ದುರ್ಯೋಧನನ ಅಬ್ಬರಕ್ಕೆ ಡೇಟ್ ಫಿಕ್ಸ್: ಆಗಸ್ಟ್ 9ಕ್ಕೆ ಕುರುಕ್ಷೇತ್ರ ರಿಲೀಸ್!

ದರ್ಶನ್ ಅಭಿನಯದ 50ನೇ ಚಿತ್ರ ಇದಾಗಿದ್ದು, ದುರ್ಯೋಧನನಾಗಿ ಆಗಸ್ಟ್ 9ರಂದು ತೆರೆಯ ಮೇಲೆ ಬರಲಿದ್ದಾರೆ. 

Last Updated : May 19, 2019, 01:52 PM IST
ದುರ್ಯೋಧನನ ಅಬ್ಬರಕ್ಕೆ ಡೇಟ್ ಫಿಕ್ಸ್: ಆಗಸ್ಟ್ 9ಕ್ಕೆ ಕುರುಕ್ಷೇತ್ರ ರಿಲೀಸ್! title=

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕುರುಕ್ಷೇತ್ರ' ಸಿನಿಮಾ ಬಿಡುಗಡೆ ದಿನಾಂಕ ಕಡೆಗೂ ನಿಗದಿಯಾಗಿದೆ. 

ದರ್ಶನ್ ಅಭಿನಯದ 50ನೇ ಚಿತ್ರ ಇದಾಗಿದ್ದು, ದುರ್ಯೋಧನನಾಗಿ ಆಗಸ್ಟ್ 9ರಂದು ತೆರೆಯ ಮೇಲೆ ಬರಲಿದ್ದಾರೆ. ದರ್ಶನ್ ಜೊತೆಗೆ ಅಭಿಮನ್ಯು ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಿದ್ದು, ಚಿತ್ರ ಸೂಪರ್ ಹಿಟ್ ಆಗುವ ನಿರೀಕ್ಷೆ ಚಿತ್ರತಂಡ ಇದೆ. 

ಚಿತ್ರ ಬಿಡುಗಡೆ ಬಗ್ಗೆ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರದ ನಿರ್ಮಾಪಕ ಮುನಿರತ್ನ, ಜುಲೈ ಮೊದಲ ವಾರ 'ಕುರುಕ್ಷೇತ್ರ' ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು, ಆಗಸ್ಟ್‌ 9ರಂದು 2ಡಿ ಮತ್ತು 3ಡಿ ವರ್ಷನ್‌ ನಲ್ಲಿ ಚಿತ್ರ ವಿಶ್ವದಾದ್ಯಂತ ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಸೇರಿದಂತೆ ನಾಲ್ಕೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದು, ದೇವರಾಜ್, ಅರ್ಜನ್ ಸರ್ಜಾ, ರವಿಚಂದ್ರನ್, ಯಶಸ್ ಸೂರ್ಯ, ಹರಿಪ್ರಿಯಾ, ನಿಖಿಲ್ ಕುಮಾರಸ್ವಾಮಿ, ಚಂದನ್, ಸೃಜನ್ ಲೋಕೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅದ್ದೂರಿ ಮೇಕಿಂಗ್ ಹೊಂದಿರುವ ಈ ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ತೆರೆಯ ಮೇಲೆ ಚಿತ್ರ ವೀಕ್ಷಣೆಗೆ ಸಿನಿಪ್ರಿಯರು ಕಾದುಕುಳಿತಿದ್ದಾರೆ.
 

Trending News