Trains Services: ಈ ವಿಶೇಷ ರೈಲುಗಳ ಅವಧಿ ವಿಸ್ತರಣೆ - ನೀವು ಸಂಚಾರ ಮಾಡುವ ರೈಲಿನ ಸಮಯ ಈಲೇ ಚೆಕ್ ಮಾಡಿಕೊಳ್ಳಿ..!

Trains Services: ನೈರುತ್ಯ ರೈಲ್ವೇ ವಲಯ ವ್ಯಾಪ್ತಿಯಲ್ಲಿ ಸಂಚಾರ ಮಾಡುವ ಕೆಲ ವಿಶೇಷ ರೈಲಿನ ಸಮಯವನ್ನ ವಿಸ್ತರಣೆ ಮಾಡಲಾಗಿದೆ. ಈ ಕೆಳಗಿನ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ಕೆಲ ದಿನಗಳ ಕಾಲ ವಿಸ್ತರಣೆ ಮಾಡಲು ನೈರುತ್ಯ ರೈಲ್ವೆ ವಲಯವು  ನಿರ್ಧರಿಸಲಾಗಿದೆ.

Written by - Zee Kannada News Desk | Last Updated : Jun 20, 2023, 06:05 PM IST
  • ಕೆಲ ವಿಶೇಷ ರೈಲಿನ ಸಮಯವನ್ನ ವಿಸ್ತರಣೆ
  • ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ಕೆಲ ದಿನಗಳ ಕಾಲ ವಿಸ್ತರಣೆ
  • ನೈರುತ್ಯ ರೈಲ್ವೆ ವಲಯವು ನಿರ್ಧಾರ
Trains Services: ಈ ವಿಶೇಷ ರೈಲುಗಳ ಅವಧಿ ವಿಸ್ತರಣೆ - ನೀವು ಸಂಚಾರ ಮಾಡುವ ರೈಲಿನ ಸಮಯ ಈಲೇ ಚೆಕ್ ಮಾಡಿಕೊಳ್ಳಿ..! title=

ಬೆಂಗಳೂರು: ನೈರುತ್ಯ ರೈಲ್ವೇ ವಲಯ ವ್ಯಾಪ್ತಿಯಲ್ಲಿ ಸಂಚಾರ ಮಾಡುವ ಕೆಲ ವಿಶೇಷ ರೈಲಿನ ಸಮಯವನ್ನ ವಿಸ್ತರಣೆ ಮಾಡಲಾಗಿದೆ. ಈ ಕೆಳಗಿನ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ಕೆಲ ದಿನಗಳ ಕಾಲ ವಿಸ್ತರಣೆ ಮಾಡಲು ನೈರುತ್ಯ ರೈಲ್ವೆ ವಲಯವು  ನಿರ್ಧರಿಸಲಾಗಿದೆ.

 1 . ರೈಲು ಸಂಖ್ಯೆ 07355 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಿಲ್ದಾಣಗಳ ನಡುವೆ ಪ್ರತಿ ಶನಿವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ 24 ರವರೆಗೆ ಓಡಿಸಲು ಸೂಚಿಸಲಾಗಿತ್ತು.

ಇದನ್ನೂ ಓದಿ: ದೇಶದಲ್ಲಿಯೇ ಪ್ರಪ್ರಥಮ ಸುಸಜ್ಜಿತ ತಂತ್ರಜ್ಞಾನದ ಪಾಲಿಕೆ ಕೌನ್ಸಿಲ್ ಸಭಾಂಗಣ

2.  ರೈಲು ಸಂಖ್ಯೆ 07356 ರಾಮೇಶ್ವರಂ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಪ್ರತಿ ಭಾನುವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ  ರಿಂದ ಅಕ್ಟೋಬರ್ 1 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ 25 ರವರೆಗೆ ಓಡಿಸಲು ಸೂಚಿಸಲಾಗಿತ್ತು.

3.  ರೈಲು ಸಂಖ್ಯೆ 07377 ವಿಜಯಪುರ ಮತ್ತು ಮಂಗಳೂರು ಜಂಕ್ಷನ್‌ ನಿಲ್ದಾಣಗಳ ನಡುವೆ ದಿನಾಲೂ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ 1 ರಿಂದ ಅಗಸ್ಟ್ 31 ರವರೆಗೆ  ವಿಸ್ತರಿಸಲಾಗುತ್ತಿದೆ. ಈ  ಮೊದಲು ಜೂನ್ 30 ರವರೆಗೆ ಓಡಿಸಲು ಸೂಚಿಸಲಾಗಿತ್ತು.

ಇದನ್ನೂ ಓದಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ - ಹೆಚ್‌ ಡಿ ಡಿ

4.  ರೈಲು ಸಂಖ್ಯೆ 07378 - ಮಂಗಳೂರು ಜಂಕ್ಷನ್‌ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ದಿನಾಲೂ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ 2 ರಿಂದ ಸೆಪ್ಟೆಂಬರ್  1 ರವರೆಗೆ  ವಿಸ್ತರಿಸಲಾಗುತ್ತಿದೆ. ಈ  ಮೊದಲು ಜುಲೈ 1 ರವರೆಗೆ ಓಡಿಸಲು ಸೂಚಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News