Parents Alert! ಆನ್ಲೈನ್ ಗೇಮ್ ಆಡಿ 52 ಲಕ್ಷ ರೂ. ಉಡಾಯಿಸಿದ 13 ವರ್ಷದ ಬಾಲಕಿ, 5 ರೂ.ಗಳಿಗೆ ಕುಸಿದ ತಾಯಿಯ ಖಾತೆಯ ಬ್ಯಾಲೆನ್ಸ್

Parents Alert! ಮಕ್ಕಳಲ್ಲಿ ಆನ್‌ಲೈನ್ ಮೊಬೈಲ್ ಆಟದ ಗೀಳು ಕೆಲವೊಮ್ಮೆ ಪೋಷಕರನ್ನು ಕೆಲವು ದೊಡ್ಡ ಅಪಾಯಕ್ಕೆ ತಳ್ಳಬಹುದು ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ.  

Written by - Nitin Tabib | Last Updated : Jun 10, 2023, 08:03 PM IST
  • ಖರ್ಚಿನ ಬಗ್ಗೆ ತಂದೆ ಹುಡುಗಿಯನ್ನು ಪ್ರಶ್ನಿಸಿದಾಗ, ಅವಳು ಆನ್‌ಲೈನ್ ಮೊಬೈಲ್ ಗೇಮ್‌ಗಳಿಗಾಗಿ 120,000 ಯುವಾನ್ (ಯುಎಸ್ $ 17,000) ಮತ್ತು
  • 210,000 ಯುವಾನ್ (ಸುಮಾರು ರೂ 24,39,000) ಅನ್ನು ಆಟದಲ್ಲಿನ ಖರೀದಿಗಳಿಗಾಗಿ ಖರ್ಚು ಮಾಡಿದ್ದಾಳೆ ಎಂಬುದನ್ನೂ ಒಪ್ಪಿಕೊಂಡಿದ್ದಾಳೆ.
  • ಅಷ್ಟೇ ಅಲ್ಲ ಆಕೆ ತನ್ನ 10 ಸ್ನೇಹಿತರಿಗಾಗಿ ಆಟಗಳನ್ನು ಖರೀದಿಸಲು 100,000 ಯುವಾನ್ (ಸುಮಾರು 11,61,000 ರೂ.) ಖರ್ಚು ಮಾಡಿರುವುದಾಗಿ ಹೇಳಿದ್ದಾಳೆ.
Parents Alert! ಆನ್ಲೈನ್ ಗೇಮ್ ಆಡಿ 52 ಲಕ್ಷ ರೂ. ಉಡಾಯಿಸಿದ 13 ವರ್ಷದ ಬಾಲಕಿ, 5 ರೂ.ಗಳಿಗೆ ಕುಸಿದ ತಾಯಿಯ ಖಾತೆಯ ಬ್ಯಾಲೆನ್ಸ್ title=

