IND vs WI: ಭಾರತದ ಕಳಪೆ ಪ್ರದರ್ಶನಕ್ಕೆ ಕಳಪೆ ದಾಖಲೆ ಸೃಷ್ಟಿ: ಪೂರನ್ ದಾಳಿಗೆ ಟೀಂ ಇಂಡಿಯಾ ತತ್ತರ-Highlights ಇಲ್ಲಿದೆ

India vs West Indie News: ಗುರಿ ಬೆನ್ನತ್ತಿದ ವಿಂಡೀಸ್ ತಂಡ 32 ರನ್ ಗಳಿಗೆ ಮೊದಲ 3 ವಿಕೆಟ್ ಕಳೆದುಕೊಂಡಿತು. ಬ್ರೆಂಡನ್ ಕಿಂಗ್ (0), ಜಾನ್ಸನ್ ಚಾರ್ಲ್ಸ್ (2) ಮತ್ತು ಕೈಲ್ ಮೇಯರ್ಸ್ (15) ಬೇಗನೆ ಪೆವಿಲಿಯನ್‌ಗೆ ಮರಳಿದರು.

Written by - Bhavishya Shetty | Last Updated : Aug 7, 2023, 08:28 AM IST
    • ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ವಿಕೆಟ್‌’ಗಳ ಸೋಲು ಎದುರಿಸಬೇಕಾಯಿತು
    • ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 2-0 ಮುನ್ನಡೆ ಸಾಧಿಸಿದೆ.
    • 153 ರನ್ ಗಳ ಗುರಿ ಬೆನ್ನತ್ತಿದ ವಿಂಡೀಸ್ ತಂಡ 32 ರನ್ ಗಳಿಗೆ ಮೊದಲ 3 ವಿಕೆಟ್ ಕಳೆದುಕೊಂಡಿತು
IND vs WI: ಭಾರತದ ಕಳಪೆ ಪ್ರದರ್ಶನಕ್ಕೆ ಕಳಪೆ ದಾಖಲೆ ಸೃಷ್ಟಿ: ಪೂರನ್ ದಾಳಿಗೆ ಟೀಂ ಇಂಡಿಯಾ ತತ್ತರ-Highlights ಇಲ್ಲಿದೆ title=
IND vs WI 2nd T20

India vs West Indies, 2nd T20 Highlights: ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿ ಆಡುತ್ತಿರುವ ಭಾರತ ತಂಡದ ಕಳಪೆ ಪ್ರದರ್ಶನ ಮುಂದುವರಿದಿದೆ. ಗಯಾನಾದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ವಿಕೆಟ್‌’ಗಳ ಸೋಲು ಎದುರಿಸಬೇಕಾಯಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್‌’ಗೆ 152 ರನ್ ಗಳಿಸಿತು. ನಂತರ ವಿಂಡೀಸ್ ತಂಡ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿ 7 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.

ಇದನ್ನೂ ಓದಿ: Testನಲ್ಲಿ ಶತಕ ಸಿಡಿಸಿದ ಈ ಸ್ಟಾರ್ ಬ್ಯಾಟ್ಸ್ಮನ್’ಗೆ 2ನೇ T20 ಯಲ್ಲಿ ಸ್ಥಾನ: ಟೀಂ ಇಂಡಿಯಾ Playing 11 ಹೀಗಿದೆ

153 ರನ್ ಗಳ ಗುರಿ ಬೆನ್ನತ್ತಿದ ವಿಂಡೀಸ್ ತಂಡ 32 ರನ್ ಗಳಿಗೆ ಮೊದಲ 3 ವಿಕೆಟ್ ಕಳೆದುಕೊಂಡಿತು. ಬ್ರೆಂಡನ್ ಕಿಂಗ್ (0), ಜಾನ್ಸನ್ ಚಾರ್ಲ್ಸ್ (2) ಮತ್ತು ಕೈಲ್ ಮೇಯರ್ಸ್ (15) ಬೇಗನೆ ಪೆವಿಲಿಯನ್‌ಗೆ ಮರಳಿದರು. 4ನೇ ಕ್ರಮಾಂಕಕ್ಕೆ ಇಳಿದ ನಿಕೋಲಸ್ ಪೂರನ್ (67) ಫ್ರೀಜ್‌’ನಲ್ಲಿ ಉಳಿದು ಅರ್ಧಶತಕ ಗಳಿಸಿದರು. ಪೂರನ್ ಅವರ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ದೂಡಿತ್ತು. ನಾಯಕ ರೋವ್ಮನ್ ಪೊವೆಲ್ 21 ಮತ್ತು ಶಿಮ್ರಾನ್ ಹೆಟ್ಮೆಯರ್ 22 ರನ್ ಗಳಿಸಿದರು.

ಒಂದು ಬಾರಿ ಬಲಿಷ್ಠ ಸ್ಥಿತಿಯಲ್ಲಿದ್ದ ವಿಂಡೀಸ್ ತಂಡ 126ರಿಂದ 129 ರನ್ ಗಳ ನಡುವೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಕಿಲ್ ಹುಸೇನ್ (ಔಟಾಗದೆ 16) ಮತ್ತು ಅಲ್ಜಾರಿ ಜೋಸೆಫ್ (ಅಜೇಯ 10) ತಂಡಕ್ಕೆ ಜಯ ತಂದುಕೊಟ್ಟರು. ನಾಯಕ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರೆ, ಯಜುವೇಂದ್ರ ಚಹಾಲ್ 2 ವಿಕೆಟ್ ಪಡೆದಿದ್ದಾರೆ. ಇನ್ನುಳಿದಂರತೆ, ಅರ್ಷದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು.

