ಭಾರತದ ನಂ.4 ಸ್ಥಾನಕ್ಕೆ ಸಿಕ್ಕಾಯ್ತು ಯುವಿಯಂತೆ ಫಿನಿಶಿಂಗ್ ಮಾಡಬಲ್ಲ 20ರ ಹರೆಯದ ಸ್ಫೋಟಕ ಬ್ಯಾಟರ್!

Team India No.4 Batting: ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ನಂಬರ್-4 ಬ್ಯಾಟ್ಸ್‌ಮನ್‌’ಗಳಾಗಿ ಅತ್ಯುತ್ತಮ ಪಂದ್ಯವನ್ನಾಡಬಹುದು. ಆದರೆ ಈ ಸ್ಥಾನಕ್ಕೆ ಈಗಾಗಲೇ 8 ಆಟಗಾರರನ್ನು ಪರೀಕ್ಷೆ ಮಾಡಲಾಗಿದೆ.

Written by - Bhavishya Shetty | Last Updated : Aug 22, 2023, 09:59 AM IST
    • ಈ ಬಾರಿಯ ವಿಶ್ವಕಪ್ 2023ನ್ನು ಭಾರತದ ನೆಲದಲ್ಲಿ ಆಯೋಜಿಸಲಾಗಿದೆ
    • ಟೀಂ ಇಂಡಿಯಾದ ನಂಬರ್ 4ರ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಕ್ರಿಕೆಟಿಗ ಯಾರು?
    • ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಗರಿಷ್ಠ 8 ಪಂದ್ಯಗಳನ್ನು ಆಡಿದ್ದಾರೆ
ಭಾರತದ ನಂ.4 ಸ್ಥಾನಕ್ಕೆ ಸಿಕ್ಕಾಯ್ತು ಯುವಿಯಂತೆ ಫಿನಿಶಿಂಗ್ ಮಾಡಬಲ್ಲ 20ರ ಹರೆಯದ ಸ್ಫೋಟಕ ಬ್ಯಾಟರ್!  title=
Tilak Varma

Team India Cricket News: ಈ ಬಾರಿಯ ವಿಶ್ವಕಪ್ 2023ನ್ನು ಭಾರತದ ನೆಲದಲ್ಲಿ ಆಯೋಜಿಸಲಾಗಿದೆ. ಈ ಟೂರ್ನಿ ಅಕ್ಟೋಬರ್ 5 ರಿಂದ ಆರಂಭವಾಗಲಿದ್ದು, ನವೆಂಬರ್ 19 ರಂದು ಪ್ರಶಸ್ತಿ ಪಂದ್ಯ ನಡೆಯಲಿದೆ. ಆದರೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಮಸ್ಯೆಗಳು ಬಗೆಹರಿದಿಲ್ಲ. ಟೀಂ ಇಂಡಿಯಾದ ನಂಬರ್ 4ರ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಕ್ರಿಕೆಟಿಗ ಯಾರು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.  

ಇದನ್ನೂ ಓದಿ: ಕೊಹ್ಲಿ, ರೋಹಿತ್ ಬಳಿಕ ಟೀಂ ಇಂಡಿಯಾದ ಸೂಪರ್’ಸ್ಟಾರ್ ಆಟಗಾರರು ಈ ಇಬ್ಬರು ಬ್ಯಾಟ್ಸ್’ಮನ್’ಗಳು

ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ನಂಬರ್-4 ಬ್ಯಾಟ್ಸ್‌ಮನ್‌’ಗಳಾಗಿ ಅತ್ಯುತ್ತಮ ಪಂದ್ಯವನ್ನಾಡಬಹುದು. ಆದರೆ ಈ ಸ್ಥಾನಕ್ಕೆ ಈಗಾಗಲೇ 8 ಆಟಗಾರರನ್ನು ಪರೀಕ್ಷೆ ಮಾಡಲಾಗಿದೆ. ರಿಷಬ್ ಪಂತ್ ಈಗಾಗಲೇ ಗಾಯದ ಕಾರಣದಿಂದ ಚೇತರಿಸಿಕೊಳ್ಳುತ್ತಿದ್ದು, ಇತ್ತೀಚೆಗೆಯಷ್ಟೇ ಬ್ಯಾಟಿಂಗ್ ಮಾಡುವತ್ತ ಗಮನಹರಿಸಿದ್ದರು. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಏಷ್ಯಾಕಪ್ ಪಂದ್ಯಕ್ಕೆ ಆಯ್ಕೆಯಾಗಿದ್ದು, ಇಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ವಿಶ್ವಕಪ್ ಸ್ಥಾನ ನಿರ್ಧಾರವಾಗಲಿದೆ.

