ಅಪ್ಪ-ಅಮ್ಮನ ಕನಸು, ತಮ್ಮನ ಮೇಲಿನ‌ ಪ್ರೀತಿ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್..!

DK Shivakumar : ವಿಕೇಂಡ್‌ ವಿಥ್ ರಮೇಶ್‌ ಸೀಸನ್‌-5 ರ 100 ನೇ ಅತಿಥಿಯಾಗಿ ಕರ್ನಾಟಕದ ಉಪಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್‌ ಆಗಮಿಸಿದ್ದಾರೆ. ಅವರು ತಮ್ಮ ರಾಜಕೀಯ ಜೀವನ ಹಾಗೂ ವೈಯಕ್ತಿಕ ಜೀವನ ಹೋರಾಟ ತಮ್ಮ ರಾಜಕೀಯದ ಹಿನ್ನಲೆ ಕುರಿತು ವೀಕೆಂಡ್‌ ವಿಥ್‌ ರಮೇಶ್‌ ರಮೇಶ್‌ನಲ್ಲಿ ಹಂಚಿಕೊಂಡಿದ್ದಾರೆ.  

Written by - Savita M B | Last Updated : Jun 7, 2023, 10:28 AM IST
  • ಅಭಿಮಾನಿಗಳಿಗೆ ಡಿಕೆ ಶಿವಾಕುಮಾರ್ ಯಾವಾಗ ವೀಕೆಂಡ್‌ ವಿಥ್‌ ರಮೇಶ್‌ನ ಸಾಧಕರ ಸೀಟ್‌ನಲ್ಲಿ ಕೂರುತ್ತಾರೆ ಎನ್ನುವ ಕುತೂಹಲವಿತ್ತು
  • ಅದರಂತೆ ಅವರು ಈ ವಾರವೇ ಆಗಮಿಸಿದ್ದು ಅದೇ ಸಂಚಿಕೆ ಪ್ರಸಾರವಾಗುತ್ತಿದೆ.
  • ಈಗಾಗಲೇ ಜೀ ಕನ್ನಡ ಅಧಿಕೃತವಾಗಿ ಎರಡು ಪ್ರೋಮೋಗಳನ್ನು ಬಿಡುಗಡೆಮಾಡಿದೆ
ಅಪ್ಪ-ಅಮ್ಮನ ಕನಸು, ತಮ್ಮನ ಮೇಲಿನ‌ ಪ್ರೀತಿ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್..! title=

Weekend With Ramesh : ಅಭಿಮಾನಿಗಳಿಗೆ ಡಿಕೆ ಶಿವಾಕುಮಾರ್ ಯಾವಾಗ ವೀಕೆಂಡ್‌ ವಿಥ್‌ ರಮೇಶ್‌ ಕಾರ್ಯಕ್ರಮದ ಸಾಧಕರ ಸೀಟ್‌ನಲ್ಲಿ ಕೂರುತ್ತಾರೆ ಎನ್ನುವ ಕುತೂಹಲವಿತ್ತು. ಅದರಂತೆ ಅವರು ವಿಕೇಂಡ್ ವಿಥ್‌ ರಮೇಶ್‌ ಸೀಸನ್-5ಗೆ ಆಗಮಿಸಿದ್ದಾರೆ. ಈಗಾಗಲೇ ಜೀ ಕನ್ನಡ ಅಧಿಕೃತವಾಗಿ ಎರಡು ಪ್ರೋಮೋಗಳನ್ನು ಬಿಡುಗಡೆಮಾಡಿದ್ದು, ಅಭಿಮಾನಿಗಳಲ್ಲಿ ಕಾತುರ ಹೆಚ್ಚಿಸಿದೆ. 

ಡಿಕೆ ಶೀವಕುಮಾರ್‌ ಅವರು ರಾಜಕೀಯ ಕಣಕ್ಕೆ ಕಾಲಿಟ್ಟಿದ್ದು, ಅವರಿಗೆ ರಾಜಕೀಯದಲ್ಲಿ ಆಸಕ್ತಿ ಮೂಡಿದ್ದು ಹೇಗೆ? ಅವರ ಜೀವನದ ಹಲವಾರು ಅಂಶಗಳನ್ನು ತಿಳಿದುಕೊಳ್ಳಲು ಸಾವಿರಾರು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 

ಸದ್ಯಕ್ಕೆ ಜೀ ಕನ್ನಡ ಎರಡನೇ ಪ್ರೋಮೋವನ್ನು ರಿಲೀಸ್‌ ಮಾಡಿದೆ. ಅದರಲ್ಲಿ ಡಿಕೆ ಶಿವಕುಮಾರ್‌ ಅವರ ತಂದೆ, ತಾಯಿ ಹಾಗೂ ತಮ್ಮನ ಕುರಿತು ಮನದಾಳದ ಮಾತುಗಳನ್ನಾಡಿದ್ದಾರೆ. ಡಿಕೆ ಸುರೇಶ್‌ ಯಾವಾಗಲೂ ಡಿಕೆ ಶಿವಕುಮಾರ್‌ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾರೆ ಎನ್ನುವುದನ್ನು ನಿರ್ದಶನದೊಂದಿಗೆ ಕರ್ನಾಟಕದ ಜನತೆ ಕಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

