ನವದೆಹಲಿ: ಆಸ್ಟ್ರೇಲಿಯ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಆಶಿಸ್ ಟೆಸ್ಟ್‌ನಲ್ಲಿ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ತಮ್ಮ ಗತ ವೈಭವವನ್ನು ನೆನಪಿಸುವ ಗಮನಾರ್ಹ ಪ್ರದರ್ಶನವನ್ನು ನೀಡಿದರು.
ಕ್ಯಾಮರೂನ್ ಗ್ರೀನ್ ಬೌಲಿಂಗ್‌ನಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಬೆನ್ ಸ್ಟೋಕ್ಸ್ ತಮ್ಮ ಶತಕವನ್ನು ಬಾರಿಸಿದರು.ಅಂತಿಮ ದಿನದಂದು ಜಾನಿ ಬೈರ್‌ಸ್ಟೋ ಅವರ ವಿವಾದಾತ್ಮಕ ರನ್-ಔಟ್ ನಂತರ ಆಸ್ಟ್ರೇಲಿಯನ್ ಬೌಲಿಂಗ್ ದಾಳಿಯ ಮೇಲೆ ಆಕ್ರಮಣ ನಡೆಸುವ ಮೂಲಕ ಸ್ಟೋಕ್ಸ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
6,6,6 to bring up an Ashes century at Lord's.
Ben Stokes the captain! pic.twitter.com/C7i0uQfqoX
— Mufaddal Vohra (@mufaddal_vohra) July 2, 2023
ಬೈರ್‌ಸ್ಟೋ ನಿರ್ಗಮನದ ವೇಳೆ ಸ್ಟೋಕ್ಸ್ 126 ಎಸೆತಗಳಲ್ಲಿ 62 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ತದನಂತರ ಅವರು 5 ನೇ ದಿನದ ಊಟದ ವಿರಾಮದ ಮೊದಲು ಗ್ರೀನ್‌ನ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಹೊಡೆದರು,ನಂತರದ ಓವರ್‌ನಲ್ಲಿ ಸ್ಟೋಕ್ಸ್ ತನ್ನ ಆಕ್ರಮಣವನ್ನು ಮುಂದುವರೆಸಿದರು, ಮತ್ತೆ ಗ್ರೀನ್ ಅವರನ್ನು ಗುರಿಯಾಗಿಸಿದರು. ಅವರು ಮೊದಲ ಎಸೆತದಲ್ಲಿ ಬೌಂಡರಿಯೊಂದಿಗೆ ಪ್ರಾರಂಭಿಸಿದರು ಮತ್ತು ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು.ಈ ಗಮನಾರ್ಹ ಪ್ರದರ್ಶನವು ಅವರಿಗೆ ಆ ಓವರ್‌ನಲ್ಲಿ 22 ರನ್‌ಗಳನ್ನು ಗಳಿಸಲು ಸಹಾಯ ಮಾಡಿತು, ಆ ಮೂಲಕ ಅವರು ಶತಕದ ಗಡಿಯನ್ನು ತಲುಪಿದರು.ಆ ಮೂಲಕ 13 ನೇ ಟೆಸ್ಟ್ ಶತಕವನ್ನು ಸಿಡಿಸಿದರು. ಅಂತಿಮ ದಿನದ ಭೋಜನ ವಿರಾಮದ ವೇಳೆಗೆ ಸ್ಟೋಕ್ಸ್ 147 ಎಸೆತಗಳಲ್ಲಿ 108 ರನ್ ಗಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.