ಬೆಂಗಳೂರು: ರಾಜ್ಯ ಸರ್ಕಾರ ಅನುದಾನ ಒದಗಿಸದ ಕಾರಣ ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಸ್ಕೃತಿ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಿದ್ದ ನಾಡದೇವಿ ಭುವನೇಶ್ವರಿ ಪ್ರತಿಮೆಯ ಯೋಜನೆಯನ್ನು ಕೈಬಿಡಲಾಗಿದೆ. ಇದೀಗ ಇದೇ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕನ್ನಡ ಹಾಗೂ ಕನ್ನಡ ಅಸ್ಮಿತೆ ಅಂದರೆ ಸಿಎಂ ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕೇವಲ ಚುನಾವಣಾ ವಸ್ತು, ಬಳಸಿ ಬಿಸುಟುವ ಕರವಸ್ತ್ರವಷ್ಟೇ ಎಂಬುದು ಈಗ ಮತ್ತೆ ರುಜುವಾಗಿದೆ. ನಾಡದೇವಿ ಭುವನೇಶ್ವರಿಗೆ ಪ್ರತಿಮೆ ನಿರ್ಮಾಣ ಮಾಡುವ ಯೋಜನೆ ಎಲ್ಲಾ ಅನುಮತಿಯೂ ಪಡೆದು ಅನುದಾನ ಬಿಡುಗಡೆಯಷ್ಟೇ ಬಾಕಿ ಎಂದಾಗ ಕಾಂಗ್ರೆಸ್ ಸರ್ಕಾರ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ ಎನ್ನುತ್ತಿದೆ. ಆದರೆ ಅದೇ ಬೊಕ್ಕಸದಿಂದ ತೆಗೆದು ರಾಜೀವ್ ಗಾಂಧಿಯವರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಹಣ ಒದಗಿಸಿದೆ’ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಉಪ್ಪುಂದದಲ್ಲಿ ಮುಳುಗಿದ ನಾಡದೋಣಿ: 6 ಮೀನುಗಾರರು ಅಪಾಯದಿಂದ ಪಾರು
ಬೆಂಗಳೂರಿನ ಕಲಾಗ್ರಾಮದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆಯೂ ಸೇರಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ನಮ್ಮ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಕಲಾವಿದರು ಸಿದ್ದಪಡಿಸಿದ್ದ ನಾಡದೇವಿ ಚಿತ್ರವನ್ನು ತಜ್ಞರ ಶಿಫಾರಸ್ಸಿನೊಂದಿಗೆ ಅಧಿಕೃತಗೊಳಿಸಲಾಗಿತ್ತು.
ಆದರೆ ಈಗ ಆ ಯೋಜನೆ ಅನುಷ್ಠಾನಕ್ಕೆ ಹಣವೇ ಇಲ್ಲ ಎಂದು ಕುಂಟುನೆಪವನ್ನು @INCKarnataka…
— BJP Karnataka (@BJP4Karnataka) August 1, 2023
‘ಬೆಂಗಳೂರಿನ ಕಲಾಗ್ರಾಮದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆಯೂ ಸೇರಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ನಮ್ಮ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಕಲಾವಿದರು ಸಿದ್ಧಪಡಿಸಿದ್ದ ನಾಡದೇವಿ ಚಿತ್ರವನ್ನು ತಜ್ಞರ ಶಿಫಾರಸ್ಸಿನೊಂದಿಗೆ ಅಧಿಕೃತಗೊಳಿಸಲಾಗಿತ್ತು. ಆದರೆ ಈಗ ಆ ಯೋಜನೆ ಅನುಷ್ಠಾನಕ್ಕೆ ಹಣವೇ ಇಲ್ಲ ಎಂದು ಕುಂಟುನೆಪವನ್ನು ಕಾಂಗ್ರೆಸ್ ಸರ್ಕಾರ ಹುಡುಕಿದೆ. ತಾಯಿ ಭುವನೇಶ್ವರಿ ಪ್ರತಿಮೆ ನಿರ್ಮಾಣದಿಂದ ತನ್ನ ಓಲೈಕೆ ರಾಜಕಾರಣಕ್ಕೆ ಲಾಭವಿಲ್ಲವೆಂಬ ಲೆಕ್ಕಾಚಾರ ಹಾಕಿದ ಸಿದ್ದರಾಮಯ್ಯನವರು ಗಾಂಧಿ ಕುಟುಂಬದ ಓಲೈಕೆಗೆ ನಡುಬಗ್ಗಿಸಿ ನಿಂತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
