಾರು ವರ್ಗʼದವರು ಅಂತ ಟೀಕೆ ಮಾಡಿದರು. ಅವರಿಗೆ ಏನ್ ಗೊತ್ತು, ಆರ್ಥಿಕ ವರ್ಗದ ವ್ಯಕ್ತಿಗೆ ಬ್ಯುಸಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದು. ನಾನು ಅವರ ಬಳಿಗೆ ಹೋಗಿ ದನ-ವರ್ಗದ ವ್ಯಕ್ತಿ ಅಂದ್ರೆ ಏನು..? ಅಂತ ಕೇಳಿದೆ ಎಂದರು ಹೇಳಿದರು.
ಇದನ್ನೂ ಓದಿ: ತಂದೆ-ತಾಯಿ, ಹೆಂಡತಿ-ಮಕ್ಕಳ ಜೊತೆ ಕಾಲ ಕಳೆಯಿರಿ: ‘ಕೈ’ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸಲಹೆ
ಒಬ್ಬ ವ್ಯಕ್ತಿಯ ಕ್ಲಾಸ್ ಅನ್ನು ಅವನು ಎಷ್ಟು ಹಣ ಹೊಂದಿದ್ದಾನೆ ಅಥವಾ ಆಸ್ತಿ ಎಷ್ಟಿದೆ ಎಂಬುವುದರ ಮೇಲೆ ಗುರುತಿಸುವುದಿಲ್ಲ. ಮಂಜುಲ್ ಭಾರ್ಗವ ಮತ್ತು ಮದರ್ ತೆರೇಸಾ ಅವರಂತಹ ಮಹನೀಯರನ್ನು ಮಾಡಿದ ಕೆಲಸವನ್ನು ಕ್ಲಾಸ್ ಎನ್ನಬಹುದು. ನಾವು ಶ್ರದ್ಧೆಯಿಂದ ಮಾಡುವ ಕೆಲಸ ನಮ್ಮ ಕ್ಲಾಸ್ನ್ನು ನಿರ್ಧರಿಸುತ್ತದೆಯೇ ವಿನಹಃ ಹಣವಲ್ಲ ಅಂತ ಹೇಳಿದರು. ಆಗ ಕಾರ್ಯಕ್ರಮದಲ್ಲಿದ್ದ ಪ್ರೇಕ್ಷಕರು ಸೇರಿದಂತೆ ಕಪಿಲ್ ಶರ್ಮಾ, ಅರ್ಚನಾ ಪುರಾನ್ ಸಿಂಗ್ ಸುಧಾ ಮೂರ್ತಿಯವರ ಮಾತುಗಳನ್ನು ಮೆಚ್ಚಿಕೊಂಡು ಚಪ್ಪಾಳೆ ತಟ್ಟಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