/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು: ಸಿದ್ದರಾಮಯ್ಯ vs ಡಿಕೆ ಶಿವಕುಮಾರ್ ಫೈಟ್‍ನಲ್ಲಿ ಕರ್ನಾಟಕದ ಸಿಎಂ ಪಟ್ಟ ಯಾರ ‘ಕೈ’ಗೆ ಹೋಗುತ್ತದೆ? ಕಳೆದ 4 ದಿನಗಳಿಂದ ಕಾಂಗ್ರೆಸ್ ಪಕ್ಷವು ಈ ಸಂಬಂಧ ನಿರಂತರವಾಗಿ ಸಭೆಗಳ ಮೇಲೆ ಸಭೆ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಕೆಲವು ಪ್ರಬಲ ಖಾತೆಗಳು ಮತ್ತು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನೀಡುವಾಗಿ ಹೇಳಲಾಗಿದೆ. ಆದರೆ ಡಿಕೆ ಶಿವಕುಮಾರ್ ಇದನ್ನು ನಿರಾಕರಿಸಿದ್ದಾರೆ.

ಸಿಎಂ ವಿಚಾರದಲ್ಲಿ ಪಕ್ಷದ ಹೈಕಮಾಂಡ್‍ನ ಮೊದಲ ಆಯ್ಕೆ ಸಿದ್ದರಾಮಯ್ಯ. ಆದರೆ ಇಬ್ಬರು ನಾಯಕರೂ ಇದಕ್ಕೆ ತಲೆಬಾಗಲು ಸಿದ್ಧರಿಲ್ಲ. ಇದೇ ಕಾರಣಕ್ಕೆ 4 ದಿನಗಳಿಂದ ದೆಹಲಿಯಿಂದ ಬೆಂಗಳೂರಿಗೆ ರಾಜಕೀಯ ನಾಟಕ ನಡೆಯುತ್ತಿದೆ. ರಾಜ್ಯದ ಬಿಕ್ಕಟ್ಟು ಬುಧವಾರ ಕೊನೆಗೊಳ್ಳಲಿದೆ ಎಂದು ಪಕ್ಷವು ಆಶಾಭಾವನೆಯಲ್ಲಿತ್ತು, ಆದರೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರೂ ಉಭಯ ನಾಯಕರ ವರ್ತನೆ ಬದಲಾಗಿಲ್ಲ.

ಇದನ್ನೂ ಓದಿ: Karnataka CM Decision: ಸಿದ್ದರಾಮಯ್ಯ ಸಿಎಂ ಆಗೋದು ನನಗೆ ಒಪ್ಪಿಗೆ ಇಲ್ಲ- ಡಿಕೆಶಿ

ಸಿದ್ದರಾಮಯ್ಯಗೆ ಸಿಎಂ ಪಟ್ಟ ಬೇಡ

ಮೂಲಗಳ ಪ್ರಕಾರ ಸುಮಾರು 25 ವರ್ಷಗಳ ನಂತರ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ತಮ್ಮಿಂದಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ದು, ತಮ್ಮನ್ನು ಸಿಎಂ ಮಾಡದಿದ್ದರೆ ಪಕ್ಷವು ಬೆಂಬಲ ಕಳೆದುಕೊಳ್ಳುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೊಳ್ಳುತ್ತಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನ ಸ್ವೀಕರಿಸಲು ಮತ್ತು ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಲು ಡಿಕೆಶಿ ನಿರಾಕರಿಸಿದರು. ಬದಲಿಗೆ ತಾವು ಶಾಸಕರಾಗಿಯೇ ಮುಂದುವರಿಯುತ್ತೇನೆ, ಪಕ್ಷ ವಿರೋಧಿ ಚಟುವಟಿಕೆ ನಡೆಸುವುದಿಲ್ಲವೆಂದು ಖರ್ಗೆಗೆ ಶಿವಕುಮಾರ್ ಹೇಳಿದ್ದಾರಂತೆ. ಖರ್ಗೆ ಅವರೇ ಮುಖ್ಯಮಂತ್ರಿಯಾದರೆ ಸಂಪೂರ್ಣ ಬೆಂಬಲ ನೀಡುವುದಾಗಿಯೂ ಅವರು ಹೇಳಿದ್ದಾರೆ.

ಸಮಾನ ಸೂತ್ರಕ್ಕೂ ಒಪ್ಪದ ಡಿಕೆಶಿ

ಎರಡೂವರೆ ವರ್ಷದ ಸೂತ್ರದ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ನಡೆದಿದೆ. ಆದರೆ ಇದಕ್ಕೂ ಡಿಕೆಶಿ ಷರತ್ತು ಹಾಕಿದ್ದಾರೆ. ಈ ಸೂತ್ರದಲ್ಲಿ ಮೊದಲ ಎರಡೂವರೆ ವರ್ಷ ತಮಗೆ ಸರ್ಕಾರ ನಡೆಸಲು ಅವಕಾಶ ನೀಡಬೇಕು ಮತ್ತು ಉಳಿದ ಅವಧಿಗೆ ಸಿದ್ದರಾಮಯ್ಯ ಅವರೇ ಸರ್ಕಾರ ನಡೆಸಲಿ ಎಂದು ಡಿಕೆಶಿ ಹೇಳಿದ್ದಾರಂತೆ. ಒಂದೋ ನನಗೆ ಆರಂಭಿಕ ಅವಧಿಯನ್ನು ನೀಡಬೇಕು ಅಥವಾ ತಮಗೆ ಏನೂ ಬೇಡ. ಹೀಗಾಗಿದಿದ್ದಲ್ಲಿ ನಾನು ಮೌನವಾಗಿರುತ್ತೇನೆ ಅಂತಾ ಹೇಳಿದ್ದಾರಂತೆ.