‘ಅಷ್ಟಕ್ಕೂ ರಾಜೀವ್ ಗಾಂಧಿಯವರ ಕಂಚಿನ ಪ್ರತಿಮೆ ನಿರ್ಮಿಸುತ್ತಿರುವ ಮಲ್ಲೇಶ್ವರ ಸೆಂಟ್ರಲ್ನ ವೃತ್ತಕ್ಕೆ ಈಗಾಗಲೇ ರಾಜೀವ್ ಗಾಂಧಿ ವೃತ್ತ ಎಂಬ ಹೆಸರಿದೆ. ಅಷ್ಟೇ ಅಲ್ಲದೆ ಅಲ್ಲಿ ಈಗಾಗಲೇ ಶಿಲೆಯಿಂದ ಕೆತ್ತಲಾದ ರಾಜೀವ್ ಗಾಂಧಿಯವರ ಪ್ರತಿಮೆಯಿದೆ. ಅದೇ ಜಾಗದಲ್ಲಿ ಇರುವುದನ್ನು ಕೆಡವಿ ನಿರ್ಮಿಸಲು ಹಣ ಹೊಂದಿಸುವ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಯಾವ ಧೋರಣೆ ಇದೆ ಎಂಬುದು ಭುವನೇಶ್ವರಿ ಪ್ರತಿಮೆ ನಿರಾಕರಣೆಯಲ್ಲೇ ವೇದ್ಯವಾಗುತ್ತಿದೆ. ಮೂಲತಃ ಇದು ನಮ್ಮ ನಾಡನ್ನು ತಾಯಿ, ಜನನಿ, ಜನ್ಮಭೂಮಿ ಎಂದು ಪೂಜಿಸುವ ನಮ್ಮ ಸಂಸ್ಕೃತಿಯ ನಿರಾಕರಣೆ. ಈ ಮೂಲಕ ತಾವು ತುಷ್ಟೀಕರಿಸುವ ಬಾಂಧವರನ್ನು ಸೆಳೆಯೋದು ಸಿದ್ದರಾಮಯ್ಯನವರ ಸರ್ಕಾರದ ಹುನ್ನಾರ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.
ಹಾಗಾಗಿ, ಕನ್ನಡ ತಾಯಿ ಪ್ರತಿಮಾರೂಪಿಯಾಗಿ ಜನರ ಮನಸ್ಸಲ್ಲಿ ಅಚ್ಚೊತ್ತುವುದು ಭಾರತದ ಸಂಸ್ಕೃತಿಯನ್ನು ಜನರ ಮನಸ್ಸಿಂದ ದೂರ ಇರಿಸಿ ನಂಬಿಕೆಗಳನ್ನು ವ್ಯವಸ್ಥಿತವಾಗಿ ಅಳಿಸಿ ಹಾಕುವ ಪ್ರಯತ್ನವನ್ನು @INCKarnataka ಮಾಡುತ್ತಿದೆ.
ಕನ್ನಡ ನಾಡಿಗೆ ಇರುವ ಸಹಸ್ರಾರು ವರ್ಷಗಳ ಇತಿಹಾಸವನ್ನು ಮರೆಮಾಚಲು ನಿಧಾನವಾಗಿ ನಮ್ಮತನದ ಒಂದೊಂದೇ ಸಂಕೇತಗಳನ್ನು…
— BJP Karnataka (@BJP4Karnataka) August 1, 2023
ಇದನ್ನೂ ಓದಿ: ʼನನ್ನ ಹೆಂಡತಿ ಜೊತೆಗೆ ಫೋನ್ನಲ್ಲಿ ಮಾತನಾಡಬೇಡʼ ಎಂದಿದ್ದಕ್ಕೆ ಅಣ್ಣನ ಕಥೆ ಮುಗಿಸಿದ ತಮ್ಮ..!
‘ಹೀಗಾಗಿ ಕನ್ನಡ ತಾಯಿ ಪ್ರತಿಮಾರೂಪಿಯಾಗಿ ಜನರ ಮನಸ್ಸಲ್ಲಿ ಅಚ್ಚೊತ್ತುವುದು ಭಾರತದ ಸಂಸ್ಕೃತಿಯನ್ನು ಜನರ ಮನಸ್ಸಿಂದ ದೂರ ಇರಿಸಿ ನಂಬಿಕೆಗಳನ್ನು ವ್ಯವಸ್ಥಿತವಾಗಿ ಅಳಿಸಿ ಹಾಕುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಕನ್ನಡ ನಾಡಿಗೆ ಇರುವ ಸಹಸ್ರಾರು ವರ್ಷಗಳ ಇತಿಹಾಸವನ್ನು ಮರೆಮಾಚಲು ನಿಧಾನವಾಗಿ ನಮ್ಮತನದ ಒಂದೊಂದೇ ಸಂಕೇತಗಳನ್ನು ಅಳಿಸಿಹಾಕಲಾಗುತ್ತಿದೆ. ಹೀಗಾಗಿ ತಾಯಿ ಭುವನೇಶ್ವರಿಗೆ ಮೀಸಲಿಡಬೇಕಾದ ಹಣ ಗಾಂಧಿ ಕುಟುಂಬಕ್ಕಾಗಿ ಅನಗತ್ಯ ಪೋಲಾಗುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.