ಈ ರಾಶಿಯವರು ಏನೇ ಕೆಲಸಕ್ಕೆ ಕೈ ಹಾಕಿದರೂ ಸೋಲಾಗುವುದಿಲ್ಲ. ಹಿಡಿದ ಕೆಲಸ ಕೇತುವಿನ ದಯೆಯಿಂದ ಪೂರ್ಣವಾಗುವುದು.
ಬೆಂಗಳೂರು : ಜ್ಯೋತಿಷ್ಯದಲ್ಲಿ, ಕೇತುವನ್ನು ದೋಷಪೂರಿತ ಗ್ರಹಎಂದು ಕರೆಯಲಾಗುತ್ತದೆ. ಈ ಗ್ರಹ ಸದಾ ಹಿಮ್ಮುಖವಾಗಿಯೇ ಚಲಿಸುತ್ತದೆ. ಹೀಗಾಗಿ ಕೇತು ರಾಶಿಯನ್ನು ಬದಲಿಸುವಾಗ ಪ್ರಸ್ತುತ ರಾಶಿಯಿಂದ ಹಿಂದಕ್ಕೆ ಇರುವ ರಾಶಿಯನ್ನು ಪ್ರವೇಶಿಸುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೇತುವನ್ನು ಕರ್ಮ ಗ್ರಹವೆಂದು ಪರಿಗಣಿಸಲಾಗಿದೆ. ಕೇತು ರಾಶಿಯನ್ನು ಬದಲಾಯಿಸುವ ಪರಿಣಾಮ ಎಲ್ಲಾ 12 ರಾಶಿಗಳ ಮೇಲೂ ಕಂಡುಬರುತ್ತದೆ. ಆದರೆ ಮೂರು ರಾಶಿಯವರು ಮಾತ್ರ ಭಾರೀ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಈ ರಾಶಿಯವರು ಏನೇ ಕೆಲಸಕ್ಕೆ ಕೈ ಹಾಕಿದರೂ ಸೋಲಾಗುವುದಿಲ್ಲ. ಹಿಡಿದ ಕೆಲಸ ಕೇತುವಿನ ದಯೆಯಿಂದ ಪೂರ್ಣವಾಗುವುದು.
ಕೇತು ನೀಡುವನು ಸಮೃದ್ದಿ : ಸದ್ಯ ಕೇತು ತುಲಾ ರಾಶಿಯಲ್ಲಿದ್ದು ಅಕ್ಟೋಬರ್ನಲ್ಲಿ ಕನ್ಯಾರಾಶಿಗೆ ತೆರಳುತ್ತಾನೆ. ಜಾತಕದಲ್ಲಿ ಕೇತು ಇರುವ ಮನೆಯು, ಆ ಮನೆಯ ಯಜಮಾನನ ಪ್ರಕಾರ ಫಲಿತಾಂಶವನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ವೃಷಭ ರಾಶಿ : ಕನ್ಯಾರಾಶಿಯಲ್ಲಿ ಕೇತು ಸಂಚಾರದಿಂದ ವೃಷಭ ರಾಶಿಯವರಿಗೆ ಹೆಚ್ಚಿನ ಯಶಸ್ಸು ಸಿಗಲಿದೆ. ಈ ರಾಶಿಯವರ ಸಂಕ್ರಮಣ ಜಾತಕದ ಐದನೇ ಮನೆಯಲ್ಲಿ ಕೇತು ಕುಳಿತುಕೊಳ್ಳುತ್ತಾನೆ. ಈ ಅವಧಿಯಲ್ಲಿ ಹಠಾತ್ ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಮಾನಸಿಕ ಒತ್ತಡವೂ ದೂರವಾಗುತ್ತದೆ. ಹಣ ಗಳಿಸುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಆರ್ಥಿಕ ಭಾಗವು ಬಲವಾಗಿರುತ್ತದೆ.
ಸಿಂಹ ರಾಶಿ : ಸಿಂಹ ರಾಶಿಯವರಿಗೆ ಕೇತುವಿನ ಸಂಚಾರವು ತುಂಬಾ ಅದೃಷ್ಟವನ್ನು ನೀಡುತ್ತದೆ. ನಿಮ್ಮ ಜಾತಕದ ಎರಡನೇ ಮನೆಯಲ್ಲಿ ಕೇತುವಿನ ಸಂಕ್ರಮಣ ನಡೆಯಲಿದೆ. ಈ ಅವಧಿಯಲ್ಲಿ, ಮನದ ಇಚ್ಛೆ ಈಡೇರುವುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಮಾತಿನ ಮೂಲಕವೇ ಜನ ನಿಮ್ಮತ್ತ ಆಕರ್ಷಿಸಲ್ಪಡುತ್ತಾರೆ. ಹಣ ಸಂಪಾದಿಸುವ ಎಲ್ಲಾ ಪ್ರಯತ್ನಗಳು ಸಫಲವಾಗುವುದು.
ಧನು ರಾಶಿ : ಕನ್ಯಾ ರಾಶಿಯಲ್ಲಿ ಕೇತು ಸಂಕ್ರಮಣ ಧನು ರಾಶಿಯವರಿಗೆ ಫಲಕಾರಿಯಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಇಷ್ಟೇ ಅಲ್ಲ, ವೃತ್ತಿಜೀವನದಲ್ಲಿಯೂ ನೀವು ಹೊಸ ಎತ್ತರಕ್ಕೆ ಏರಬಹುದು. ಉದ್ಯೋಗಸ್ಥರು ಹೊಸ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೇ ವ್ಯಾಪಾರದಲ್ಲಿ ಅಭಿವೃದ್ದಿಯಾಗುವ ಸಾಧ್ಯತೆ ಹೆಚ್ಚು. ಹಣದ ಕೊರತೆ ಇರುವುದಿಲ್ಲ.