ಮತ್ತೊಂದೆಡೆ ಡಿಕೆಶಿ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ, ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರೆ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲಿದೆ. ರಣತಂತ್ರ ರೂಪಿಸಿ ಸರ್ಕಾರಕ್ಕೆ ಅಡ್ಡಗಾಲು ಹಾಕಲಿದೆ ಅಂತಾ ಹೇಳಿದ್ದಾರೆ.  

ಇದನ್ನೂ ಓದಿ: ʼಸುಧಾಕರ್‌ ಸೋತು ಭ್ರಮನಿರಸನರಾಗಿʼ ಏನೇನೋ ಹೇಳ್ತಾರೆ : ಸಿದ್ದು ಪರ ಎಂಟಿಬಿ ಬ್ಯಾಟ್‌

ಸಿದ್ದರಾಮಯ್ಯರ ವಾದವೇನು?

ಕಾಂಗ್ರೆಸ್ ಗೆಲುವಿಗೆ ಅಹಿಂದ ಮತಬ್ಯಾಂಕ್ ಕಾರಣವಾಗಿದೆ. ಹೀಗಾಗಿ ನನಗೆ ಸಿಎಂ ಸ್ಥಾನ ನೀಡಿದೆ ಉತ್ತಮವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೂಲಗಳ ಪ್ರಕಾರ ತಮ್ಮನ್ನು ಮುಖ್ಯಮಂತ್ರಿ ಮಾಡದಿದ್ದರೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ಹೇಳಿದ್ದಾರೆ. ದಲಿತ ಮತ್ತು ಅಲ್ಪಸಂಖ್ಯಾತರ ಮತಗಳು ಸದಾ ಕಾಂಗ್ರೆಸ್ ಜೊತೆಗಿದ್ದು, ಸಿದ್ದರಾಮಯ್ಯ ತಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲವೆಂದು ಖರ್ಗೆಗೆ ಶಿವಕುಮಾರ್ ಹೇಳಿದ್ದಾರೆ. ಈಗ ಹೈಕಮಾಂಡ್ ಇಬ್ಬರ ಮಾತುಗಳ ಬಗ್ಗೆಯೂ ಚರ್ಚಿಸುತ್ತಿದೆ. ಮೂಲಗಳ ಪ್ರಕಾರ ಡಿಕೆಶಿ ಅಥವಾ ಸಿದ್ದರಾಮಯ್ಯ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಬಯಸಿದೆ. ಇದು ಸಾಮೂಹಿಕ ನಾಯಕತ್ವವಾಗಿರುವುದರಿಂದ 8-10 ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕು. ಇನ್ನೊಂದೆಡೆ ಕರ್ನಾಟಕದಲ್ಲಿ ರಾಜಕೀಯ ಆಟ ಇನ್ನೂ ಕೆಲವು ದಿನ ಮುಂದುವರಿಯಲಿದೆ. ಹೀಗಾಗಿ ಸಿಎಂ ಆಯ್ಕೆ ಇನ್ನೂ ವಿಳಂಬವಾಗಲಿದೆ. ಇದರ ಸೂಚನೆಯನ್ನು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ನೀಡಿದ್ದಾರೆ.

ಇನ್ನು ಸಿಎಂ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಂದಿನ 48-72 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ಮತ್ತೊಂದೆಡೆ ಡಿಕೆಶಿ ದೆಹಲಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದು, ಅವರ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Karnataka CM: Siddaramaiah vs DK Shivakumar, who will get CM Post?
News Source: 
Home Title: 

Karnataka CM: ಸಿದ್ದರಾಮಯ್ಯ vs ಡಿಕೆಶಿ, ಯಾರಿಗೆ ಸಿಗುತ್ತೆ ಪಟ್ಟ..?

Karnataka CM: ಸಿದ್ದರಾಮಯ್ಯ vs ಡಿಕೆಶಿ, ಯಾರಿಗೆ ಸಿಗುತ್ತೆ ಪಟ್ಟ..?
Caption: 
ಸಿಎಂ ಪಟ್ಟ ಯಾರ ‘ಕೈ’ಗೆ?
Yes
Is Blog?: 
No
Tags: 
Facebook Instant Article: 
Yes
Highlights: 

ಸಿದ್ದರಾಮಯ್ಯ vs ಡಿಕೆ ಶಿವಕುಮಾರ್ ಫೈಟ್‍ನಲ್ಲಿ ಕರ್ನಾಟಕದ ಸಿಎಂ ಪಟ್ಟ ಯಾರ ‘ಕೈ’ಗೆ?

ಡಿಸಿಎಂ ಸ್ಥಾನ ಸ್ವೀಕರಿಸಲು ಮತ್ತು ಸಿದ್ದರಾಮಯ್ಯರ ಜೊತೆ ಕೆಲಸ ಮಾಡಲು ನಿರಾಕರಿಸಿದ ಡಿಕೆಶಿ

ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು ಮುಂದುವರೆದಿದ್ದು, ಮತ್ತಷ್ಟು ವಿಳಂಬವಾಗುವ ಸಾಧ್ಯತೆ  

Mobile Title: 
Karnataka CM: ಸಿದ್ದರಾಮಯ್ಯ vs ಡಿಕೆಶಿ, ಯಾರಿಗೆ ಸಿಗುತ್ತೆ ಪಟ್ಟ..?
Puttaraj K Alur
Publish Later: 
No
Publish At: 
Wednesday, May 17, 2023 - 20:51
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
1
Is Breaking News: 
No
Word Count: 
397