ಹ್ಯಾವನ್ -1 ಪ್ರಥಮ ವಾಣಿಜ್ಯ ನಭೋ ನಿಲ್ದಾಣ (ಸ್ಪೇಸ್ ಸ್ಟೇಷನ್)

ಅನೇಕ ಸಂಸ್ಥೆಗಳಿಗೆ ಹ್ಯಾವನ್-1 ಒಂದು ಅಮೂಲ್ಯ ಸ್ವತ್ತಾಗಲಿದೆ.  ನಿಲ್ದಾಣವು ಅತಿ ಸೂಕ್ಷ್ಮ ಗುರುತ್ವಾಕರ್ಷಣೆ (ಮೈಕ್ರೋಗ್ರಾವಿಟಿ)ಯಲ್ಲಿ  ಮಾನವನ ಆರೋಗ್ಯ, ಸಸ್ಯಗಳ ಬೆಳವಣಿಗೆ ಹಾಗೂ ವಸ್ತು ವಿಜ್ಞಾನದ ಅಧ್ಯಯನಗಳ ಸಂಶೋಧನೆಯನ್ನು ನಡೆಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತದೆ. ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಅಥವಾ ಬಾಹ್ಯಾಕಾಶ ಆಧಾರಿತ ಸೇವೆಗಳನ್ನು ನೀಡುವ ವಾಣಿಜ್ಯ ಕಂಪನಿಗಳಿಗೂ ನಿಲ್ದಾಣವು ಅಮೂಲ್ಯವಾದ ಸ್ವತ್ತಾಗಲಿದೆ.  

Written by - Girish Linganna | Edited by - Yashaswini V | Last Updated : May 12, 2023, 05:25 PM IST
  • ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹಾಗೂ ಬಾಹ್ಯಾಕಾಶ ಆಧಾರಿತ ಸೇವೆಗಳನ್ನು ಒದಗಿಸಲು ಈ ವಾಣಿಜ್ಯ ನಭೋ ನಿಲ್ದಾಣವನ್ನು ಬಳಸಬಹುದಾಗಿದೆ.
  • ಅತಿ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸಂಶೋಧನೆಯನ್ನು ನಡೆಸಲು ಒಂದು ವಿಶಿಷ್ಟ ವಾತಾವರಣವನ್ನು ವಾಣಿಜ್ಯ ನಬೋ ನಿಲ್ದಾಣ ಒದಗಿಸುತ್ತದೆ.
  • ಹೊಸ ವೈದ್ಯಕೀಯ ಚಿಕಿತ್ಸೆಗಳ ಅಭಿವೃದ್ಧಿ, ಬೆಳೆಗಳ ಇಳುವರಿಯನ್ನು ಸುಧಾರಿಸುವುದು ಹಾಗೂ ಹೊಸ ವಸ್ತುಗಳನ್ನು ಅಭಿವೃದ್ಧಿಪಡಿಸುವಂತಹ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಈ ಸಂಶೋಧನೆಯಿಂದ ಪಡೆಯಬಹುದಾಗಿದೆ.
ಹ್ಯಾವನ್ -1 ಪ್ರಥಮ ವಾಣಿಜ್ಯ ನಭೋ ನಿಲ್ದಾಣ (ಸ್ಪೇಸ್ ಸ್ಟೇಷನ್) title=

2025ರಲ್ಲಿ ಸ್ಪೇಸ್ ಎಕ್ಸ್ ಮತ್ತು ವಾಸ್ಟ್ ಸ್ಪೇಸ್ ಗಳು ಪ್ರಥಮ ವಾಣಿಜ್ಯ ನಭೋ ನಿಲ್ದಾಣ (ಸ್ಪೇಸ್ ಸ್ಟೇಷನ್) ಹ್ಯಾವನ್ -1  ಅನ್ನು ಪ್ರಾರಂಭಿಸಲಿವೆ. ಇದು ಸಂಶೋಧನೆ, ವಾಣಿಜ್ಯ ಹಾಗೂ ಪ್ರವಾಸೋದ್ಯಮದಂತಹ ವಿವಿಧ ಅವಕಾಶಗಳನ್ನು ಒದಗಿಸುವ ಒಂದು ಆಧುನಿಕೃತ ಹಾಗೂ ವಿಸ್ತರಿಸಬಹುದಾದಂತಹ ಬಾಹ್ಯಪಾಳೆಯ (ಔಟ್ ಪೋಸ್ಟ್) ಆಗಲಿದೆ.

