ಮುಂದಿನ ವಾರ ಈ ರಾಶಿಯವರಿಗೆ ಅದೃಷ್ಟ ! ನಿರೀಕ್ಷಿಸದ ರೀತಿಯಲ್ಲಿ ಒದಗಿ ಬರುವುದು ಹಣ

Weekly Horoscope : ಕೆಲವು ರಾಶಿಯವರಿಗೆ ಮುಂಬರುವ ವಾರ ಅದ್ಭುತವಾಗಿರುತ್ತದೆ. ಕೆಲವು ರಾಶಿಯವರಿಗೆ ಮೇ ತಿಂಗಳ ಕೊನೆಯ ವಾರ ಮತ್ತು ಜೂನ್ ಆರಂಭ ಅದೃಷ್ಟದಾಯಕವಾಗಿರಲಿದೆ. ಗ್ರಹಗಳ ಸ್ಥಾನ  ಬದಲಾವಣೆ ಈ ರಾಶಿಯವರ ಅದೃಷ್ಟ ಬದಲಾಗುವುದು.

Written by - Ranjitha R K | Last Updated : May 26, 2023, 03:17 PM IST
  • ಮುಂದಿನ ದಿನಗಳಲ್ಲಿ ಗ್ರಹಗಳ ಸಂಚಾರದಲ್ಲಿ ಬದಲಾವಣೆ
  • 4 ರಾಶಿಯವರ ಜೀವನದಲ್ಲಿ ಶುಭ ಫಲ
  • ಈ ವಾರದ ಅದೃಷ್ಟದ ರಾಶಿಗಳು
 ಮುಂದಿನ ವಾರ ಈ ರಾಶಿಯವರಿಗೆ ಅದೃಷ್ಟ ! ನಿರೀಕ್ಷಿಸದ ರೀತಿಯಲ್ಲಿ ಒದಗಿ ಬರುವುದು ಹಣ  title=

ಬೆಂಗಳೂರು : Weekly Horoscope : ಜ್ಯೋತಿಷ್ಯದ ಪ್ರಕಾರ, ಮುಂದಿನ ದಿನಗಳಲ್ಲಿ ಗ್ರಹಗಳ ಸಂಚಾರದಲ್ಲಿ ಬದಲಾವಣೆಯಾಗಲಿದೆ. ಇದು 4 ರಾಶಿಯವರ ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಮೇ ತಿಂಗಳ ಕೊನೆಯಲ್ಲಿ, ಅಂದರೆ ಮೇ 30 ರಂದು, ಸಂಪತ್ತು ಮತ್ತು ಐಷಾರಾಮಿ ಅಂಶವಾದ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಆದರೆ, ಈ ಸಮಯದಲ್ಲಿ ಮಂಗಳನು ​​ಕರ್ಕಾಟಕ ರಾಶಿಯಲ್ಲಿರುತ್ತಾನೆ. ಶನಿಯು ಕುಂಭ ರಾಶಿಯಲ್ಲಿರುತ್ತಾನೆ. ಈ ರೀತಿಯಾಗಿ, ಮೇ ಅಂತ್ಯ ಮತ್ತು ಜೂನ್ ಆರಂಭದಲ್ಲಿ ಗ್ರಹಗಳ ಸ್ಥಾನವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, 4 ರಾಶಿಯವರಿಗೆ ಇದು ಅತ್ಯಂತ ಮಂಗಳಕರ ಸಮಯವಾಗಿರಲಿದೆ. ಮೇ 28 ರಿಂದ ಜೂನ್ 4, 2023 ರವರೆಗೆ ಯಾವ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲು ಹರಿಯಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. 

ಈ ವಾರದ ಅದೃಷ್ಟದ ರಾಶಿಗಳು : 
ಮೇಷ ರಾಶಿ : ಮೇಷ ರಾಶಿಯವರಿಗೆ ಮುಂಬರುವ ವಾರ ಶುಭ ಫಲ ನೀಡಲಿದೆ. ಲಕ್ಷ್ಮೀ ದೇವಿಯ ಕೃಪೆಯಿಂದ ಮೇಷ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ. ನಿಮಗೆ ಗೊತ್ತಿಲ್ಲದ ಮೂಲದಿಂದ ಧನ ಪ್ರಾಪ್ತಿಯಾಗುವುದು. ಆದಾಯದಲ್ಲಿ ಹೆಚ್ಚಳವಾಗಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರಸ್ಥರ ಲಾಭ ಹೆಚ್ಚಾಗಲಿದೆ. 

ಇದನ್ನೂ ಓದಿ : Friday Remedies: ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಇಂದೇ ಈ ಕೆಲಸ ಮಾಡಿ

ವೃಷಭ ರಾಶಿ : ವೃಷಭ ರಾಶಿಯವರ ಎಲ್ಲಾ ಕೆಲಸಗಳು ವೇಗವಾಗಿ ನೆರವೇರಲಿವೆ. ನಿಮ್ಮ ಜೀವನದ ಪ್ರಮುಖ ಕೆಲಸ ಈ ಸಂದರ್ಭದಲ್ಲಿ ನೆರವೇರಲಿದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ವೇತನದಲ್ಲಿ ಗಣನೀಯವಾಗಿ ಹೆಚ್ಚಳವಾಗಬಹುದು. ನಿಮ್ಮ ಕನಸು ನನಸಾಗುವ ಕಾಲವಿದು.  

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನಿಮ್ಮ ಕೆಲಸ ಶೀಘ್ರವಾಗಿ ಪೂರ್ಣಗೊಳ್ಳಲಿದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಉದ್ಯೋಗ-ವ್ಯವಹಾರದಲ್ಲಿಯೂ ಪರಿಸ್ಥಿತಿ ಉತ್ತಮವಾಗಿರುತ್ತದೆ. 

ಇದನ್ನೂ ಓದಿ : Budha Asta: ವೃಷಭ ರಾಶಿಯಲ್ಲಿ ಅಸ್ತಮಿಸಲಿರುವ ಬುಧ ಈ ರಾಶಿಯವರ ವೃತ್ತಿ ಬದುಕಿನಲ್ಲಿ ಭಾರೀ ನಷ್ಟ
 
ಧನು ರಾಶಿ :
ಮೇ ತಿಂಗಳ ಕೊನೆಯ ವಾರ ಮತ್ತು ಜೂನ್ ಆರಂಭವು ಧನು ರಾಶಿಯವರಿಗೆ ಪ್ರಚಂಡವಾಗಿರುತ್ತದೆ. ಆರ್ಥಿಕವಾಗಿ ಸದೃಢರಾಗುವಿರಿ. ಹೊಸ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆ ಇರಲಿದೆ. ಈ ಸಮಯವು ಉದ್ಯಮಿಗಳಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News