ಅಂಕಿಅಂಶಗಳ ಪ್ರಕಾರ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಗರಿಷ್ಠ 8 ಪಂದ್ಯಗಳನ್ನು ಆಡಿದ್ದಾರೆ. ಶ್ರೇಯಸ್ ಅಯ್ಯರ್ ಎರಡು ಬಾರಿ ಐವತ್ತು ರನ್ ಗಡಿ ದಾಟಿದ್ದು, 90.2 ಸ್ಟ್ರೈಕ್ ರೇಟ್‌’ನೊಂದಿಗೆ 57 ರ ಸರಾಸರಿಯಲ್ಲಿ 342 ರನ್ ಗಳಿಸಿದ್ದಾರೆ. ರಿಷಬ್ ಪಂತ್ 37.43 ರ ಸರಾಸರಿಯಲ್ಲಿ ಮತ್ತು 100.8 ರ ಸ್ಟ್ರೈಕ್ ರೇಟ್‌;ನಲ್ಲಿ 4 ನೇ ಕ್ರಮಾಂಕದಲ್ಲಿ 262 ರನ್ ಗಳಿಸಿದ್ದಾರೆ. ರಿಷಬ್ ಪಂತ್  ಕೂಡ ಎರಡು ಬಾರಿ ಐವತ್ತು ರನ್‌ಗಳ ಗಡಿ ದಾಟಿದ್ದಾರೆ.

ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಹೊರತುಪಡಿಸಿ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಅವರನ್ನು ನಂಬರ್-4 ರಲ್ಲಿ ಪ್ರಯತ್ನಿಸಿದ್ದರೂ ನಿರೀಕ್ಷೆಗೆ ತಕ್ಕ ಫಲ ಸಿಗಲಿಲ್ಲ.

ಇದನ್ನೂ ಓದಿ: ಏಷ್ಯಾ ಕಪ್’ಗೆ ಆಯ್ಕೆಯಾದ ಟೀಂ ಇಂಡಿಯಾ ಆಟಗಾರರ ಏಕದಿನ ಕ್ರಿಕೆಟ್ ದಾಖಲೆಗಳು ಹೇಗಿವೆ ಗೊತ್ತಾ?

ಆದರೆ ಸದ್ಯ ಅನೇಕ ಕ್ರಿಕೆಟ್ ಅಭಿಮಾನಿಗಳ ಪ್ರಕಾರ ಭಾರತದಲ್ಲಿ ನಂಬರ್ ಸ್ಥಾನಕ್ಕೆ ಸರಿಹೊಂದುವ ಆಟಗಾರನೆಂದರೆ ಅದು ತಿಲಕ್ ವರ್ಮ. ಯುವರಾಜ್ ಸಿಂಗ್ ನಿವೃತ್ತಿ ಬಳಿಕ ಆ ಸ್ಥಾನದಲ್ಲಿ ಯಾವೊಬ್ಬ ಆಟಗಾರನು ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ. ಇದೀಗ ಯುವ ಪ್ರತಿಭೆ ತಿಲಕ್ ಟೀಂ ಇಂಡಿಯಾದಲ್ಲಿ ಅಬ್ಬರಿಸುತ್ತಿದ್ದು, ಆತನೇ ನಂ.4 ಸ್ಥಾನಕ್ಕೆ ಬೆಸ್ಟ್ ಎಂಬ ಮಾತುಗಳು ಕೇಳಿಬರುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News