ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ sbi.co.in/careers ನಲ್ಲಿ 2000 ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಕಟಿಸಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲುಏಪ್ರಿಲ್ 22, 2019 ಕಡೆಯ ದಿನವಾಗಿದೆ.
ಮೂರು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಮುಖ್ಯ ಪರೀಕ್ಷೆಯಲ್ಲಿ ಉತ್ತಿರ್ಣರಾದವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ಪ್ರೊಬೇಷನರಿ ಅಧಿಕಾರಿಗಳ 2000 ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ 300, ಪರಿಶಿಷ್ಟ ಪಂಗಡಕ್ಕೆ 150, ಹಿಂದುಳಿದ ವರ್ಗಕ್ಕೆ 540, ಆರ್ಥಿಕವಾಗಿ ಹಿಂದಿಳಿದ ವರ್ಗಕ್ಕೆ 200, ಸಾಮಾನ್ಯ ವರ್ಗಕ್ಕೆ 810 ಸ್ಥಾನಗಳ ಮೀಸಲಾತಿ ನೀಡಲಾಗಿದೆ.
ನೇಮಕಾತಿ ಪ್ರಕ್ರಿಯೆಯ ಮುಖ್ಯ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ: ಏಪ್ರಿಲ್ 2, 2019
ಅರ್ಜಿ ಸಲ್ಲಿಸಲು ಕಡೆಯ ದಿನ: ಏಪ್ರಿಲ್ 22, 2019
ಅರ್ಜಿ ಶುಲ್ಕ ಪಾವತಿ: ಏಪ್ರಿಲ್ 2 ರಿಂದ ಏಪ್ರಿಲ್ 22, 2019
ಪರೀಕ್ಷಾ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ: ಮೇ 2019ರ ಮೂರನೇ ವಾರದ ಬಳಿಕ
ಪ್ರಾಥಮಿಕ ಹಂತದ ಪರೀಕ್ಷೆ: ಜೂನ್ 8, 9, 15 ಮತ್ತು 16, 2019
ಪ್ರಾಥಮಿಕ ಹಂತದ ಪರೀಕ್ಷೆ ಫಲಿತಾಂಶ: 2019ರ ಜುಲೈ ಮೊದಲ ವಾರ
ಮುಖ್ಯ ಪರೀಕ್ಷೆ : ಜುಲೈ 20, 2019
ಮುಖ್ಯ ಪರೀಕ್ಷೆ ಫಲಿತಾಂಶ: ಆಗಸ್ಟ್ 2019ರ ಮೂರನೇ ವಾರ
ಸಂದರ್ಶನ: ಸೆಪ್ಟೆಂಬರ್ 2019
ಅಂತಿಮ ಫಲಿತಾಂಶ: ಅಕ್ಟೋಬರ್ 2019ರ ಎರಡನೇ ವಾರ
ಎಸ್ಬಿಐ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ವೇತನ ಶ್ರೇಣಿ 23700-980/7-30560-1145/2-32850-1310/7-42020 ಇದೆ. ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಎಲ್ಲಾ ಅಭ್ಯರ್ಥಿಗಳೂ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.