ಗೃಹಜ್ಯೋತಿಗೆ ಎರಡನೇ ದಿನವೂ ಟೆಕ್ನಿಕಲ್ ಸಮಸ್ಯೆ..!

Gruha Jyoti : ಸರ್ಕಾರದ ಎರಡನೇ ಗ್ಯಾರಂಟಿಯಾದ ಗೃಹಜ್ಯೋತಿಗೆ ಎರಡನೇ ದಿನವೂ ಟೆಕ್ನಿಕಲ್ ಸಮಸ್ಯೆ ಎದುರಾಗಿದೆ. ಅರ್ಜಿ ಹಾಕಲು ಬಂದ ಜನರು ಟೆಕ್ನಿಕಲ್ ಸಮಸ್ಯೆಯಿಂದ ಕಾದು ಕಾದು ಸುಸ್ತಾಗಿ ಮನೆ ಕಡೆ ವಾಪಾಸ್ ಆದರು.

Written by - Savita M B | Last Updated : Jun 19, 2023, 04:29 PM IST
  • ಗೃಹಜ್ಯೋತಿ ಯೋಜನೆಗೆ ನಿನ್ನೆಯಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.
  • ಕಾದು ಕಾದು ಸುಸ್ತಾಗಿ ಪರದಾಡಿದ ಜನರು
  • ಸೂಕ್ತ ಸಿದ್ಧತೆ ಮಾಡಿಕೊಳ್ಳದ ಅಧಿಕಾರಿಗಳು
ಗೃಹಜ್ಯೋತಿಗೆ ಎರಡನೇ ದಿನವೂ ಟೆಕ್ನಿಕಲ್ ಸಮಸ್ಯೆ..!  title=

Gruha Jyoti Scheme : ಸರ್ಕಾರ ಕೊಟ್ಟಿರೋ ಗೃಹಜ್ಯೋತಿ ಯೋಜನೆ ಚೆನ್ನಾಗಿದೆ, ಅದಕ್ಕಂತಲೇ ನಾವು ವೋಟ್ ಹಾಕಿದ್ದೀವಿ, ಈ ರೀತಿ ಮಾಡಬಾರದು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗಿದ್ದರೆ ರಾಜಧಾನಿಯಲ್ಲಿ ಹೇಗಿದೆ ಎರಡನೇ ದಿನ ಗೃಹಜ್ಯೋತಿ ಅರ್ಜಿ ಪ್ರಕ್ರಿಯೆ ಇಲ್ಲಿದೆ ಡಿಟೇಲ್ಸ್‌ ..

ಕಾದು ಕಾದು ಸುಸ್ತಾಗಿ ಪರದಾಡಿದ ಜನರು
ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ನಿನ್ನೆಯಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ, ಆರಂಭದಲ್ಲಿಯೇ ವಿಘ್ನ ಎಂಬಂತೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಪಡೆಯಲು ಸೇವಾಸಿಂಧು ಪೋರ್ಟಲ್‌ ಸಮಸ್ಯೆ ಹಾಗೂ ಸರ್ವರ್‌ ಸಮಸ್ಯೆಯಿಂದ ಜನರು ನಿನ್ನೆಯೂ ಪರದಾಡಿದ್ರು. ನಿನ್ನೆ ಪೂರ್ತಿ ಇದ್ದ ಸರ್ವರ್ ಸಮಸ್ಯೆ ಇಂದು ಕೂಡ ಮುಂದುವರಿದಿದ್ದು, ಸಾರ್ವಜನಿಕರು ಅರ್ಜಿ ಕೇಂದ್ರಗಳ ಬಳಿ ಕಾದು ಕಾದು ಸುಸ್ತಾಗಿ ಮನೆಗ ತೆರಳಿದ್ರು. 