Parents Alert! ಈ ಸುದ್ದಿ ವಿಶೇಷವಾಗಿ ಮಕ್ಕಳ ಪೋಷಕರಿಗೆ. ಮಕ್ಕಳಲ್ಲಿ ಆನ್‌ಲೈನ್ ಮೊಬೈಲ್ ಆಟದ ಗೀಳು ಕೆಲವೊಮ್ಮೆ ನಿಮ್ಮನ್ನು ಕೆಲವು ದೊಡ್ಡ ಅಪಾಯಕ್ಕೆ ತಳ್ಳಬಹುದು ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಚೀನಾದಲ್ಲಿ ಅಂತಹದ್ದೊಂದು ಘಟನೆ ಬೆಳಕಿಗೆ ಬಂದಿದೆ.  13 ವರ್ಷದ ಬಾಲಕಿಯೊಬ್ಬಳು ಆನ್‌ಲೈನ್ ಮೊಬೈಲ್ ಆಟಗಳಿಗೆ ಯಾವ ಮಟ್ಟಕ್ಕೆ ಅಂಟಿಕೊಂಡಿದ್ದಳು ಎಂದರೆ, ಅವಳು ತನ್ನ ತಾಯಿಯ ಖಾತೆಯಿಂದ 449,500 ಯುವಾನ್ (ಸುಮಾರು 52,19,809 ರೂ.) ಆನ್ಲೈನ್ ಆಟಗಳಲ್ಲಿ ಹೂಡಿಕೆ ಮಾಡಿದ್ದಾಳೆ. ಇದಾದ ಬಳಿಕ ಆಕೆಯ ತಾಯಿಯ ಖಾತೆಯಲ್ಲಿ ಬ್ಯಾಲೆನ್ಸ್ ಉಳಿದಿದ್ದು ಕೇವಲ 0.5 ಯುವಾನ್ (ಸುಮಾರು ರೂ. 5) . ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಈ ಹುಡುಗಿ ಕೇವಲ ನಾಲ್ಕು ತಿಂಗಳಲ್ಲಿ ಇಷ್ಟು ಹಣವನ್ನು ಖರ್ಚು ಮಾಡಿದ್ದಾಳೆ. ಹುಡುಗಿ ತಾನು ಇಷ್ಟು ದೊಡ್ಡ ಮೊತ್ತವನ್ನು ಎಲ್ಲಿ ಖರ್ಚು ಮಾಡಿದ್ದಾಳೆ ಎಂಬುದನ್ನು ತನ್ನ ತಪ್ಪಿನಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ತಾಯಿಯ ಮುಂದೆ ಆತಂಕ ವ್ಯಕ್ತಪಡಿಸಿದ ಬಾಲಕಿಯ ಟೀಚರ್
ವರದಿಯ ಪ್ರಕಾರ, ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಮಾಧ್ಯಮಿಕ ಶಾಲಾ ವಿದ್ಯಾರ್ಥಿನಿ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಗೇಮಿಂಗ್ ಅಪ್ಲಿಕೇಶನ್‌ಗೆ ವ್ಯಸನಿಯಾಗಿ ನಂತರ ತನ್ನ ತಾಯಿಯ ಖಾತೆಯಿಂದ ಹಣವನ್ನು ಕದ್ದಿದ್ದಾಳೆ. ವಾಂಗ್ ಎಂಬ ಉಪನಾಮ ಹೊಂದಿರುವ ಬಾಲಕಿಯ ತಾಯಿಗೆ, ಶಿಕ್ಷಕರೊಬ್ಬರಿಂದ ಆಕೆಗೆ ಕಳ್ಳತನದ ಬಗ್ಗೆ ಮಾಹಿತಿ ಸಿಕ್ಕಿದೆ, ಬಾಲಕಿ ಶಾಲೆಯಲ್ಲಿ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ಕಾರಣ ಹುಡುಗಿ ಆನ್‌ಲೈನ್ ಪೇ-ಟು-ಪ್ಲೇ ಆಟಗಳಿಗೆ ವ್ಯಸನಿಯಾಗಿದ್ದಾಳೆ ಎಂಬುದನ್ನೂ ನಂತರ ಅವರು ಅರಿತುಕೊಂಡಿದ್ದಾರೆ. ಇದಾದ ಬಳಿಕ ತಾಯಿ ತನ್ನ ಖಾತೆಯನ್ನು ಪರಿಶೀಲಿಸಿದಾಗ, ಅವಳ ಕಾಲು ಕೆಳಗಿನ ನೆಲವೆ ಜಾರಿದೆ. ಏಕೆಂದರೆ ಅಷ್ಟೊತ್ತಿಗಾಗಲೇ ಆಕೆಯ ಖಾತೆಯಲ್ಲಿ ಕೇವಲ 5 ರೂಪಾಯಿ ಉಳಿದಿತ್ತು.