ಇದನ್ನೂ ಓದಿ-400 ಸಂಚಿಕೆಗಳ ಗಡಿ ದಾಟಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ; ಹೊಸ ತಿರುವು

ಸುರೇಶ್‌ ನನ್ನ ತಮ್ಮನಲ್ಲ ನನ್ನ ಮಗ 
ಡಿಕೆ ಶಿವಕುಮಾರ್‌ ಅವರು ಅವರ ತಮ್ಮ ಡಿಕೆ ಸುರೇಶ್‌ ಅವರ ಭಾಂದವ್ಯವನ್ನು ನೋಡು ಅವರ ಅಭಿಮಾನಿಗಳು ಮತ್ತು ವಿರೋಧ ಪಕ್ಷದವರು ಅವರನ್ನು ರಾಮ ಲಕ್ಷ್ಮನ ಎಂದೇ ಕರೆಯುತ್ತಾರೆ. ರಾಮನಿಗೆ ಲಕ್ಷ್ಮಣ ಪ್ರತಿ ಹೆಜ್ಜೆಯಲ್ಲೂ ಜೊತೆ ಇರುವಂತೆ ಸುರೇಶ್‌ ಶಿವಕುಮಾರ್‌ ಅವರೊಂದಿಗೆ ಇದ್ದಾರೆ. ಡಿಕೆ ಶೀವಕುಮಾರ್‌ ಅವರು ತಮ್ಮನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಸುರೇಶ್‌ ನನಗೆ ತಮ್ಮನಲ್ಲ ನನ್ನ ಮಗ ಎಂದು ಎಲ್ಲರ ಎದುರು ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

ಡಿ ಕೆಶಿವಕುಮಾರ್‌ ಅವರ ತಾಯಿ ಗೌರಮ್ಮ ವೀಕೆಂಡ್‌ ವಿಥ್‌ ರಮೇಶ್‌ಗೆ ಆಗಮಿಸಿದ್ದಾರೆ. ಅವರಿಗೆ ಇರುವ ಮಗನ ಮೇಲಿನ ಪ್ರೀತಿಯನ್ನು ವೇದಿಕೆ ಮೇಲೆ ವ್ಯಕ್ತಪಡಿಸಿದ್ದಾರೆ. ನನಗೆ ಎರಡು ವರ್ಷ ಮಕ್ಕಳಿರಲಿಲ್ಲ ನಂತರ ದೇವರ ಹರಕೆ ಕಟ್ಟಿಕೊಂಡ ಮೇಲೆ ಶಿವಕುಮಾರ್‌ ಜನಿಸಿದ ಎಂದು ಡಿಕೆ ಶೀವಕುಮಾಋ ಅವರ ತಾಯಿ ಭಾವುಕರಾದರು.  ನನ್ನ ತಂದೆ ನನಗೆ ಓದಿಸಬೇಕು ಎಂದು ದೊಡ್ಡ ಕನಸು ಕಂಡಿದ್ದರು, ಆದರೆ ನನಗೆ ಹೆಚ್ಚಾಗಿ ಓದಲು ಸಾಧ್ಯವಾಗಲಿಲ್ಲ ಎಂದು ಶಿವಕುಮಾರ್‌ ಅವರು ತಮ್ಮ ಶಿಕ್ಷಣದ ಕುರಿತು ಮಾತನಾಡಿದರು.

ನಾವು ಮೂರು ಜನ ಮಕ್ಕಳು ಸೇರುಇ ಒಟ್ಟಾಗಿ ಇರಲಿಲ್ಲ ಎಂದು ಡಿಕೆ ಶಿವಕುಮಾರ್‌ ಹೇಳಿದರು. ನನ್ನ ಅಂತರಾತ್ಮ ಇನ್ನು ಕೆಲವರಿಗೆ ಗೊತ್ತಿಲ್ಲ, ಎಂದು ವೇದಿಕೆಯ ಮೇಲೆ ಭಾವುಕರಾದರು. ಡಿಕೆ ಸುರೇಶ್‌ ಅವರನ್ನು ಡಿಕೆ ಶಿವಕುಮಾರ್‌ ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ. 

ಇದನ್ನೂ ಓದಿ-Swara Bhasker: ಮದುವೆ ಆಗಿ ಮೂರೂವರೆ ತಿಂಗಳಿಗೆ.. 4 ತಿಂಗಳ ಗರ್ಭಿಣಿಯಾದ ಸ್ವರಾ ಭಾಸ್ಕರ್! ಇದು ಹೇಗೆ ಸಾಧ್ಯ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News