IND vs WI 2nd T20 Team India Probable Playing 11: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ T20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ಹೀಗಿರುವಾಗ ಸರಣಿಯ ಎರಡನೇ ಪಂದ್ಯ ಟೀಂ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಮೊದಲ ಪಂದ್ಯದ ಸೋಲಿನ ನಂತರ ಟೀಂ ಇಂಡಿಯಾದ ಪ್ಲೇಯಿಂಗ್ 11ರಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದಾಗಿದೆ.
ಇದನ್ನೂ ಓದಿ: Asia Cupಗೂ ಮುನ್ನ ತಂಡಕ್ಕೆ ಹೊಸ ನಾಯಕನ ನೇಮಕ! ಈ ಸ್ಟಾರ್ ಆಟಗಾರನಿಗೆ ಮತ್ತೆ ‘ಪಟ್ಟಾಭಿಷೇಕ’
ಈ ಪಂದ್ಯದಲ್ಲಿ, ಐಪಿಎಲ್ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಬ್ಯಾಟ್ಸ್‌ಮನ್’ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಈ ಆಟಗಾರ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೂ ಸಖತ್ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ್ದ.
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಇದೀಗ ಎರಡನೇ ಟಿ20 ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ತೆಗೆದುಕೊಳ್ಳುವ ಸವಾಲು ನಾಯಕ ಹಾರ್ದಿಕ್ ಪಾಂಡ್ಯ ಮುಂದಿದೆ. ಹೀಗಿರುವಾಗ ಅವರು ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸುವ ಸಾಧ್ಯತೆ ಇದೆ.
ಟೆಸ್ಟ್ ಚೊಚ್ಚಲ ಪಂದ್ಯದ ಪಂದ್ಯದ ಗೆಲುವಿನ ಇನ್ನಿಂಗ್ಸ್:
ಯಶಸ್ವಿ ಜೈಸ್ವಾಲ್ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ಗೆ ಪದಾರ್ಪಣೆ ಮಾಡಿ, ಅದ್ಭುತ 171 ರನ್ ಗಳಿಸಿದ್ದರು. ಇದೇ ಸರಣಿಯ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದರು. ಯಶಸ್ವಿ ಜೈಸ್ವಾಲ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದು, ಕ್ಯಾಪ್ಟನ್ ಪಾಂಡ್ಯ ಇದರ ಲಾಭ ಪಡೆಯಬಹುದು.
ಇದನ್ನೂ ಓದಿ: 2ನೇ ಟಿ-20ಯಲ್ಲಿಯೂ ಭಾರತ ಸೋತರೆ ಹೆಗಲೇರಲಿದೆ ಇತಿಹಾಸದಲ್ಲೇ ಕಂಡಿರದ ಈ ಕಳಪೆ ದಾಖಲೆ!
ಯಶಸ್ವಿ ಜೈಸ್ವಾಲ್ ಅವರನ್ನು ಪ್ಲೇಯಿಂಗ್ 11’ಗೆ ಸೇರಿಸಿದರೆ ಟೀಂ ಇಂಡಿಯಾಗೆ ಪ್ರಯೋಜನವಾಗಲಿದೆ. ಯಶಸ್ವಿ ಇತ್ತೀಚೆಗಷ್ಟೇ ಐಪಿಎಲ್ 16 ನೇ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ತಂಡದ ಅತಿ ಹೆಚ್ಚು (14 ಪಂದ್ಯಗಳಲ್ಲಿ 625 ರನ್) ರನ್ ಸ್ಕೋರರ್ ಆಗಿದ್ದರು. 17 ಪ್ರಥಮ ದರ್ಜೆ ಪಂದ್ಯಗಳು, 32 ಲಿಸ್ಟ್ ಎ ಮತ್ತು 57 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್’ನಲ್ಲೂ ದ್ವಿಶತಕ ಬಾರಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ 10 ಶತಕಗಳನ್ನು, ಲಿಸ್ಟ್ A ನಲ್ಲಿ 5 ಮತ್ತು T20 ನಲ್ಲಿ ಒಂದು ಶತಕವನ್ನು ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 2111 ರನ್, ಲಿಸ್ಟ್ ಎ ನಲ್ಲಿ 1511 ಮತ್ತು ಟಿ20ಯಲ್ಲಿ 1578 ರನ್ ಸೇರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