ಇದನ್ನೂ ಓದಿ-ICC World Cup 2023 ಹಾಗೂ Asia Cup ಗಳ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಿದೆ ಡಿಸ್ನಿ+ ಹಾಟ್ ಸ್ಟಾರ್

10 ಸ್ನೇಹಿತರಿಗಾಗಿ ಮೊಬೈಲ್ ಗೇಮ್‌ ಗಳನ್ನು ಖರೀದಿಸಿದ ಹುಡುಗಿ
ಖರ್ಚಿನ ಬಗ್ಗೆ ತಂದೆ ಹುಡುಗಿಯನ್ನು ಪ್ರಶ್ನಿಸಿದಾಗ, ಅವಳು ಆನ್‌ಲೈನ್ ಮೊಬೈಲ್ ಗೇಮ್‌ಗಳಿಗಾಗಿ 120,000 ಯುವಾನ್ (ಯುಎಸ್ $ 17,000) ಮತ್ತು 210,000 ಯುವಾನ್ (ಸುಮಾರು ರೂ 24,39,000) ಅನ್ನು ಆಟದಲ್ಲಿನ ಖರೀದಿಗಳಿಗಾಗಿ ಖರ್ಚು ಮಾಡಿದ್ದಾಳೆ ಎಂಬುದನ್ನೂ ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲ ಆಕೆ ತನ್ನ  10 ಸ್ನೇಹಿತರಿಗಾಗಿ ಆಟಗಳನ್ನು ಖರೀದಿಸಲು 100,000 ಯುವಾನ್ (ಸುಮಾರು 11,61,000 ರೂ.) ಖರ್ಚು ಮಾಡಿರುವುದಾಗಿ ಹೇಳಿದ್ದಾಳೆ.

ಇದನ್ನೂ ಓದಿ-Whatsapp ನಲ್ಲಿ ಖಾಸಗಿ ಬ್ರಾಡ್ ಕಾಸ್ಟ್ ಸಂದೇಶ ಇನ್ನೂ ಮತ್ತಷ್ಟು ಸುಲಭ, ವಿಶಿಷ್ಟ ಟೂಲ್ಸ್ ಚಾನೆಲ್ ಪ್ರಸ್ತುತ ಪಡಿಸಿದ ಮೇಟಾ

ಅಗತ್ಯ ಬಿದ್ದಾಗ ಪಾಸ್‌ವರ್ಡ್ ಹೇಳುವುದು ತಾಯಿಗೆ ದುಬಾರಿಯಾಗಿ ಪರಿಣಮಿಸಿದೆ
ಮನೆಯಲ್ಲಿ ಹಣ ಹೇಗೆ ಬರುತ್ತದೆ ಎಂಬುದರ ಕುರಿತು ತನಗೆ ಹೆಚ್ಚೆನು ಮಾಹಿತಿ ಇಲ್ಲ ಎಂದು ಹುಡುಗಿ ಹೇಳಿದ್ದಾಳೆ. ಮನೆಯಲ್ಲಿ ಡೆಬಿಟ್ ಕಾರ್ಡ್ ಸಿಕ್ಕಾಗ ಅದನ್ನು ತನ್ನ ಸ್ಮಾರ್ಟ್‌ಫೋನ್‌ಗೆ ಲಿಂಕ್ ಮಾಡಿರುವುದಾಗಿ ಅವಳು ಹೇಳಿದ್ದಾಳೆ. ತಂದೆ-ತಾಯಿ ಇಲ್ಲದಿದ್ದಾಗ ಹಣದ ಅಗತ್ಯವಿದ್ದಾಗ ತಾಯಿ ತನ್ನ ಕಾರ್ಡ್ ನ ಪಾಸ್ ವರ್ಡ್ ಹೇಳಿದ್ದು ಕೂಡ ಇದಕ್ಕೆ ಒಂದು ನೆಪವಾಗಿದೆ. ಅದನ್ನೇ ಹುಡುಗಿ ಬಳಸಿಕೊಂಡಿದ್ದಾಳೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News