ಖಾಸಗಿ ಸಂಸ್ಥೆಯೊಂದರಿಂದ ನಿರ್ಮಿತಗೊಂಡು ನಿರ್ವಹಿಸಲ್ಪಡುವ ಬರಲಿರುವ ಪ್ರಥಮ ನಭೋ ನಿಲ್ದಾಣವಾಗಲಿದೆ. ಈ ನಿಲ್ದಾಣದಲ್ಲಿ ಆರು ಜನ ಚಾಲಕ ಸಿಬ್ಬಂದಿಗೆ ಸ್ಥಳಾವಕಾಶವಾಗುವಂತೆ ವಿನ್ಯಾಸಗೊಳಿಸಲಾಗಿದ್ದು ಸಂಶೋಧನೆ, ವಸತಿಗೃಹಗಳು ಹಾಗೂ ಸರಕುಗಳಿಗಾಗಿ  ವಿಧವಿಧದ ಸ್ವಯಂಪೂರ್ಣ ಘಟಕಗಳನ್ನು ಹೊಂದಿರಲಿದೆ. 

ನಿಲ್ದಾಣವನ್ನು  ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ನಿಂದ ಉಡಾವಣೆ ಮಾಡಲಾಗುವುದು. ಆರಂಭದಲ್ಲಿ ಇದು ಭೂಮಿಯ ಮೇಲೆ 250 ಮೈಲುಗಳ ಎತ್ತರದ ಕಕ್ಷೆಯಲ್ಲಿ ಸುತ್ತುವುದು. ಕಕ್ಷೆಯಲ್ಲಿ ತನ್ನಂತಾನೇ ಸರಿ ಹೊಂದಿಸಿಕೊಂಡು ಕಕ್ಷೆಯ ಎತ್ತರವನ್ನು ಹೆಚ್ಚು  ಮಾಡಿಕೊಳ್ಳಲು ಅನುವು ಮಾಡಿ ಕೊಡುವಂತ ವಿವಿಧ  ಮುನ್ನೂಕುವ ವ್ಯವಸ್ಥೆ (ಪ್ರಾಪಲ್ಷನ್ ಸಿಸ್ಟಮ್) ಗಳನ್ನು ನಿಲ್ದಾಣವು ಹೊಂದಿರುತ್ತದೆ. 

ಅನೇಕ ಸಂಸ್ಥೆಗಳಿಗೆ ಹ್ಯಾವನ್-1 ಒಂದು ಅಮೂಲ್ಯ ಸ್ವತ್ತಾಗಲಿದೆ.  ನಿಲ್ದಾಣವು ಅತಿ ಸೂಕ್ಷ್ಮ ಗುರುತ್ವಾಕರ್ಷಣೆ (ಮೈಕ್ರೋಗ್ರಾವಿಟಿ)ಯಲ್ಲಿ  ಮಾನವನ ಆರೋಗ್ಯ, ಸಸ್ಯಗಳ ಬೆಳವಣಿಗೆ ಹಾಗೂ ವಸ್ತು ವಿಜ್ಞಾನದ ಅಧ್ಯಯನಗಳ ಸಂಶೋಧನೆಯನ್ನು ನಡೆಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತದೆ. ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಅಥವಾ ಬಾಹ್ಯಾಕಾಶ ಆಧಾರಿತ ಸೇವೆಗಳನ್ನು ನೀಡುವ ವಾಣಿಜ್ಯ ಕಂಪನಿಗಳಿಗೂ ನಿಲ್ದಾಣವು ಅಮೂಲ್ಯವಾದ ಸ್ವತ್ತಾಗಲಿದೆ.

