Horoscope Today 06 August 2023, Rashifal, Daily Horoscope: ಭಾನುವಾರ, ಕನ್ಯಾ ರಾಶಿಯವರು ಪ್ರಯಾಣ ಕೈಗೊಳ್ಳಬಹುದು. ಮೀನ ರಾಶಿಯ ಉದ್ಯಮಿಗಳು ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವತ್ತ ಗಮನ ಹರಿಸಬೇಕಾಗುತ್ತದೆ, ಪ್ರಗತಿಯ ಮುನ್ಸೂಚನೆ ಇದೆ.
ಇದನ್ನೂ ಓದಿ: 9ನೇ ಕ್ಲಾಸ್ ಓದಿದ ಈ ಕ್ರಿಕೆಟರ್ ಇನ್ಮುಂದೆ ಟೀಂ ಇಂಡಿಯಾ ಕ್ಯಾಪ್ಟನ್! ಈತನ ಆಸ್ತಿ ಮೌಲ್ಯ ಬರೋಬ್ಬರಿ 91 ಕೋಟಿ!
ಮೇಷ ರಾಶಿ - ಮೇಷ ರಾಶಿಯ ಜನರು ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವರು. ತಮ್ಮ ಎಲ್ಲಾ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುತ್ತವೆ. ಕೊಟ್ಟ ಸಾಲ ಮತ್ತೆ ಕೈ ಸೇರುವ ಸಾಧ್ಯತೆ ಇದೆ. ಮನೆಯ ಸಮಸ್ಯೆಗಳು ಕೊನೆಗೊಳ್ಳಲಿವೆ. ಸಕಾರಾತ್ಮಕತೆ ಬರುವ ಸಾಧ್ಯತೆ ಇದೆ.
ವೃಷಭ ರಾಶಿ - ಈ ರಾಶಿಯ ಜನರು ಯಶಸ್ಸು ಸಾಧಿಸುತ್ತಾರೆ. ಇಂದು ಈಶ್ವರನನ್ನು ಆರಾಧಿಸಿದರೆ ಸಕಲ ಸಂಪತ್ತು ಪ್ರಾಪ್ತಿಯಾಗುವುದು. ಪ್ರತಿಕೂಲ ಪರಿಸ್ಥಿತಿಯಲ್ಲಿ ಯುವಕರು ತಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಬೇಕು,
ಮಿಥುನ - ಮಿಥುನ ರಾಶಿಯ ಜನರಿಗೆ ಈ ದಿನ ಅದೃಷ್ಟದ ಬೆಂಬಲ ಸಿಗುತ್ತದೆ. ಕಡಿಮೆ ಸಮಯದಲ್ಲಿ ಗುರಿಯನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ. ಭೂಮಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರು ಅಕ್ರಮ ವ್ಯವಹಾರಗಳಿಂದ ದೂರವಿರಬೇಕು.
ಕರ್ಕ ರಾಶಿ - ಈ ರಾಶಿಯ ಜನರು ಕೆಲಸವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಆರ್ಥಿಕ ಭಾಗವು ಬಲವಾಗಿರುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಅಡೆತಡೆಗಳು ದೂರವಾಗುವ ಲಕ್ಷಣ ಕಂಡುಬರುತ್ತಿದೆ.
ಸಿಂಹ ರಾಶಿ - ಸಿಂಹ ರಾಶಿಯವರಿಗೆ ಹೊಸ ಕಾರ್ಯಗಳ ಜವಾಬ್ದಾರಿ ಹೆಗಲೇರಲಿದೆ. ವ್ಯಾಪಾರ ಪರಿಸ್ಥಿತಿ ಇಂದು ಉತ್ತಮವಾಗಿರುತ್ತದೆ, ಹಣದ ವೃದ್ಧಿಯಾಗುತ್ತದೆ. ಯುವಕರು ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾಶವನ್ನು ಪಡೆಯುತ್ತಾರೆ.
ಕನ್ಯಾ ರಾಶಿ - ಕನ್ಯಾ ರಾಶಿಯ ಜನರು ಪ್ರಯಾಣ ಕೈಗೊಳ್ಳುವರು. ವ್ಯಾಪಾರ ಮಾಡುವರಿಗೆ ಲಾಭವಾಗಲಿದೆ. ಮನೆಯಲ್ಲಿ ಕ್ರಮಬದ್ಧ ಮತ್ತು ಶಿಸ್ತಿನ ವಾತಾವರಣವಿರಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸಿ.
ತುಲಾ ರಾಶಿ - ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿರುವ ತುಲಾ ರಾಶಿಯವರು ಅದನ್ನು ಪ್ರಾಮಾಣಿಕವಾಗಿ ಪೂರೈಸಲು ಪ್ರಯತ್ನಿಸಬೇಕು. ತಾಳ್ಮೆ ಮತ್ತು ಶಾಂತಿಯಿಂದ ಸಮಸ್ಯೆಗಳನ್ನು ಪರಿಹರಿಸಿ.
ವೃಶ್ಚಿಕ ರಾಶಿ - ಈ ರಾಶಿಯ ಜನರು ತಮ್ಮ ತಿಳುವಳಿಕೆ ಮತ್ತು ಸಾಮರ್ಥ್ಯದಿಂದ ವೃತ್ತಿ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಇಂದು ವ್ಯಾಪಾರದ ಪರಿಸ್ಥಿತಿಯು ಸಾಮಾನ್ಯವಾಗಿದೆ.
ಧನು ರಾಶಿ - ಧನು ರಾಶಿಯವರು ಕೆಲಸದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಉದ್ಯಮಿಗಳು ಇಂದಿನಿಂದಲೇ ವ್ಯಾಪಾರ ವಹಿವಾಟಿನ ಬಗ್ಗೆ ನೋಡಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರು ಅಭ್ಯಾಸ ಮುಂದುವರೆಸಿ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ.
ಮಕರ ರಾಶಿ - ಮಕರ ರಾಶಿಯ ಉದ್ಯೋಗಿಗಳು ಧನಾತ್ಮಕವಾಗಿ ಇತರರೊಂದಿಗೆ ವರ್ತಿಸಿ. ಈ ದಿನ ಹಳೆಯ ಸ್ನೇಹಿತರನ್ನು ಹಠಾತ್ ಭೇಟಿಯಾಗುವ ಸಾಧ್ಯತೆಯಿದೆ.
ಕುಂಭ ರಾಶಿ - ಕುಂಭ ರಾಶಿಯ ಜನರು ಇತರರ ಅನುಪಯುಕ್ತ ಮಾತುಗಳಿಗೆ ಕಿವಿಕೊಡದಿರಿ. ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ವೈದ್ಯರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಮೀನ ರಾಶಿ - ಮೀನ ರಾಶಿಯ ಉದ್ಯಮಿಗಳು ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು. ಕುಟುಂಬದ ವಾತಾವರಣವೂ ಉತ್ತಮವಾಗಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ರೋಗಗಳ ಸಾಧ್ಯತೆಯಿದೆ.
ಇದನ್ನೂ ಓದಿ: 118 ದಿನಗಳವರೆಗೆ ಈ ರಾಶಿಯ ಕೈಬಿಡಲ್ಲ ಧನಲಕ್ಷ್ಮೀ: ದುಡ್ಡಿನ ಮಳೆ, ಗುರುದೆಸೆಯಿಂದ ಅಧಿಕ ಲಾಭ-ಬದುಕು ಬಂಗಾರ!
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