OMG: ರೀಲ್ಸ್ ಹುಚ್ಚು, ಐಫೋನ್ ಖರೀದಿಸಲು ಕರುಳ ಕುಡಿಯನ್ನೇ ಮಾರಿದ ದಂಪತಿ!

Baby Sold For iPhone: ಹೆತ್ತವರು ತಮ್ಮ ಮಕ್ಕಳಿಗಾಗಿ ಮಕ್ಕಳ ಸಂತೋಷಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡ್ತಾರೆ. ಆದರೆ, ಪಶ್ಚಿಮ ಬಂಗಾಳದ ಈ ದಂಪತಿ ರೀಲ್ಸ್ ಮೇಲಿನ ಮೋಹ, ಐಫೋನ್ ಕೊಳ್ಳುವ ಆಸೆಯಿಂದಾಗಿ ಮಾಡಿರುವ ಕೆಲಸ ಏನ್ ಗೊತ್ತಾ! ಈ ಕಥೆ ಕೇಳಿದರೆ ಥೂ... ಇಂತಹ ತಂದೆ-ತಾಯಿ ಕೂಡ ಇರ್ತಾರಾ ಅಂತೀರಾ! 

Written by - Yashaswini V | Last Updated : Jul 28, 2023, 12:03 PM IST
  • ಐಫೋನ್ ಖರೀದಿಸಲು ಎಂಟು ತಿಂಗಳ ಮಗುವನ್ನೇ ಬಂಡವಾಳ ಮಾಡಿಕೊಂಡರು.
  • ಐಫೋನ್‌ಗಾಗಿ ಹಣವನ್ನು ಪಡೆಯಲು ತಾನು ಹೆತ್ತ ಮಗುವನ್ನೇ ಮಾರಿದ ಮಹಾತಾಯಿ
  • ಎಂಟು ತಿಂಗಳ ಮಗು ನಾಪತ್ತೆಯಾಗಿದ್ದರೂ ಪೋಷಕರಲ್ಲಿ ಕಾಣದ ಆತಂಕದ ಛಾಯೆ!
OMG: ರೀಲ್ಸ್  ಹುಚ್ಚು, ಐಫೋನ್ ಖರೀದಿಸಲು ಕರುಳ ಕುಡಿಯನ್ನೇ ಮಾರಿದ ದಂಪತಿ!  title=

Baby Sold For iPhone: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಧಾರೆ ಎರೆಯುವ ಪೋಷಕರನ್ನು ನಮ್ಮ ಸುತ್ತ-ಮುತ್ತಲೂ ನೋಡಿಯೇ ಇರುತ್ತೇವೆ. ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ತಾಯಿಯೊಬ್ಬಳು ತನ್ನ ಮಗನ ಕಾಲೇಜು ಶುಲ್ಕ ಭರಿಸುವ ಸಲುವಾಗಿ ಸರ್ಕಾರಿ ಬಸ್ ಮುಂದೆ ಜಿಗಿದು ಪ್ರಾಣವನ್ನೇ ತ್ಯಾಗ ಮಾಡಿದ್ದಳು. ಆದರೆ, ಪಶ್ಚಿಮ ಬಂಗಾಳದಲ್ಲಿ ಶಾಕಿಂಗ್ ಸುದ್ದಿಯೊಂದು ಬೆಳಕಿಗೆ ಬಂದಿದೆ. 

ಹೌದು, ಪಶ್ಚಿಮ ಬಂಗಾಳದ ಆಘಾತಕಾರಿ ಘಟನೆಯೊಂದರಲ್ಲಿ, ರೀಲ್ಸ್ ಮೇಲಿನ ಮೋಹ, ಐಫೋನ್ ಕೊಳ್ಳುವ ಆಸೆಯಿಂದಾಗಿ ದಂಪತಿಗಳು ತಮ್ಮ 8 ತಿಂಗಳ ಮಗುವನ್ನೇ ಮಾರಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಇಂತಹ ವಿಲಕ್ಷಣ ಕಥೆ ಕಂಡು ಬಂದಿದೆ. 

ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ರಚಿಸಲು ಐಫೋನ್ ಖರೀದಿಸಲು ಬಯಸಿದ್ದ ದಂಪತಿ ಈ ನೀಚ ಕೆಲಸಕ್ಕೆ ಕೈಹಾಕಿದ್ದಾರೆ. ಇಂತಹ ಶಾಕಿಂಗ್ ಘಟನೆ ಕುರಿತಂತೆ ಮಾಹಿತಿ ತಿಳಿದ ಪೊಲೀಸರು ತಕ್ಷಣ ಕಾರ್ಯೋನ್ಮುಖರಾಗಿ ಮಗುವಿನ ತಾಯಿ ಹಾಗೂ ಮಗುವನ್ನು ಖರೀದಿಸಿದ್ದ ಮಹಿಳೆಯನ್ನು ವಶಕ್ಕೆ ಪಡೆಸಿದ್ದಾರೆ. 

