ವಾಷಿಂಗ್ಟನ್ ಡಿಸಿ: ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್ನ ಹಸಿರು ವಜ್ರದಿಂದ ಹಿಡಿದು ಕರಕುಶಲ ಶ್ರೀಗಂಧದ ಪೆಟ್ಟಿಗೆಯವರೆಗೆ ಪ್ರಧಾನಿ ಮೋದಿಯವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ದಂಪತಿಗೆ 10 ವಿಶೇಷ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಹೌದು, ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ 10 ವಿಶೇಷ ವಸ್ತುಗಳನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ದಂಪತಿಗೆ ಗಿಫ್ಟ್ ನೀಡಿದ್ದಾರೆ. ವಿಶೇಷವಾಗಿ ಅಮೆರಿಕದ ಪ್ರಥಮ ಮಹಿಳೆ, ಜೊ ಬಿಡೆನ್ ಪತ್ನಿ ಜಿಲ್ ಬಿಡೆನ್‍ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್ನ ಹಸಿರು ವಜ್ರವನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ.
Vintage camera, antique book galley- US President Joe Biden presents PM Modi with gifts
Read @ANI Story | https://t.co/Iv1LDL2vc1#JoeBiden #PMModi #VintageCamera #US pic.twitter.com/x7MMxx9SYU
— ANI Digital (@ani_digital) June 22, 2023
ಇದನ್ನೂ ಓದಿ: PM Modi In US: ಪ್ರಧಾನಿ ಮೋದಿ ಭಾಷಣ ಬಹಿಷ್ಕರಿಸಲು ಮುಂದಾದ ಇಬ್ಬರು ಅಮೆರಿಕ ಸಂಸದರು
ಬಿಡೆನ್ ದಂಪತಿಗೆ ‘ಉಪನಿಷತ್ತಿನ 10 ತತ್ವಗಳು’ ಪುಸ್ತಕದ ಮೊದಲ ಆವೃತ್ತಿ ಹಾಗೂ ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿಯವರು ಉಡುಗೊರೆಯಾಗಿ ನೀಡಿದ್ದಾರೆ. ಮೈಸೂರಿನ ಶ್ರೀಗಂಧದ ಮರದ ಕಟ್ಟಿಗೆಯಲ್ಲಿ ಜೈಪುರದ ಕುಶಲಕರ್ಮಿಯೊಬ್ಬರು ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯನ್ನು ಬಿಡೆನ್ ದಂಪತಿಗೆ ಗಿಫ್ಟ್ ನೀಡಿದ್ದಾರೆ.
In 1937, WB Yeats published an English translation of the Indian Upanishads, co-authored with Shri Purohit Swami. The translation and collaboration between the two authors occurred throughout 1930s and it was one of the final works of Yeats.
A copy of the first edition print… pic.twitter.com/yIi9QW290r
— ANI (@ANI) June 22, 2023
ಈ ವಿಶೇಷ ಶ್ರೀಗಂಧದ ಪೆಟ್ಟಿಗೆಯಲ್ಲಿ ಕೊಲ್ಕತ್ತಾದ 5ನೇ ತಲೆಮಾರಿನ ಅಕ್ಕಸಾಲಿಗರ ಕುಟುಂಬ ತಯಾರಿಸಿದ ಬೆಳ್ಳಿ ಗಣೇಶನ ವಿಗ್ರಹ ಹಾಗೂ ದೀಪವಿದೆ. ಇದರ ಜೊತೆಗೆ 10 ವಸ್ತುಗಳಿರುವ ‘ದಶ ದಾನ’ವನ್ನು ನೀಡಿದ್ದಾರೆ. ಸಹಸ್ರಚಂದ್ರ ದರ್ಶನದ ಪ್ರಯುಕ್ತ ಪ್ರಧಾನಿ ಮೋದಿಯವರು ಬಿಡೆನ್‍ಗೆ ‘ದಶ ದಾನ’ದ ಉಡುಗೊರೆ ನೀಡಿದ್ದಾರಂತೆ.
ಇದನ್ನೂ ಓದಿ: Uttarakhand: ನಾಲೆಗೆ ಕಾರು ಬಿದ್ದು 9 ಮಂದಿ ಸ್ಥಳದಲ್ಲೇ ಸಾವು..!
ಇದೇ ವೇಳೆ ಪ್ರಧಾನಿ ಮೋದಿಯವರಿಗೆ ಜೋ ಬಿಡೆನ್ ಪ್ರಾಚೀನ ಕ್ಯಾಮೆರಾವನ್ನು ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ 20ನೇ ಶತಮಾನದ ಆರಂಭದಲ್ಲಿ ಮಾಡಿದ ಅಮೆರಿಕನ್ ಬುಕ್ ಗ್ಯಾಲರಿ ಕಲಾಕೃತಿ ಮತ್ತು ಹಾರ್ಡ್ ಕವರ್ ಹೊಂದಿರುವ ಅಮೆರಿಕದ ವನ್ಯಜೀವಿ ಫೋಟೋಗಳ ಪುಸ್ತಕವನ್ನು ಸಹ ಗಿಫ್ಟ್ ನೀಡಿದ್ದಾರೆ. ಶ್ವೇತಭವನದಲ್ಲಿ ಪ್ರಧಾನಿ ಮೋದಿಯವರಿಗೆ ಬಿಡೆನ್ ದಂಪತಿ ಆಯೋಜಿಸಿದ್ದ ಔತಣಕೂಟದ ಬಳಿಕ ಈ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.