ತಿಲಕ್ ವರ್ಮಾ ಅರ್ಧಶತಕ:

ಅತ್ಯುತ್ತಮ ಬೌಲಿಂಗ್ ಎದುರಿಸಿದ ತಿಲಕ್ ವರ್ಮಾ ಟಿ20 ಕ್ರಿಕೆಟ್‌’ನಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ನಿರ್ಭೀತಿಯಿಂದ ಬ್ಯಾಟಿಂಗ್ ಮಾಡಿದ ವರ್ಮಾ 41 ಎಸೆತಗಳಲ್ಲಿ 51 ರನ್ ಗಳಿಸಿದರು. ಟಿ20 ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಭಾರತದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಅವರು 39 ರನ್ ಗಳಿಸಿದ್ದರೂ ಸಹ ಸೋಲು ಕಂಡಿತ್ತು ಭಾರತ.

ಟೀಂ ಇಂಡಿಯಾ 18 ರನ್‌’ಗಳಿಗೆ 2 ವಿಕೆಟ್ ಕಳೆದುಕೊಂಡಾಗ ವರ್ಮಾ ಬ್ಯಾಟಿಂಗ್‌\ಗೆ ಬಂದರು. ಇಶಾನ್ ಕಿಶನ್ (27) ಜೊತೆಗೂಡಿ 42 ರನ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ 38 ರನ್ ಜೊತೆಯಾಟವನ್ನು ಹಂಚಿಕೊಂಡರು. ಹಾರ್ದಿಕ್ (24) 2 ಸಿಕ್ಸರ್ ಬಾರಿಸುವ ಮೂಲಕ ಭಾರತದ ಸ್ಕೋರ್ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಜೋಸೆಫ್ ಯಾರ್ಕರ್ನಲ್ಲಿ ಅಲ್ಜಾರಿ ವಿಕೆಟ್ ಕಳೆದುಕೊಂಡರು.

ನಿಗದಿತ ಅಂತರದಲ್ಲಿ ವಿಕೆಟ್‌’ಗಳು ಬೀಳುತ್ತಲೇ ಇದ್ದುದರಿಂದ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ನಿರ್ಧಾರವು ತಪ್ಪು ಎಂದು ಸಾಬೀತಾಯಿತು. ವೆಸ್ಟ್ ಇಂಡೀಸ್ ನಾಯಕ ರೋವ್ ಮನ್ ಪೊವೆಲ್ ಬೌಲರ್ ಗಳನ್ನು ಸರಿಯಾಗಿ ಬಳಸಿಕೊಂಡಿದ್ದು ಕಂಡುಬಂತು. ಓಪನರ್ ಇಶಾನ್ ಕಿಶನ್ ಕೂಡ ಅಕಿಲ್ ಹುಸೇನ್ ಅವರ 23 ಎಸೆತಗಳ ಇನ್ನಿಂಗ್ಸ್‌’ನಲ್ಲಿ ಸಿಕ್ಸರ್‌ಗೆ ಹೊಡೆದರು. ಆದರೆ ರೊಮಾರಿಯೊ ಶೆಫರ್ಡ್ ಅವರಿಂದ ಔಟಾದರು. ಶುಭಮನ್ ಗಿಲ್ (7) ಮತ್ತೊಮ್ಮೆ ವಿಫಲರಾಗಿದ್ದರು. ಉಪನಾಯಕ ಸೂರ್ಯಕುಮಾರ್ ಯಾದವ್ ಕೂಡ ಒಂದು ರನ್ ಗಳಿಸಿ ರನೌಟ್ ಆದರು. ಕೈಲ್ ಮೈಯರ್ಸ್ ಸ್ಕ್ವೇರ್ ಲೆಗ್‌’ನಿಂದ ನಿಖರವಾದ ಎಸೆತವನ್ನು ಎಸೆಯುವ ಮೂಲಕ ಅವರನ್ನು ಔಟ್ ಮಾಡಿದರು. ಸಂಜು ಸ್ಯಾಮ್ಸನ್ (7) ಕೂಡ ಹೇಳಿಕೊಳ್ಳುವಂತಹದ್ದೇನು ಮಾಡಿಲ್ಲ.  

ಇನ್ನು ವಿಂಡೀಸ್ ಅಕಿಲ್ ಹುಸೇನ್, ಅಲ್ಜಾರಿ ಜೋಸೆಫ್ ಮತ್ತು ಶೆಫರ್ಡ್ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ: MS Dhoni Daughter: ಧೋನಿ ಮಗಳು ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ..?

ಭಾರತದ ಪಾಲಿಗೆ ಕಳಪೆ ದಾಖಲೆ:

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಮತ್ತೆ ಸೋಲನುಭವಿಸಿದೆ. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಟಿ20ಯಲ್ಲಿ ಏಷ್ಯನ್ ತಂಡವಾಗಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡವಾಗಿ ಜಂಟಿಯಾಗಿ ಮೊದಲ ಸ್ಥಾನವನ್ನು ತಲುಪಿದೆ. ಸರಣಿಯಲ್ಲಿ ಭಾರತ ಇನ್ನೊಂದು ಪಂದ್ಯ ಸೋತರೆ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News