Monika Bhadoriya: ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ನಿರ್ಮಾಪಕರ ವಿರುದ್ಧ ಜೆನ್ನಿಫರ್ ಬನ್ಸಿವಾಲ್ ಹೇಳಿಕೆಯ ನಂತರ, ಮೋನಿಕಾ ಬದೌರಿಯಾ ನಿರ್ಮಾಪಕ ಅಸಿತ್ ಕುಮಾರ್ ಮೋದಿ ಬಗ್ಗೆ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಜನಪ್ರಿಯ ಸಿಟ್ಕಾಮ್ನಲ್ಲಿ ಶ್ರೀಮತಿ ಅಂಜಲಿ ಸೋಧಿ ಪಾತ್ರವನ್ನು ನಿರ್ವಹಿಸಿದ ಜೆನ್ನಿಫರ್ ಇತ್ತೀಚೆಗೆ ನಿರ್ಮಾಪಕ ಅಸಿತ್ ಮೋದಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. TMKOC ನಲ್ಲಿ ನಟಿಸುವಾ ಆತ್ಮಹತ್ಯಾ ಆಲೋಚನೆ ಬಂದ ಕುರಿತು ಮೋನಿಕಾ ಭಡೋರಿಯಾ ಕೂಡ ಈಗ ಮಾತನಾಡಿದ್ದಾರೆ
ನಟಿ ಮೋನಿಕಾ ಭಡೋರಿಯಾ ಕೆಲವು ಆರೋಪಗಳನ್ನು ಮಾಡಿದ್ದಾರೆ. ಈ ಸಿರೀಯಲ್ನಲ್ಲಿ ಬಾವ್ರಿ ಪಾತ್ರವನ್ನು ನಿರ್ವಹಿಸಿದ ಮೋನಿಕಾ ಸಂದರ್ಶನವೊಂದರಲ್ಲಿ ಮಾನಾಡಿ, ತನ್ನ ತಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾಗ ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ತಂಡವು ಎಷ್ಟು ಅಸಹಕಾರವಾಗಿತ್ತು ಎಂಬುದನ್ನು ಬಹಿರಂಗಪಡಿಸಿದರು.
ಇದನ್ನೂ ಓದಿ: ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಲುಕ್ಗೆ ಪಡ್ಡೆಹುಡುಗರ ಮನಸ್ಸು ಪೀಸ್ ಪೀಸ್..!
ಮೋನಿಕಾ ಅವರು ಶೋನಲ್ಲಿ ಕೆಲಸ ಮಾಡುವಾಗ ಚಿತ್ರಹಿಂಸೆ ಅನುಭವಿಸಿದ್ದರಂತೆ. ಇದರಿಂದ ಅವರಿಗೆ ಆತ್ಮಹತ್ಯೆಯ ಆಲೋಚನೆಗಳು ಬುತ್ತಿದ್ದವಂತೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ನಾನು ಸಾಕಷ್ಟು ಕೌಟುಂಬಿಕ ದುರಂತಗಳನ್ನು ಎದುರಿಸಿದ್ದೇನೆ. ನಾನು ಬಹಳ ಕಡಿಮೆ ಅವಧಿಯಲ್ಲಿ ನನ್ನ ತಾಯಿ ಮತ್ತು ಅಜ್ಜಿ ಇಬ್ಬರನ್ನು ಕಳೆದುಕೊಂಡೆ. ಅವರಿಬ್ಬರೂ ನನ್ನ ಜೀವನದ ಆಧಾರಸ್ತಂಭಗಳು. ಅವರು ನನ್ನನ್ನು ತುಂಬಾ ಚೆನ್ನಾಗಿ ಬೆಳೆಸಿದರು. ಅವರ ಅಗಲಿಕೆಯನ್ನು ನಿಭಾಯಿಸಲು ನನಗೆ ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನನ್ನ ಜೀವನವೇ ಮುಗಿಯಿತು ಎಂಬಂತೆ ಭಾಸವಾಗಿತ್ತು ಎಂದಿದ್ದಾರೆ.
ಈ ಸಮಯದಲ್ಲಿ, ನಾನು ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ತುಂಬಾ ಚಿತ್ರಹಿಂಸೆ ಅನುಭವಿಸಿದೆ. ಹಾಗಾಗಿ ಈ ಎಲ್ಲಾ ಚಿತ್ರಹಿಂಸೆ ಮತ್ತು ನೋವುಗಳಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದೆ. ಅವಳ ತಂದೆ ನಿಧನರಾದರು, ಆಗ ನಾವು ಹಣವನ್ನು ನೀಡಿದ್ದೇವೆ. ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯ ತಾಯಿಗೆ ಚಿಕಿತ್ಸೆ ಕೊಡಿಸಲು ಹಣ ನೀಡಿದ್ದೇವೆ ಎಂದು ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ತಯಾರಕರು ಹೇಳಿದ್ದು, ನನ್ನನ್ನು ಆಳವಾಗಿ ನೋಯಿಸಿತ್ತು ಎಂದಿದ್ದಾರೆ.
ಇದನ್ನೂ ಓದಿ:ಆದಿಪುರುಷ ಸಿನಿಮಾ ಪ್ರಿ ಬುಕಿಂಗ್ ಈ ದಿನದಿಂದ ಪ್ರಾರಂಭ!?
ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ಸೆಟ್ನಲ್ಲಿ ಕೆಟ್ಟದಾಗಿ ನಡೆಸಿಕೊಂಡ ಬಳಿಕ ಈ ಸೀರಿಯಲ್ ತೊರೆಯಲು ಬಯಸಿದ್ದರು ಎಂದು ಹೇಳಿದ್ದಾರೆ. ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ತಯಾರಕರು ಟಿವಿಯಲ್ಲಿ ದೀರ್ಘಾವಧಿಯ ಸಿರೀಯಲ್ಗಳಲ್ಲಿ ಒಂದಾಗಿದೆ. ಈ ಧಾರಾವಾಹಿಯು ಕಳೆದ 15 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಇದು ಸಬ್ ಟಿವಿಯಲ್ಲಿ ಪ್ರಸಾರವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.