ನವದೆಹಲಿ: ಲೋಕಸಭೆಯ ಆರನೇ ಹಂತದಲ್ಲಿ ಉತ್ತರ ಪ್ರದೇಶ, ಹರಿಯಾಣ, ಬಿಹಾರ, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ 59 ಸ್ಥಾನಗಳಳಿಗಾಗಿ ಮತದಾನ ನಡೆಯಿತು.
Lok Sabha Election 2019: Total 46.52% voting till 3 pm in #Phase6. West Bengal- 63.09, Delhi-36.73, Haryana- 47.57 Uttar Pradesh- 40.96, Bihar- 43.86, Jharkhand- 54.09, Madhya Pradesh- 48.53 pic.twitter.com/pCzgRAvWmC
— ANI (@ANI) May 12, 2019
ಈಗ ಮೂರು ಗಂಟೆಯವರೆಗೆ ಚುನಾವಣಾ ಆಯೋಗ ಸಂಗ್ರಹಿಸಿರುವ ಅಂಕಿ ಅಂಶಗಳ ಪ್ರಕಾರ ಒಟ್ಟು 50.41 ರಷ್ಟು ಮತದಾನ ದಾಖಲಾಗಿದೆ ಎಂದು ತಿಳಿದು ಬಂದಿದೆ. ಅಚ್ಚರಿ ಎಂದರೆ ಪಶ್ಚಿಮ.ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವಿನ ಹಿಂಸಾಚಾರದ ನಡುವೆಯೂ ಸಾಯಂಕಾಲ 3 ಗಂಟೆ ವೇಳೆಗೆ 70.31% ರಷ್ಟು ಮತದಾನ ದಾಖಲಾಗಿದೆ.
ಬಿಹಾರ -44.40%
ಹರಿಯಾಣ- 51.45%
ಮಧ್ಯ ಪ್ರದೇಶ- 52.44%
ಉತ್ತರ ಪ್ರದೇಶ- 43.26%
ಪಶ್ಚಿಮ ಬಂಗಾಳ- 70.31%
ಜಾರ್ಖಂಡ್- 58.08%
ದೆಹಲಿ -44.98%
ಆರನೇ ಹಂತದ ಚುನಾವಣೆಯಲ್ಲಿ ಶೀಲಾ ದೀಕ್ಷಿತ್, ಬಾಕ್ಸರ್ ವಿಜೇಂದರ್ ಸಿಂಗ್, ಕೇಂದ್ರ ಸಚಿವ ಹರ್ಷವರ್ಧನ್, ಗೌತಮ್ ಗಂಭೀರ್ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕೇಂದ್ರ ಸಚಿವೆ ಮನೇಕಾ ಗಾಂಧಿ ರಂತಹ ಘಟಾನುಘಟಿಗಳು ಕಣದಲ್ಲಿದ್ದಾರೆ.