Thalapathy Vijay : ನಾಳೆ (ಜೂನ್ 22) ನಟ ವಿಜಯ್ ಅವರ ಹುಟ್ಟುಹಬ್ಬ. ಇಂದಿನಿಂದಲೇ ಅವರ ಬರ್ತ್ಡೇ ಸಂಭ್ರಮಾಚರಣೆ ಶುರುವಾಗಿದೆ. ಅಲ್ಲದೆ, ವಿಜಯ್ ಪೀಪಲ್ಸ್ ಮೂವ್ ಮೆಂಟ್ ವತಿಯಿಂದ ವಿವಿಧ ಊರುಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಇದಲ್ಲದೇ ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಅನ್ನದಾನವನ್ನು ಸಹ ಆಯೋಜಿಸಲಾಗಿದೆ.
ಹೌದು.. ನಾಳೆ ತಮಿಳು ಸೂಪರ್ ಸ್ಟಾರ್ ವಿಜಯ್ ಹುಟ್ಟು ಹಬ್ಬ. ಒಂದು ದಿನ ಬಾಕಿ ಇರುವಾಗಲೇ ದಳಪತಿ ಬರ್ತ್ಡೇ ಸಂಭ್ರಮ ಶುರುವಾಗಿದೆ. ವಿಜಯ್ ಅವರ ಅಭಿಮಾನಿಗಳು ತಮಿಳುನಾಡಿನಾದ್ಯಂತ ಪೋಸ್ಟರ್ಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೆ, ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಅದರಲ್ಲೂ ಭಾವಿ ಮುಖ್ಯಮಂತ್ರಿ ಎಂಬ ಪೋಸ್ಟರ್ಗಳು ರಾರಾಜಿಸುತ್ತಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.
Happy to have featured #Thalapathy @actorvijay Anna on the prestigious New York Times Square billboard❤️❤️ Thanks to our Team for driving all the way to New York from Toronto for this 🫶 எங்களோட அண்ணன் எங்களோட தளபதி ❤️❤️ @BussyAnand @Jagadishbliss @RIAZtheboss pic.twitter.com/ttn1X5OEPY
— Canada Vijay Makkal Iyakkam (@CanadaVMI) June 20, 2023
ಇದನ್ನೂ ಓದಿ: ಅಪ್ಪು ಕಪ್ ಸೀಸನ್-2 ಬ್ಯಾಡ್ಮಿಂಟನ್ ಲೀಗ್ ಲೋಗೋ ಅನಾವರಣ...!
ಇನ್ನು ವಿದೇಶದಲ್ಲಿರುವ ವಿಜಯ್ ಅಭಿಮಾನಿಗಳು ಈ ಬಾರಿ ಕೊಂಚ ಡಿಫ್ರೆಂಟ್ ಆಗಿ ವಿಜಯ್ಗೆ ವಿಶ್ ಮಾಡಿದ್ದಾರೆ. ಕೆನಡಾದ ವಿಜಯ್ ಅಭಿಮಾನಿಗಳು ಅವರ ಹುಟ್ಟುಹಬ್ಬಕ್ಕೆ ಶುಭಕೋರಲು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ನ ಖ್ಯಾತ ಬಿಲ್ ಬೋರ್ಡ್ ನಲ್ಲಿ ನಟ ವಿಜಯ್ ಅವರ ಪೋಸ್ಟರ್ಗಳನ್ನು ಹಾಕಿಸಿದ್ದಾರೆ. ಈ ಕುರಿತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.