Bird Strike: ಇಂದು ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ, ಮೇ 2ರಂದು ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ಹದ್ದು ಡಿಕ್ಕಿ ಹೊಡೆದ ಪರಿಣಾಮವಾಗಿ ಕೋಲಾರ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ನಡೆಸಲಾಯಿತು.
ಹಕ್ಕಿ ಡಿಕ್ಕಿ ಹೊಡೆಯುವುದು ಯಾಕೆ ಇಷ್ಟು ಅಪಾಯಕಾರಿ? ಇದನ್ನು ತಡೆಯಲು ಮಾರ್ಗೋಪಾಯಗಳಿವೆಯೇ?
ವಿಮಾನಗಳು ಮತ್ತು ಹೆಲಿಕಾಪ್ಟರ್ಗಳಿಗೆ ಹಕ್ಕಿಗಳು ಡಿಕ್ಕಿ ಹೊಡೆಯುವುದು ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ಆ ಅಪಘಾತದ ಗಂಭೀರತೆ ಹಕ್ಕಿಯ ಗಾತ್ರ ಮತ್ತು ವಿಮಾನದ ವೇಗದ ಮೇಲೆ ಅವಲಂಬಿತವಾಗಿರುತ್ತದೆ. ನಿಧಾನವಾಗಿ ಸಾಗುತ್ತಿರುವ ಹೆಲಿಕಾಪ್ಟರ್ಗೆ ಸಣ್ಣ ಗಾತ್ರದ ಹಕ್ಕಿ ಡಿಕ್ಕಿ ಹೊಡೆದರೆ ಅದರಿಂದ ಗಂಭೀರವಾದ ಅಪಾಯ ತಲೆದೋರುವ ಸಾಧ್ಯತೆಗಳು ಕಡಿಮೆ. ಆದರೆ, ವೇಗವಾಗಿ ಚಲಿಸುವ ವಿಮಾನಕ್ಕೆ ದೊಡ್ಡ ಗಾತ್ರದ ಹಕ್ಕಿಯೇನಾದರೂ ಡಿಕ್ಕಿ ಹೊಡೆದರೆ ಅದು ಗಂಭೀರ ಸಮಸ್ಯೆ ತಂದೊಡ್ಡಬಹುದು. ಕೆಲವೊಂದು ಸಂದರ್ಭಗಳಲ್ಲಿ ವಿಮಾನ ಪತನ ಹೊಂದುವ ಅಪಾಯವೂ ಉಂಟಾಗಬಹುದು.
ಇದನ್ನೂ ಓದಿ- 1980ರ ದಶಕದ ಎಚ್ಜಿಯು-55/ಪಿ ಹೆಲ್ಮೆಟ್ಗೆ ಮುಕ್ತಿ: ಈಗಾಗಲೇ ಲಗ್ಗೆಯಿಟ್ಟಿವೆ 4+ ತಲೆಮಾರಿನ ಮಿಲಿಟರಿ ಪೈಲಟ್ ಹೆಲ್ಮೆಟ್ಗಳು
2009ರಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರದಿಂದ ನಾರ್ತ್ ಕ್ಯಾರೋಲಿನದ ಚಾರ್ಲೋಟ್ ನಗರಕ್ಕೆ ಪ್ರಯಾಣ ಬೆಳೆಸಿದ್ದ ಯುಎಸ್ ಏರ್ವೇಸ್ ವಿಮಾನಕ್ಕೆ ಹೆಬ್ಬಾತುಗಳ ಗುಂಪು ಡಿಕ್ಕಿ ಹೊಡೆದ ಪರಿಣಾಮವಾಗಿ ವಿಮಾನದ ಎರಡು ಇಂಜಿನ್ಗಳೂ ವಿಫಲವಾಗಿ, ಅದನ್ನು ಹಡ್ಸನ್ ನದಿಯಲ್ಲಿ ತುರ್ತು ಭೂಸ್ಪರ್ಶ ನಡೆಸಲಾಯಿತು. ವಿಮಾನದಲ್ಲಿದ್ದ ಎಲ್ಲ 155 ಪ್ರಯಾಣಿಕರೂ ಬಚಾವಾಗಿದ್ದರು.
2016ರಲ್ಲಿ, ದುಬೈನಿಂದ ರಷ್ಯಾದ ರೋಸ್ತೊವ್ - ಆನ್ - ಡನ್ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ಸಂಸ್ಥೆಯ ವಿಮಾನ ಹಾರಾಟ ಆರಂಭಿಸಿದ ಕೆಲ ನಿಮಿಷಗಳಲ್ಲೇ ಹಕ್ಕಿಗಳ ಗುಂಪು ಡಿಕ್ಕಿ ಹೊಡೆದ ಪರಿಣಾಮವಾಗಿ ಪತನಗೊಂಡಿತು. ವಿಮಾನದಲ್ಲಿದ್ದ ಎಲ್ಲ 62 ಪ್ರಯಾಣಿಕರು ಸಾವನ್ನಪ್ಪಿದರು.
ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಸುರಕ್ಷತೆಗೆ ಹಕ್ಕಿಗಳ ಡಿಕ್ಕಿ ಒಂದು ಕಳವಳಕಾರಿ ಅಂಶವಾಗಿದೆ. ಪೈಲಟ್ಗಳಿಗೆ ಹಕ್ಕಿಗಳ ಗುಂಪನ್ನು ತಪ್ಪಿಸಿ ಹಾರಾಟ ನಡೆಸಲು ತರಬೇತಿ ನೀಡಲಾಗಿರುತ್ತದೆ. ಅದರೊಡನೆ, ವಿಮಾನಗಳನ್ನೂ ಹಕ್ಕಿಗಳ ದಾಳಿಯಿಂದ ಹೆಚ್ಚು ಅಪಾಯಕ್ಕೆ ಒಳಗಾಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ, ಹಕ್ಕಿಗಳು ಡಿಕ್ಕಿ ಹೊಡೆಯುವುದು ಇಂದಿಗೂ ಅಪಾಯಕಾರಿಯಾಗಿದೆ. ಪೈಲಟ್ಗಳು ಪ್ರತಿ ಹಾರಾಟದ ಸಂದರ್ಭದಲ್ಲೂ ಹಕ್ಕಿಗಳು ಡಿಕ್ಕಿ ಹೊಡೆಯುವುದನ್ನು ಎದುರು ನೋಡುತ್ತಿರಬೇಕಾಗುತ್ತದೆ.
ಇದನ್ನೂ ಓದಿ- ಇಸ್ರೇಲ್, ಪೋಲೆಂಡ್ಗಳ ಸ್ಪರ್ಧೆಯನ್ನು ಮಣಿಸಲಿವೆ ನಿಖರ ಡ್ರೋನ್ಗಳು
ಹಕ್ಕಿಗಳ ಡಿಕ್ಕಿಯಿಂದ ಉಂಟಾಗುವ ಸಂಭಾವ್ಯ ಅಪಾಯಗಳು:
* ವಿಮಾನದ ಭಾಗಗಳಾದ ರೆಕ್ಕೆಗಳು, ಫ್ಯುಯಲ್ಸೇಜ್, ಹಾಗೂ ಗಾಜುಗಳಿಗೆ ಹಾನಿಯಾಗಬಹುದು.
* ವಿಮಾನದ ಇಂಜಿನ್ ಹಾಳಾಗಿ, ವಿದ್ಯುತ್ ಕೊರತೆ ಉಂಟಾಗಬಹುದು.
* ಪೈಲಟ್ಗೆ ಮುಂದೆ ವೀಕ್ಷಿಸಲು ಸಾಧ್ಯವಿಲ್ಲದಂತಾಗಿ, ವಿಮಾನದ ಮೇಲಿನ ನಿಯಂತ್ರಣ ಕಳೆದುಕೊಳ್ಳುವಂತಾಗಬಹುದು.
* ಕೆಲವು ಸಂದರ್ಭಗಳಲ್ಲಿ, ಹಕ್ಕಿ ಡಿಕ್ಕಿ ಹೊಡೆದ ಪರಿಣಾಮವಾಗಿ ವಿಮಾನ ಪತನ ಹೊಂದುವ ಸಾಧ್ಯತೆಗಳಿರುತ್ತವೆ.
ಹಕ್ಕಿಗಳು ಡಿಕ್ಕಿಯಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಉಪಾಯಗಳು:
>> ಹಕ್ಕಿಗಳು ಸಾಮಾನ್ಯವಾಗಿ ಗುಂಪಾಗಿ ಹಾರಾಟ ನಡೆಸುತ್ತವೆ ಎಂದು ತಿಳಿದಿರುವ ಜಾಗಗಳಾದ ವಿಮಾನ ನಿಲ್ದಾಣಗಳು, ಜವುಗುಗಳಲ್ಲಿ ಹಾರಾಟ ನಡೆಸುವುದನ್ನು ತಪ್ಪಿಸುವುದು.
>> ಹಕ್ಕಿಗಳು ಹಾರಾಟ ನಡೆಸಲು ಸಾಧ್ಯವಾಗದ ಎತ್ತರದಲ್ಲಿ ಹಾರಾಟ ನಡೆಸುವುದು.
>> ಹಕ್ಕಿಗಳ ಗುಂಪಿನ ಚಲನವಲನಗಳನ್ನು ತಿಳಿಯಲು ರೇಡಾರ್ ಬಳಕೆ ಮಾಡುವುದು.
>> ಹಕ್ಕಿ ಡಿಕ್ಕಿಯಾಗುವುದರಿಂದ ತಡೆಯಲು ಬೇಕಾದ ರಕ್ಷಣಾ ಉಪಕರಣಗಳನ್ನು ಅಳವಡಿಸುವುದು.
ಇಂತಹ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಪೈಲಟ್ಗಳು ಹಕ್ಕಿಗಳು ಡಿಕ್ಕಿಯಾಗುವ ಅಪಾಯಗಳನ್ನು ಕಡಿಮೆಗೊಳಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.