ಭಾರತದ ಈ ಭಾಗದಲ್ಲಿ ಎರಡು ಗಂಟೆಗಳಲ್ಲಿ 9 ಬಾರಿ ಭೂಕಂಪ!

ಬೆಳಿಗ್ಗೆ 5.14 ಕ್ಕೆ ಭೂಕಂಪದ ಮೊದಲ ಅನುಭವವಾಗಿದೆ. ಅದರ ತೀವ್ರತೆಯು 4.9 ಇತ್ತು.

Last Updated : Apr 1, 2019, 09:42 AM IST
ಭಾರತದ ಈ ಭಾಗದಲ್ಲಿ ಎರಡು ಗಂಟೆಗಳಲ್ಲಿ 9 ಬಾರಿ ಭೂಕಂಪ! title=

ನವದೆಹಲಿ: ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಸೋಮವಾರ ಬೆಳಿಗ್ಗೆ 5 ಗಂಟೆಯಿಂದ 7 ಗಂಟೆ ಅವಧಿಯಲ್ಲಿ 9 ಬಾರಿ ಭೂಕಂಪದ ಅನುಭವವಾಗಿದೆ. ಈ ಭಾಗದಲ್ಲಿ ಎರಡು ಗಂಟೆಯಲ್ಲಿ 9 ಬಾರಿ ಮಧ್ಯಮ ತೀವ್ರತೆಯ ಭೂಕಂಪದ ಆಘಾತಗಳು ಕಂಡು ಬಂದಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರವು ಮಾಹಿತಿ ನೀಡಿದೆ.

ಬೆಳಿಗ್ಗೆ 5.14 ಕ್ಕೆ ಭೂಕಂಪದ ಮೊದಲ ಅನುಭವವಾಗಿದೆ. ಅದರ ತೀವ್ರತೆಯು 4.9 ಇತ್ತು. ಬೆಳಿಗ್ಗೆ 6.54ಕ್ಕೆ ಕೊನೆ ಬಾರಿ ಭೂಕಂಪದ ಅನುಭವವಾಗಿದ್ದು, ಇದರ ತೀವ್ರತೆ 5.2 ರಷ್ಟಿತ್ತು ಎಂದು ವಿವರಿಸಲಾಗಿದೆ. 

ಭೂಕಂಪದ ಸಂದರ್ಭದಲ್ಲಿ ಏನು ಮಾಡಬೇಕು?
ಭೂಕಂಪದಂತಹ ನೈಸರ್ಗಿಕ ವಿಪತ್ತಿನಿಂದ ತಪ್ಪಿಸಿಕೊಳ್ಳುವುದು ಕಷ್ಟ ಮತ್ತು ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಕೆಲವು ತಾರ್ಕಿಕ ಕ್ರಿಯೆಗಳನ್ನು ಬಳಸಿಕೊಂಡು ಈ ಸ್ವಾಭಾವಿಕ ಹಾನಿಗಳ ಸಮಯದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

- ಭೂಕಂಪದ ಸಮಯದಲ್ಲಿ ಎಲಿವೇಟರ್ ಅನ್ನು ಬಳಸಬಾರದು.
- ಹೊರಗೆ ಹೋಗಲು ಎಲಿವೇಟರ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ.
- ನೀವು ಎಲ್ಲೋ ಸಿಕ್ಕಿಹಾಕಿಕೊಂಡಿದ್ದರೆ ಓಡುವುದು ಸೂಕ್ತವಲ್ಲ. ಭೂಕಂಪದಿಂದಾಗಿ ಇದು ಬಹಳಷ್ಟು ಪ್ರಭಾವ ಬೀರುತ್ತದೆ.
- ನೀವು ಕಾರು ಅಥವಾ ಯಾವುದೇ ವಾಹನವನ್ನು ಚಾಲನೆ ಮಾಡುತ್ತಿದ್ದರೆ, ಅದನ್ನು ತಕ್ಷಣ ನಿಲ್ಲಿಸಿ.
- ನೀವು ಚಾಲನೆ ಮಾಡುತ್ತಿದ್ದರೆ, ಕಟ್ಟಡ, ಸ್ತಂಭಗಳು, ಫ್ಲೈಓವರ್, ರಸ್ತೆ ಸೇತುವೆಯಿಂದ ದೂರ ಸಾಗಿ ಬಳಿಕ ವಾಹನವನ್ನು ನಿಲ್ಲಿಸಿ.
- ಭೂಕಂಪದ ಅನುಭವವಾದ ತಕ್ಷಣವೇ ಸುರಕ್ಷಿತ ಮತ್ತು ತೆರೆದ ಮೈದಾನದ ಬಳಿ ಸೇರಲು ಪ್ರಯತ್ನಿಸಿ. 
- ದೊಡ್ಡ ಕಟ್ಟಡಗಳು, ಮರಗಳು, ವಿದ್ಯುತ್ ಸ್ತಂಭಗಳಿಂದ ದೂರವಿರಿ.

Trending News