ಸೂಕ್ತ ಸಿದ್ಧತೆ ಮಾಡಿಕೊಳ್ಳದ ಅಧಿಕಾರಿಗಳು
ಉಚಿತ ವಿದ್ಯುತ್‌ಗೆ ನೋಂದಣಿ ಮಾಡಿಕೊಳ್ಳಲು ಒಮ್ಮೆಲೇ ಜನ ಮುಗಿಬಿದ್ದ ಕಾರಣ ಸೇವಾ ಸಿಂಧು ವೆಬ್‌ಸೈಟ್‌ ಕ್ರಾಶ್‌ ಆಗಿದೆ. ನಿನ್ನೆ ಅರ್ಜಿ ತೆರೆದುಕೊಳ್ಳುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಆದ್ರೆ ಇಂದು ಈ ಸಮಸ್ಯೆ ಸ್ವಲ್ಪ ಬಗೆಹರಿದಿದ್ದು, ಅರ್ಜಿ ಒಪನ್‌ ಆದರೂ ಡೇಟಾವನ್ನು ತುಂಬಲು ಆಗುತ್ತಿಲ್ಲ. 

ಇದನ್ನೂ ಓದಿ-ಆದಿಪುರುಷ್‌ ಚಿತ್ರ ನಿಷೇದಕ್ಕೆ ಹೆಚ್ಚಿದ ಆಗ್ರಹ..!

ಅಕೌಂಟ್‌ ನಂಬರ್‌ ಭರ್ತಿ ಮಾಡಿದ ತಕ್ಷಣ ವೆಬ್‌ಸೈಟ್‌ ಕಾರ್ಯನಿರ್ವಹಣೆಯನ್ನು ನಿಲ್ಲಿಸುತ್ತಿದ್ದು, ಮುಂದಿನ ಮಾಹಿತಿಯನ್ನು ಭರ್ತಿ ಮಾಡಲು ಜನರಿಗೆ ಆಗುತ್ತಿರಲಿಲ್ಲ. ಅಧಿಕಾರಿಗಳು ಸರಿಯಾಗಿ ಸಿದ್ಧತೆ ಮಾಡಿಕೊಳ್ಳದಿರೋದು ಈ ಸಮಸ್ಯೆಯಿಂದ ಸ್ಪಷ್ಟವಾಗಿ ಗೊತ್ತಾಗ್ತಿದೆ.  ಇನ್ನು ಸಿಬ್ಬಂದಿ ಫೋನ್ ನಂಬರ್ ಕೊಟ್ಟು ಹೋಗಿ ಸರ್ವರ್ ಓಪನ್ ಆದ್ಮೇಲೆ ಕಾಲ್ ಮಾಡ್ತೀವಿ ಅಂತಾ ಹೇಳಿ ಕಳಿಸಿದ್ರು. 

ಗೃಹಜ್ಯೋತಿ ಯೋಜನೆಗೆ ಒಟ್ಟು 2.10 ಕೋಟಿ ಜನ ಅರ್ಹರಾಗಿದ್ದು, ಅಷ್ಟೂ ಮಂದಿ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಿದೆ. ಹೀಗಾಗಿ ಸೇವಾಸಿಂಧು ಪೋರ್ಟಲ್ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಸರ್ವರ್ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಳ ಮಾಡಿಕೊಳ್ಳುವುದಾಗಿ ಇ-ಆಡಳಿತದ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇಲಾಖೆ ಸಿದ್ಧತೆಯಲ್ಲಿ ವಿಫಲವಾಗಿರುವುದು ಮೊದಲ ಎರಡು ದಿನಗಳಲ್ಲೇ ಬಹಿರಂಗಗೊಂಡಿದೆ. ನಾಳೆಯಾದ್ರೂ ಈ ತಾಂತ್ರಿಕದೋಷ ಸರಿಯಾಗಿ ಜನರು ಪರದಾಡೋದು ತಪ್ಪುತ್ತಾ ಕಾದು ನೋಡ್ಬೇಕು..

ಇದನ್ನೂ ಓದಿ-Bigg Boss OTT 2: ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ರ ಸ್ಪರ್ಧಿಗಳ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News