ಬೆಂಗಳೂರು: 2023-24 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಪ್ರವರ್ಗ -1, ಪ್ರವರ್ಗ-2ಎ, ಪ್ರವರ್ಗ-3ಎ, ಮತ್ತು ಪ್ರವರ್ಗ-3ಬಿ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತ ವೃತ್ತಿ ತರಬೇತಿ ಅವಧಿಯಲ್ಲಿ ತರಬೇತಿ ಭತ್ಯೆ ಪಾವತಿಸುವ ಕಾರ್ಯಕ್ರಮದಡಿ ಅರ್ಹ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಅಮೀರ್ ಖಾನ್ ಅವರ 3 Idiots 2 ಕನ್ಫರ್ಮ್? ರಾಜು ರಸ್ತೋಗಿ ಕೊಟ್ರು ಬಿಗ್ ಅಪ್ಡೇಟ್!
ಎರಡನೇ ತಂಡದ ಅಭ್ಯರ್ಥಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಪ್ರರ್ಗ-1 ರ ಅಭ್ಯರ್ಥಿಯ ಕುಟುಂಬದ ವಾರ್ಷಿಕ ರೂ.3.50ಲಕ್ಷ ಆದಾಯಮಿತಿ ಹೊಂದಿದ್ದು 40 ವರ್ಷದೊಳಗಿನವರಾಗಿರಬೇಕು. ಪ್ರವರ್ಗ-2ಎ, ಪ್ರವರ್ಗ-3ಎ, ಮತ್ತು ಪ್ರವರ್ಗ-3ಬಿ ವರ್ಗಗಕ್ಕೆ ಸೇರಿದ ಅಭ್ಯರ್ಥಿಗಳ ಆದಾಯ 2.50 ಲಕ್ಷ ಆದಾಯಮಿತಿ ಹೊಂದಿದ್ದು 38 ವರ್ಷದೂಳಗಿನವರಾಗಿರಬೇಕು. ಕಾನೂನು ಪದವೀಧರರಿಗೆ ವಕೀಲ ವೃತ್ತಿಯಲ್ಲಿ ನ್ಯಾಯಾಂಗ ಸೇವೆಯ ಪೂರ್ವ ತರಬೇತಿ ಪಡೆಯಲು ಪದವಿ ಪಡೆದ 2 ವರ್ಷದೊಳಗಿನ ಅವಧಿಯ ಅರ್ಹ ಆಸಕ್ತಿಯುಳ್ಳ (ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ, ಮತ್ತು ಪ್ರವರ್ಗ-3ಬಿ ವರ್ಗಕ್ಕೆಸೇರದ) ಕಾನೂನು ಪದವೀಧರರು www.bcwd.kar.nic.in ವೆಬ್ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನೂ ಓದಿ: ರಾಮ್ಚರಣ ಮಗಳ ನಾಮಕರಣಕ್ಕೆ 24 ಕ್ಯಾರೆಟ್ ಬಂಗಾರದ ತೊಟ್ಟಿಲು ಗಿಪ್ಟ್ ನೀಡಿದ ಅಂಬಾನಿ..!
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.4,000/- ಭತ್ಯೆಯನ್ನು 4 ವರ್ಷಗಳವರೆಗೆ ನೀಡಲಾಗುವುದು. ಅರ್ಜಿಯನ್ನು ಜುಲೈ 28 ರೊಳಗಾಗಿ ಸಲ್ಲಿಸಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