ಇದನ್ನೂ ಓದಿ- ತಂತ್ರಜ್ಞಾನವನ್ನು ಹೊಸ ಎತ್ತರಕ್ಕೆ ಒಯ್ಯುತ್ತಿರುವ ಸ್ಯೂಡೋ ಸ್ಯಾಟಲೈಟ್‌ಗಳು

ಜೊತೆಗೆ ಹ್ಯಾವನ್ -1  ಜನಪ್ರಿಯ ಪ್ರವಾಸೀ ತಾಣವಾಗಲಿದೆ. ಈ ನಿಲ್ದಾಣವು ಪ್ರವಾಸಿಗಳಿಗೆ ಬಾಹ್ಯಾಕಾಶದಲ್ಲಿ ಜೀವನದ ಅನುಭವಕ್ಕೆ ಅವಕಾಶ ಒದಗಿಸುವುದಲ್ಲದೆ ಗಗನದಿಂದ ಭೂಮಿಯನ್ನು ನೋಡುವ ಒಂದು ಹೊಸ ದೃಷ್ಟಿಕೋನವನ್ನು ನೀಡುತ್ತದೆ.

ಬಾಹ್ಯಾಕಾಶ ವಾಣಿಜ್ಯೀಕರಣದಲ್ಲಿ ಈ ನಭೋ ನಿಲ್ದಾಣದ ಪ್ರಾರಂಭ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ನಿಲ್ದಾಣವು ಬಾಹ್ಯಾಕಾಶ ಅನ್ವೇಷಣೆ- ಅಧ್ಯಯನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಸಂಕೇತವಾಗಿದ್ದು ಈ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಖಾಸಗಿ ಸಂಸ್ಥೆಗಳ ಸಾಮರ್ಥ್ಯದ ಸಂಕೇತವೂ ಆಗಿದೆ. 

ಒಂದು ವಾಣಿಜ್ಯ ನಬೋ ನಿಲ್ದಾಣದ ಪ್ರಯೋಜನಗಳು ಇಂತಿವೆ:
* ಸಂಶೋಧನಾ ಅವಕಾಶಗಳು: 

ಅತಿ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸಂಶೋಧನೆಯನ್ನು ನಡೆಸಲು ಒಂದು ವಿಶಿಷ್ಟ ವಾತಾವರಣವನ್ನು ವಾಣಿಜ್ಯ ನಬೋ ನಿಲ್ದಾಣ ಒದಗಿಸುತ್ತದೆ. ಹೊಸ ವೈದ್ಯಕೀಯ ಚಿಕಿತ್ಸೆಗಳ ಅಭಿವೃದ್ಧಿ, ಬೆಳೆಗಳ ಇಳುವರಿಯನ್ನು ಸುಧಾರಿಸುವುದು ಹಾಗೂ ಹೊಸ ವಸ್ತುಗಳನ್ನು ಅಭಿವೃದ್ಧಿಪಡಿಸುವಂತಹ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಈ ಸಂಶೋಧನೆಯಿಂದ ಪಡೆಯಬಹುದಾಗಿದೆ.

* ವಾಣಿಜ್ಯ ಅವಕಾಶಗಳು:  
ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹಾಗೂ ಬಾಹ್ಯಾಕಾಶ ಆಧಾರಿತ ಸೇವೆಗಳನ್ನು ಒದಗಿಸಲು ಈ ವಾಣಿಜ್ಯ ನಭೋ ನಿಲ್ದಾಣವನ್ನು ಬಳಸಬಹುದಾಗಿದೆ. ಇದು ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಬಹುದು.

* ಪ್ರವಾಸೋದ್ಯಮ ಅವಕಾಶಗಳು: 
ಪ್ರವಾಸಿಗರಿಗೆ ಬಾಹ್ಯಾಕಾಶ  ಜೀವನದ ಅನುಭವವನ್ನು ನೀಡಲು ಈ ವಾಣಿಜ್ಯ ನಬೋ ನಿಲ್ದಾಣಗಳನ್ನು ಬಳಸಬಹುದಾಗಿದೆ. ಇದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು ಮತ್ತು ಸಾರ್ವಜನಿಕರಲ್ಲಿ ಬಾಹ್ಯಾಕಾಶ ಅನ್ವೇಷಣೆ-ಅಧ್ಯಯನಗಳನ್ನು ಕುರಿತು ಜಾಗೃತಿ ಮೂಡಿಸಲು ಸಹಾಯ ಮಾಡಬಹುದು. 