ಇದನ್ನೂ ಓದಿ- ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಅವಳಲ್ಲ ಅವನ ಪ್ರಯಾಣ, ಮುಂದೆ...

ಆ ದುರದೃಷ್ಟ ಮಗುವಿನ ತಾಯಿಯನ್ನು 'ಸತಿ' ಎಂದು ಗುರುತಿಸಿದ್ದಾರೆ. ಮಗುವನ್ನು ಖರೀದಿಸಿದ ಮಹಿಳೆಯನ್ನು ಪ್ರಿಯಾಂಕಾ ಘೋಷ್ ಎಂದು ಗುರುತಿಸಲಾಗಿದೆ. ಇನ್ನೂ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಮಗುವಿನ ತಂದೆ ಜಯದೇವ್ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಜಯದೇವ್ ನನ್ನು ಪತ್ತೆ ಹಚ್ಚಲು ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ. 

ಏನಿದು ಘಟನೆ? 
ವಾಸ್ತವವಾಗಿ, ಎಂಟು ತಿಂಗಳ ಮಗು ನಾಪತ್ತೆಯಾಗಿದ್ದರೂ  ದಂಪತಿ ಮುಖದಲ್ಲಿ ಕೊಂಚವೂ ಬೇಸರವಾಗಲಿ, ಇಲ್ಲ ಆತಂಕವಾಗಲಿ ಇರಲಿಲ್ಲ. ನೆರೆಹೊರೆಯವರು ಈ ಬಗ್ಗೆ ವಿಚಾರಿಸಿದಾಗಲೂ ದಂಪತಿಗಳಿಂದ ಯಾವುದೇ ಸೂಕ್ತವಾದ ಉತ್ತರವೂ ಲಭ್ಯವಾಗಿರಲಿಲ್ಲ. ಆದರೆ, ಇದ್ದಕ್ಕಿದ್ದಂತೆ ದಂಪತಿಯ ಕೈಯಲ್ಲಿ ಸುಮಾರು 1 ಲಕ್ಷ ಮೌಲ್ಯದ ಐಫೋನ್ 14  ಕಂಡ ಅಕ್ಕ-ಪಕ್ಕದವರಿಗೆ ಅನುಮಾನ ವ್ಯಕ್ತವಾಗಿದ್ದು, ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಈ ವಿಷಯ ತಿಳಿಯುತ್ತಿದ್ದಂತೆ ಹೆಂಡತಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದು ಪೊಲೀಸರಿಗೆ ಸಿಕ್ಕಿಬಿದ್ದ ಮಗುವಿನ ತಾಯಿ 'ಸತಿ' ತಾವು ಪಶ್ಚಿಮ ಬಂಗಾಳದ ವಿವಿಧ ಭಾಗಗಳಿಗೆ ತೆರಳಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ರಚಿಸಲು ಇಚ್ಛಿಸಿದ್ದೆವು. ನಮ್ಮ ಬಳಿ, ಅಷ್ಟು ಹಣಕಾಸಿನ ಸೌಕರ್ಯವಿರಲಿಲ್ಲ. ಹಾಗಾಗಿ ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. 

ಇದನ್ನೂ ಓದಿ- ಹೆಂಡತಿ ಕೊಂದು ಮೆದುಳು ತಿಂದ ಗಂಡ...! ತಲೆ ಬುರುಡೆಯನ್ನು ಸಿಗರೇಟ್‌ ಆಶ್ ಟ್ರೇ ಮಾಡಿಕೊಂಡ

ಇನ್ನೊಂದು ಶಾಕಿಂಗ್ ವಿಷಯವೆಂದರೆ, ಈ ದಂಪತಿಗೆ ಏಳು ವರ್ಷದ ಒಬ್ಬಳು ಮಗಳಿದ್ದು ಆಕೆಯನ್ನೂ ಕೂಡ ಬೇರೆಯವರಿಗೆ ಮಾರಾಟ ಮಾಡಲು ಇವರು ಯೋಜನೆ ರೂಪಿಸಿದ್ದರು ಎಂದು ಸಹ ತಿಳಿದುಬಂದಿದೆ. 

ಈ ಘಟನೆ ಕುರಿತಂತೆ ತನಿಖೆ ಮುಂದುವರೆಸಿರುವ ಪಶ್ಚಿಮ ಬಂಗಾಳ ಪೊಲೀಸರು ಬಡತನದಿಂದಾಗಿ ಇವರು ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆಯೇ? ಅಥವಾ ಇಂತಹವರ ದೊಡ್ಡ ಜಾಲವೇನಾದರೂ ಇರಬಹುದೇ ಎಂಬ ಬಗ್ಗೆ ಶಂಕೆವ್ಯಕ್ತಪಡಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News