ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಜಮಾತ್-ಇ-ಇಸ್ಲಾಮಿ ನಿಷೇಧ ಸಡಿಲಿಕೆ: ಮೆಹಬೂಬಾ ಮುಫ್ತಿ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ JeI ಮತ್ತು JKLF ಮೇಲೆ ಹೇರಲಾಗಿರುವ ನಿಷೇಧವನ್ನು ತೆಗೆದುಹಾಕುತ್ತೇವೆ ಎಂದು ಮುಫ್ತಿ ಹೇಳಿದ್ದಾರೆ.

Last Updated : Mar 27, 2019, 10:18 AM IST
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಜಮಾತ್-ಇ-ಇಸ್ಲಾಮಿ ನಿಷೇಧ ಸಡಿಲಿಕೆ: ಮೆಹಬೂಬಾ ಮುಫ್ತಿ title=

ಜಮ್ಮು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಜಮಾತ್-ಇ-ಇಸ್ಲಾಮಿ ಮೇಲೆ ಹೇರಲಾಗಿರುವ ನಿಷೇಧವನ್ನು ತೆಗೆದುಹಾಕಲಾಗುವುದು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಬಾರಾಮುಲ್ಲಾದಲ್ಲಿ ನಡೆದ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, JKLF ಮತ್ತು Jelಗಳಂತಹ ಸಂಘಟನೆಗಳ ಮೇಲೆ ನಿಷೇಧ ಹೇರುವುದರಿಂದ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮ ವಿಚಾರಗಳು ಏಳಿಗೆಗೆ ಅವಕಾಶ ನೀಡಬೇಕೇ ಹೊರತು ತೊಂದರೆಯಾಗುವಂತೆ ಇರಬಾರದು. ಇಂತಹ ಪ್ರಜಾಪ್ರಭುತ್ವವಾದಿ, ಅಸಂವಿಧಾನಿಕ ಮತ್ತು ಅಸ್ವಾಭಾವಿಕ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರ ಮುಸ್ಲಿಮರು ಮತ್ತು ಜಮ್ಮು-ಕಾಶ್ಮೀರದ ಬಗ್ಗೆ ಮತದಾರರಿಗೆ ವ್ಯತಿರಿಕ್ತ ಸಂದೇಶ ನೀಡುತ್ತಿದೆ" ಎಂದು ಹೇಳಿದರು.

"ಒಂದು ವೇಳೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ತೆಗೆದುಕೊಂಡಿರುವ ಎಲ್ಲಾ ತಪ್ಪು ನಿರ್ಧಾರಗಳನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ. ಹಾಗೆಯೇ JeI ಮತ್ತು JKLF ಮೇಲೆ ಹೇರಲಾಗಿರುವ ನಿಷೇಧವನ್ನು ತೆಗೆದುಹಾಕುತ್ತೇವೆ" ಎಂದು ಮುಫ್ತಿ ಹೇಳಿದ್ದಾರೆ.
 

Trending News