Harley Davidson X440 Booking: Harley-Davidson X440 ಬೈಕ್ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಅನೇಕರ ಕನಸಿನ ಬೈಕ್ ಆಗಿರುವ ಈ ಹೊಸ ಬೈಕ್ಅನ್ನು ಇದುವರೆಗೆ ಒಟ್ಟು 25,597 ಜನರು ಬುಕ್ ಮಾಡಿದ್ದಾರೆ. ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಯಾದ Hero MotoCorp ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿದೆ. ಜುಲೈ 4ರಂದು ಪ್ರಾರಂಭವಾದ ಬುಕಿಂಗ್ ಅನ್ನು ಈಗ ಕ್ಲೋಸ್ ಮಾಡಲಾಗಿದ್ದು, ಮರು-ಬುಕಿಂಗ್ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೀರೊ ಮೋಟೊಕಾರ್ಪ್ನ ಸಿಇಒ ನಿರಂಜನ್ ಗುಪ್ತಾ ಮಾತನಾಡಿ, ‘ಈ ವಿಭಾಗದಲ್ಲಿ ಹೀರೊ ಮೋಟೊಕಾರ್ಪ್ನ ಪ್ರವೇಶದಲ್ಲಿ ಗ್ರಾಹಕರ ವಿಶ್ವಾಸವನ್ನು ನೋಡುವುದು ಅದ್ಭುತವಾಗಿದೆ. ನಮ್ಮ ಹೆಚ್ಚಿನ ಬುಕಿಂಗ್ಗಳು ಟಾಪ್ ಮಾಡೆಲ್ಗಳಿಗೆ ಆಗಿರುವುದು ಇನ್ನೂ ಹೆಚ್ಚು ಸಂತೋಷಕರ ಸಂಗತಿಯಾಗಿದೆ. ಸರಿಯಾದ ಬ್ರಾಂಡ್ ಮತ್ತು ಸರಿಯಾದ ಮಾದರಿಗಾಗಿ ಗ್ರಾಹಕರು ಹೆಚ್ಚು ಪಾವತಿಸಲು ಸಿದ್ಧರಾಗಿದ್ದಾರೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. Harley-Davidson X440 ಬೈಕ್ ಖರೀದಿಸಲು ಭಾರತೀಯ ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ’ ಅಂತಾ ಅವರು ಹೇಳಿದ್ದಾರೆ.
ಇದನ್ನೂ ಓದಿ: ಟಿಕೆಟ್ ನಿಯಮಗಳಲ್ಲಿ ಬದಲಾವಣೆ ತಂದ ಭಾರತೀಯ ರೈಲ್ವೆ !
Harley-Davidson X440ಅನ್ನು Denim, Vivid ಮತ್ತು S ಎಂಬ 3 ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. Hero MotoCorp ಸೆಪ್ಟೆಂಬರ್ 2023ರಲ್ಲಿ Harley-Davidson X440 ಉತ್ಪಾದನೆಯನ್ನು ಪ್ರಾರಂಭಿಸಲಿದ್ದು, ಅಕ್ಟೋಬರ್ನಿಂದ ಗ್ರಾಹಕರಿಗೆ ಬೈಕ್ ತಲುಪಿಸಲಿದೆ ಎಂದು ಹೇಳಲಾಗಿದೆ.
ಹಾರ್ಲೆ-ಡೇವಿಡ್ಸನ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ಹೊಸ X440ಅನ್ನು 2.29 ಲಕ್ಷ ರೂ. (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಇದು ವಿಶೇಷ ಪರಿಚಯಾತ್ಮಕ ಬೆಲೆಯ ಕೊಡುಗೆಯಾಗಿದ್ದು, ಅದು ಈಗ ಕೊನೆಗೊಂಡಿದೆ. ಕಂಪನಿಯು ಈ ಮೋಟಾರ್ಸೈಕಲ್ನ ಎಲ್ಲಾ ರೂಪಾಂತರಗಳ ಬೆಲೆಗಳನ್ನು ಈಗ 10,500 ರೂ.ಗಳಷ್ಟು ಹೆಚ್ಚಿಸಿದೆ. ಹೊಸ ಬೆಲೆಗಳು 4 ಆಗಸ್ಟ್ 2023ರಿಂದ ಜಾರಿಗೆ ಬಂದಿವೆ.
Harley Davidson X440ನ ಹೊಸ ಬೆಲೆಗಳು
ಈ ಹಿಂದೆ 2.29 ಲಕ್ಷ ರೂ. ಇದ್ದ Harley Davidson X440 Denim ಬೆಲೆ ಈಗ 2.40 ಲಕ್ಷ ರೂ. ಆಗಿದೆ.
ಈ ಹಿಂದೆ 2.49 ಲಕ್ಷ ರೂ. ಇದ್ದ Harley Davidson X440 Vivid ಬೆಲೆ ಈಗ 2.60 ಲಕ್ಷ ರೂ.ಗೆ ಏರಿಕೆಯಾಗಿದೆ.
ಈ ಹಿಂದೆ 2.69 ಲಕ್ಷ ರೂ. ಇದ್ದ Harley Davidson X440 Sನ ಬೆಲೆ ಈಗ 2.80 ಲಕ್ಷ ರೂ. ಆಗಿದೆ.
ಇದನ್ನೂ ಓದಿ: FASTag ರೀಚಾರ್ಜ್ ಮಾಡಲು ಐದು ಸುಲಭ ಮಾರ್ಗಗಳಿವು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.