Earthquake In Andaman Nicobar: ಬುಧವಾರ ಮುಂಜಾನೆ 5:40 ರ ಸುಮಾರಿಗೆ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಸಂಭವಿಸಿದ 5.0 ತೀವ್ರತೆಯ ಭೂಕಂಪವು ನಿಕೋಬಾರ್ ದ್ವೀಪಗಳನ್ನು ತಲ್ಲಣಗೊಳಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ವರದಿ ಮಾಡಿದೆ.
ಇಂದಿರಾ ಪಾಯಿಂಟ್, ಭಾರತದ ಭೂಪ್ರದೇಶದ ದಕ್ಷಿಣದ ಬಿಂದು, ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಗ್ರೇಟ್ ನಿಕೋಬಾರ್ ದ್ವೀಪದಲ್ಲಿರುವ ನಿಕೋಬಾರ್ ಜಿಲ್ಲೆಯ ಒಂದು ಹಳ್ಳಿಯಾಗಿದೆ. ಇದು ಗ್ರೇಟ್ ನಿಕೋಬಾರ್ ತೆಹಸಿಲ್ನಲ್ಲಿದೆ.
Earthquake Today: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಇಂದು ಬೆಳ್ಳಂಬೆಳಗ್ಗೆ ಮತ್ತೆ ಭೂಕಂಪ ಸಂಭವಿಸಿದೆ. ಮುಂಜಾನೆ 2.54 ಗಂಟೆಗೆ ಪೋರ್ಟ್ಬ್ಲೇರ್ನ ಆಗ್ನೇಯಕ್ಕೆ 244 ಕಿಮೀ ದೂರದಲ್ಲಿ 4.4 ತೀವ್ರತೆ ಅಪ್ಪಳಿಸಿರುವುದಾಗಿ ವರದಿ ಆಗಿದೆ.
Asani Updates - ಚಂಡಮಾರುತದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಗೃಹ ಸಚಿವಾಲಯವು (Home Ministry) ಹೆಚ್ಚುವರಿ ರಕ್ಷಣಾ ತಂಡಗಳನ್ನು ಅಲರ್ಟ್ನಲ್ಲಿ ಇರಿಸಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಈವರೆಗೆ ಒಟ್ಟು 5,039 ಕರೋನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 4969 ರೋಗಿಗಳು ಗುಣಮುಖರಾಗಿದ್ದಾರೆ. 8 ಜನರ ಚಿಕಿತ್ಸೆ ನಡೆಯುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಪ್ರತಿದಿನ ಸುಮಾರು 700-800 ಪ್ರವಾಸಿಗರು ಆಗಮಿಸಿದರೂ, ಒಟ್ಟಾರೆ ಕರೋನಾವೈರಸ್ನ ಸ್ಥಿತಿಯನ್ನು ನಿಯಂತ್ರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.