Team India Cricket News: ಟೀಂ ಇಂಡಿಯಾದ ಮೂವರು ಕ್ರಿಕೆಟಿಗರಿಗೆ ಸದ್ಯ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಒಂದೇ ಒಂದು ಅವಕಾಶವನ್ನು ನೀಡಲು ಸಿದ್ಧರಿಲ್ಲ. ಈ ಮೂವರು ಕ್ರಿಕೆಟಿಗರು ಒಂದೊಮ್ಮೆ ಟೀಂ ಇಂಡಿಯಾದಲ್ಲಿ ಆಯ್ಕೆಯಾದರೂ ಆಮೇಲೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡುವ ಅವಕಾಶ ನೀಡಲಿಲ್ಲ. ಈ ಕ್ರಿಕೆಟಿಗರು ಎಷ್ಟು ದುರಾದೃಷ್ಟವಂತರು ಎಂದರೆ ಈಗ ಅವರ ವೃತ್ತಿಜೀವನ ಅಂತ್ಯದತ್ತ ಸಾಗುತ್ತಿದೆ.
ಇದನ್ನೂ ಓದಿ: ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ… ತೆಂಡೂಲ್ಕರ್ ಶತಕಗಳ ದಾಖಲೆಯನ್ನು ಮುರಿಯಬಲ್ಲ ಧಮ್ ಇರೋದು ಈ ಕ್ರಿಕೆಟಿಗನಿಗೆ!
1. ಸರ್ಫರಾಜ್ ಖಾನ್: ದೇಶಿಯ ಕ್ರಿಕೆಟ್ ನಲ್ಲಿ ರನ್ ಗಳ ಮಳೆ ಸುರಿಯುತ್ತಿದ್ದರೂ ಭಾರತ ತಂಡದ ಆಡಳಿತ ಮಂಡಳಿಯು ಸರ್ಫರಾಜ್ ಖಾನ್ ಗೆ ಅವಕಾಶ ನೀಡುತ್ತಿಲ್ಲ. ಸರ್ಫರಾಜ್ ಖಾನ್ 38 ಪ್ರಥಮ ದರ್ಜೆ ಪಂದ್ಯಗಳಲ್ಲಿ 13 ಶತಕ ಮತ್ತು 9 ಅರ್ಧ ಶತಕ ಸೇರಿದಂತೆ 76.32 ರ ಪ್ರಭಾವಿ ಸರಾಸರಿಯಲ್ಲಿ 3511 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಥಮ ದರ್ಜೆ ಪಂದ್ಯಗಳಲ್ಲಿ ತ್ರಿಶತಕ ಬಾರಿಸಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಸರ್ಫರಾಜ್ ಖಾನ್ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 301 ಆಗಿದೆ. ಆದರೆ ಫಿಟ್ನೆಸ್ ಕೊರತೆ, ದೇಹದಲ್ಲಿ ಬೊಜ್ಜದೆ, ವರ್ತನೆ ಸರಿಯಿಲ್ಲ ಎಂಬೆಲ್ಲಾ ಕಾರಣ ನೀಡಿ ಬಿಸಿಸಿಐನ ಆಯ್ಕೆ ಸಮಿತಿಯು ಪ್ರತಿಯೊಂದು ಸರಣಿಯಲ್ಲೂ ಈ ಆಟಗಾರನನ್ನು ಕಡೆಗಣಿಸುತ್ತಿದೆ.
2. ಪೃಥ್ವಿ ಶಾ: ಪೃಥ್ವಿ ಶಾ ಟೀಂ ಇಂಡಿಯಾದಲ್ಲಿ ಅವಕಾಶಕ್ಕೆ ಅರ್ಹರು. ಆದರೆ ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ಭಾರತ ತಂಡದ ಆಡಳಿತವು ನಿರಂತರವಾಗಿ ನಿರ್ಲಕ್ಷಿಸುತ್ತಿದೆ. ಪೃಥ್ವಿ ಶಾ ಟೀಂ ಇಂಡಿಯಾ ಪರ 5 ಟೆಸ್ಟ್ ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧ ಶತಕ ಸೇರಿದಂತೆ 339 ರನ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಪೃಥ್ವಿ ಶಾ ಅವರ ಅತ್ಯುತ್ತಮ ಸ್ಕೋರ್ 134 ರನ್. ಇನ್ನು 43 ಪ್ರಥಮ ದರ್ಜೆ ಪಂದ್ಯಗಳಲ್ಲಿ 12 ಶತಕ ಮತ್ತು 15 ಅರ್ಧ ಶತಕ ಸೇರಿದಂತೆ 3730 ರನ್ ಗಳಿಸಿದ್ದಾರೆ. ಪೃಥ್ವಿ ಶಾ ಅತ್ಯಂತ ಆಕ್ರಮಣಕಾರಿ ಬ್ಯಾಟ್ಸ್‌ಮನ್. ಇವರ ಬ್ಯಾಟಿಂಗ್ ಸ್ಟೈಲ್ ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಒಂದು ನೋಟವನ್ನು ಕಾಣಬಹುದು. ಪ್ರಥಮ ದರ್ಜೆ ಪಂದ್ಯಗಳಲ್ಲಿ ಪೃಥ್ವಿ ಶಾ ಅವರ ಅತ್ಯುತ್ತಮ ಸ್ಕೋರ್ 379 ರನ್.
ಇದನ್ನೂ ಓದಿ: ಏಷ್ಯಾಕಪ್’ಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿದ ಇಬ್ಬರು ಸ್ಟಾರ್ ಕ್ರಿಕೆಟಿಗರು!
3. ಮಯಾಂಕ್ ಅಗರ್ವಾಲ್: ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾದಲ್ಲಿ ಅವಕಾಶಕ್ಕೆ ಅರ್ಹರಾಗಿದ್ದಾರೆ. ಭಾರತಕ್ಕಾಗಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಮಾರ್ಚ್ 2022 ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರು. ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. 21 ಟೆಸ್ಟ್ ಪಂದ್ಯಗಳಲ್ಲಿ 4 ಶತಕ ಮತ್ತು 6 ಅರ್ಧ ಶತಕಗಳನ್ನು ಒಳಗೊಂಡಂತೆ 1488 ರನ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಮಯಾಂಕ್ ಅಗರ್ವಾಲ್ ಅವರ ಅತ್ಯುತ್ತಮ ಸ್ಕೋರ್ 243 ರನ್. ಕೆಎಲ್ ರಾಹುಲ್ ಕಾರಣದಿಂದ ಮಯಾಂಕ್ ಅಗರ್ವಾಲ್ ಅವರನ್ನು ಭಾರತ ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಕೆಎಲ್ ರಾಹುಲ್ ವೈಫಲ್ಯದ ಹೊರತಾಗಿಯೂ, ತಂಡದ ಆಡಳಿತವು ಮಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