ಇದನ್ನೂ ಓದಿ- ಅಮೆರಿಕಾ-ಚೀನಾಗಳ ನಡುವೆ ಸೆಮಿಕಂಡಕ್ಟರ್ ಸಮರ

ಒಂದು ವಾಣಿಜ್ಯನ ನಭೋ ನಿಲ್ದಾಣ  ಒಡ್ಡುವ ಸವಾಲುಗಳು ಇಂತಿವೆ.:
>> ವೆಚ್ಚ : 
ಒಂದು ವಾಣಿಜ್ಯ ನಭೋ ನಿಲ್ದಾಣದ ನಿರ್ಮಾಣ ಹಾಗೂ ನಿರ್ವಹಣಾ ವೆಚ್ಚ ಅತಿ ದುಬಾರಿಯಾಗಿರುತ್ತದೆ. ಇದರಿಂದ ಈ ಖಾಸಗಿ ಕಂಪನಿಗಳಿಗೆ ಲಾಭಗಳಿಸಲು ಕಷ್ಟವಾಗಬಹುದು.
>> ಸುರಕ್ಷತೆ: 
ಒಂದು ವಾಣಿಜ್ಯ ನಭೋ ನಿಲ್ದಾಣದ ಕಾರ್ಯಾಚರಣೆಯಲ್ಲಿ  ಅಪಘಾತಗಳು, ಅಗ್ನಿ ಅನಾಹುತ ಮತ್ತು ಘರ್ಷಣೆಗಳಂತಹ ಕೆಲವು ಅಪಾಯಗಳು ಇರುತ್ತವೆ.
>> ನಿಯಮ-ನಿಬಂಧನೆಗಳು:  
ಒಂದು ವಾಣಿಜ್ಯ ನಭೋ ನಿಲ್ದಾಣವನ್ನು ನಿಯಂತ್ರಿಸುವಂತಹ ಯಾವುದೇ ರೀತಿಯ ಅಂತರರಾಷ್ಟ್ರೀಯ ನಿಯಮ ನಿಬಂಧನೆಗಳಿಲ್ಲ. ಇದು ಖಾಸಗಿ ಕಂಪನಿಗಳಿಗೆ ಕಾನೂನು-ಕಟ್ಟಳೆಗಳ ವಿಷಯದಲ್ಲಿ ಅನಿಶ್ಚಿತತೆಯನ್ನು ಉಂಟು ಮಾಡಬಹುದು.

ಅದರ ಸವಾಲುಗಳ ಹೊರತಾಗಿಯೂ, ವಾಣಿಜ್ಯನಬೋ ನಿಲ್ದಾಣದಿಂದ ಅನೇಕ ಸಂಭಾವ್ಯ ಪ್ರಯೋಜನೆಗಳಿವೆ. ಈ ಪ್ರಯೋಜನಗಳು ಹೊಸ ಸಂಶೋಧನಾ ಅವಕಾಶಗಳು, ವಾಣಿಜ್ಯ ಹಾಗೂ ಪ್ರವಾಸೋದ್ಯಮ ಅವಕಾಶಗಳನ್ನೂ ಒಳಗೊಂಡಿರಬಹುದಾಗಿದೆ. ಬಾಹ್ಯಾಕಾಶ ವಾಣಿಜ್ಯೀಕರಣದಲ್ಲಿ ಈ ನಭೋ ನಿಲ್ದಾಣದ ಪ್ರಾರಂಭ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ನಿಲ್ದಾಣವು ಬಾಹ್ಯಾಕಾಶ ಅನ್ವೇಷಣೆ- ಅಧ್ಯಯನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಸಂಕೇತವಾಗಿದ್ದು ಈ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಖಾಸಗಿ ಸಂಸ್ಥೆಗಳ ಸಾಮರ್ಥ್ಯದ ಸಂಕೇತವೂ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News