ನವದೆಹಲಿ: ಫರಿದಾಬಾದ್ ನಲ್ಲಿ ಮತದಾನದ ಕೇಂದ್ರದ ಒಳಗಡೆ ಪ್ರಭಾವ ಬೀರಲು ಪ್ರಯತ್ನಿಸಿದ ವ್ಯಕ್ತಿಯನ್ನು ಈಗ ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರು ಧೃಡಪಡಿಸಿದ್ದಾರೆ.
ये विडियो किसी ने भेजा है और हरियाणा के फरीदाबाद का होने का दावा किया है| इससे क्या फर्क पड़ता है कि ये कब का और कहाँ का है? लेकिन हैरान और दुखी हूँ ये देखकर कि सिस्टम कई बार कितना नपुंसक हो जाता है? ये नीच हरकत है🤔 pic.twitter.com/R8SRQ6U5aP
— Anurag Dhanda (@anuragdhanda) May 12, 2019
ಇದೇ ವೇಳೆ ಜಿಲ್ಲಾ ಚುನಾವಣಾ ಕಚೇರಿ ಫರಿದಾಬಾದ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮತದಾನದ ವೇಳೆ ಯಾವುದೇ ರಾಜಿ ಮಾಡಿಕೊಂಡಿಲ್ಲವೆಂದು ಎಂದು ತಿಳಿಸಿದೆ. ಬಂಧಿಸಿರುವ ವ್ಯಕ್ತಿಯನ್ನು ಪೋಲ್ ಏಜಂಟ್ ಎಂದು ಗುರುತಿಸಲಾಗಿದ್ದು ಈಗ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.ಚುನಾವಣಾ ವಿಕ್ಷಕರಾಗಿರುವ ಸಂಜಯ್ ಕುಮಾರ್ ಇಡೀ ಪ್ರಕರಣದ ವಿಚಾರವನ್ನು ತನಿಖೆ ಮಾಡುತ್ತಿದ್ದಾರೆ ಎಂದು ಡಿಇಒ ತಿಳಿಸಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಪೋಲಿಸ್ ಏಜೆಂಟ್ ಎಂದು ಈಗ ಗುರುತಿಸಲ್ಪಟ್ಟಿದ್ದ ನೀಲಿ ಟಿ-ಶರ್ಟ್ನಲ್ಲಿರುವ ವ್ಯಕ್ತಿ ಮತಗಟ್ಟೆ ಕೇಂದ್ರದ ಬಳಿ ಹೋಗಿ ಇವಿಎಮ್ನಲ್ಲಿ ನಿರ್ಧಿಷ್ಟ ಪಕ್ಷದ ಚಿಹ್ನೆ ಮತ ಹಾಕಲು ಸೂಚಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು. ಬಹುತೇಕರು ಚುನಾವಣಾ ಆಯೋಗಕ್ಕೆ ಟ್ಯಾಗ್ ಮಾಡಿ ಕ್ರಮ ಆ ವ್ಯಕ್ತಿಯ ಮೇಲೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ.ಈಗ ಬಂಧಿತನಾಗಿರುವ ವ್ಯಕ್ತಿಯ ರಾಜಕೀಯ ಪಕ್ಷದ ಬಗ್ಗೆ ತಿಳಿದಿಲ್ಲವೆನ್ನಲಾಗಿದೆ.
ಭಾನುವಾರದಂದು ನಡೆದ ಆರನೇ ಹಂತದ ಚುನಾವಣೆ ವೇಳೆ ಫರಿದಾಬಾದ್ ನಲ್ಲಿ ಮತದಾನ ನಡೆದಿತ್ತು.ಶೇ 64.48 ರಷ್ಟು ಮತದಾನ ದಾಖಲಾಗಿತ್ತು. 2014 ರ ಚುನಾವಣೆಯಲ್ಲಿ ಶೇ 64.98 ರಷ್ಟು ದಾಖಲೆಯ ಮತದಾನವಾಗಿತ್ತು.