400 ಸಂಚಿಕೆಗಳ ಗಡಿ ದಾಟಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ; ಹೊಸ ತಿರುವು

Puttakkana Makkalu : ಕಿರುತೆರೆಯಲ್ಲಿ ಎಲ್ಲರ ಮನಗೆದ್ದ ಜನಪ್ರಿಯ ಧಾರಾವಾಹಿ ʼಪುಟ್ಟಕ್ಕನ ಮಕ್ಕಳುʼ ಅದ್ಭುತವಾಗಿ ಮೂಡಿಬರುತ್ತಿದೆ. ಧಾರವಾಹಿ ಇದೀಗ 400 ಸಂಚಿಕೆಗಳನ್ನು ಪೊರೈಸಿದ್ದು, ಇಡೀ ಧಾರವಾಹಿ ತಂಡವೆ ಸಂತಸದಲ್ಲಿ ಮುಳುಗಿದೆ. ಜೊತೆಗೆ ಈ ಧಾರಾವಾಹಿ ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.   

Written by - Savita M B | Last Updated : Jun 7, 2023, 08:28 AM IST
  • ಜನಪ್ರಿಯ ಧಾರಾವಾಹಿ ʼಪುಟ್ಟಕ್ಕನ ಮಕ್ಕಳುʼ ಅದ್ಭುತವಾಗಿ ಮೂಡಿಬರುತ್ತಿದೆ
  • ಧಾರವಾಹಿ ಇದೀಗ 400 ಸಂಚಿಕೆಗಳನ್ನು ಪೊರೈಸಿದೆ.
  • ಜೊತೆಗೆ ಈ ಧಾರಾವಾಹಿ ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
400 ಸಂಚಿಕೆಗಳ ಗಡಿ ದಾಟಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ; ಹೊಸ ತಿರುವು  title=

Kannada Serial : ಪುಟ್ಟಕ್ಕನ ಮಕ್ಕಳು ಧಾರವಾಹಿಯ ಪುಟ್ಟಕ್ಕನ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅವರು ನಟಿಸಿದ್ದು, ಪಾತ್ರಕ್ಕೆ ಜೀವ ತುಂಬಿದ ಅವರು ಕನ್ನಡಿಗರ ಮನೆಮಾತಾಗಿದ್ದಾರೆ. ಜೊತೆಗೆ ಈ ಅದ್ಭುತವಾದ ಧಾರವಾಹಿ ವೀಕ್ಷಕರ ಮೆಚ್ಚಿನ ಕಥೆ ಎಂದು ಕರೆಸಿಕೊಂಡಿದೆ. ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7:30ಕ್ಕೆ ಪ್ರಸಾರವಾಗುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು.

ಈ ಧಾರಾವಾಹಿಯನ್ನು ನೋಡಲು ಜನ ಕಾತೂರದಿಂದ ಕಾಯುತ್ತಿರುತ್ತಾರೆ. ಗಡ ಬಿಟ್ಟು ಹೋದರೂ ಪುಟ್ಟಕ್ಕ ತನ್ನ ಮೂರು ಹೆಣ್ಣು ಮಕ್ಕಳನ್ನು ಕೊರತೆ ಬಾರದಂತೆ ಸಾಕುತ್ತಿದ್ದಾಳೆ. ಆಕೆ ಆಮ ಮಕ್ಕಳ ಏಳು ಬೀಳುಗಳಿಗೆ ಹೆಗಲಾಗಿ ನಿಂತು ಇಬ್ಬರು ಮಕ್ಕಳನ್ನು ಚೆನ್ನಾಗಿ ಒದಿಸುತ್ತಾಳೆ. ಹಾಗೆಐೇ ತ್ಯಾಗಮಯಿಯಾದ ತನ್ನ ತಾಯಿಗೆ ಸಹಾಯ ಮಾಡಲು ಮೊದಲ ಮಗಳು ಸಹನಾ ತನ್ನ ಆಸೆಗಳನ್ನೇ ಬದಿಗೊತ್ತಿದ್ದಾಳೆ.

ಇದನ್ನೂ ಓದಿ-ಸುಮಲತಾ ಅವರ ಧಾರವಾಡದ ವಿಶೇಷ ಅಭಿಮಾನಿಗೂ ಬಂತು ಅಭಿಷೇಕ ಆರತಕ್ಷತೆ ಆಮಂತ್ರಣ!

ಧಾರಾವಾಹಿಯಲ್ಲಿ ರಾಜೇಶ್ವರಿ ಈಕೆ ವಿಲನ್‌ ಇವಳ ಕಾಟದಿಂದ ಹೊರಗೆಬರಲು ಪುಟ್ಟಕ್ಕ ಹರಸಾಹಸ ಪಡುತ್ತಿದ್ದಾಳೆ. ಇದೀಕ ಪುಟ್ಟಕ್ಕ ತನ್ನ ಮೊದಲ ಮಗಳು ಸಹನಾ ಮದುವೆಯನ್ನು ಮುರುಳಿ ಮೇಷ್ಟ್ರು ಜೊತೆ ಆಗಿದೆ. ಆಧರೆ ಸ್ನೇಹಾ ಕಂಠಿ ಮದುವೆ ಮಾತ್ರ ನಡೆಯುತ್ತಾ ಎಂಬುವುದು ಎಲ್ಲರ ಪ್ರಶ್ನೆ. ಆದರೆ ಸದ್ಯಕ್ಕೆ ಧಾವಾವಾಹಿಯಲ್ಲಿ ಬಿಗ್‌ ಟ್ವಿಸ್ಟ್‌ ಇರಲಿದೆ. ಸ್ನೇಹಾ ಜೀವನದಲ್ಲಿ ಭುನ್‌ ಬಂದರೆ ಕಂಠಿ ಜೀವನದಲ್ಲಿ ರಾಧ ಎಂಟ್ರಿ ಆಗಿದ್ದಾರೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿ ದಿನಕ್ಕೊಂದು ತಿರುವಿನಿಂದ ಕುತೂಹಲ ಮೂಡಿಸುತ್ತಾ ಬಂದಿದೆ. ಸದ್ಯಕ್ಕೆ 400 ಸಂಚಿಕೆಗಳ ಸಂಭ್ರಮದಲ್ಲಿರುವ ಧಾರಾವಾಹಿ ತಂಡದಿಂದ ಅಭಿಮಾನಿಗಳು ಇನ್ನು ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ಕಂಠಿ ಬಂಗಾರಮ್ಮನ ಮಗ ಎಂದು ಸ್ನೇಹಾಗೆ ತಿಳಿದಾಗ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ, ಅವರ ರಿಯಾಕ್ಷನ್‌ ಹೇಗಿರುತ್ತೆ ಅನ್ನೊದೆ ಕುತೂಹಲಕಾರಿಯಾದ ವಿಷಯ. 

ಇದನ್ನೂ ಓದಿ-Swara Bhasker: ಮದುವೆ ಆಗಿ ಮೂರೂವರೆ ತಿಂಗಳಿಗೆ.. 4 ತಿಂಗಳ ಗರ್ಭಿಣಿಯಾದ ಸ್ವರಾ ಭಾಸ್ಕರ್! ಇದು ಹೇಗೆ ಸಾಧ್ಯ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News