Rahu Keta Gochar: ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ದೇವನನ್ನು ಬಿಟ್ಟರೆ ರಾಹು-ಕೇತು ಗ್ರಹಗಳು ಅತಿ ನಿಧಾನವಾಗಿ ಚಲಿಸುವ ಗ್ರಹಗಳು. ಸದಾ ಹಿಮ್ಮುಖವಾಗಿಯೇ ಚಲಿಸುವ ಈ ಗ್ರಹಗಳು ಸುಮಾರು ಒಂದೂವರೆ ವರ್ಷಗಳಿಗೆ ಒಮ್ಮೆ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ಎರಡೂ ಗ್ರಹಗಳು ಈ ವರ್ಷ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಎಂದರೆ ಅಕ್ಟೋಬರ್ 30, 2023ರಂದು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಅಕ್ಟೋಬರ್ 30, 2023ರಂದು ರಾಹು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿ ಮೀನ ರಾಶಿಯನ್ನು ಪ್ರವೇಶಿಸಿದರೆ, ಇದೆ ದಿನ ಕೇತು ಗ್ರಹ ಕನ್ಯಾ ರಾಶಿಯನ್ನು ಪ್ರವೇಶಿಸಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ದುಷ್ಟ ಗ್ರಹಗಳು, ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ಈ ಗ್ರಹಗಳ ಸಂಚಾರದಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮವನ್ನು ಬೀರುತ್ತದೆ. ಜಾತಕದಲ್ಲಿ ಈ ಕ್ರೂರ ಗ್ರಹಗಳು ಶುಭ ಸ್ಥಾನದಲ್ಲಿದ್ದಾರೆ ಬಿಕ್ಷುಕನನ್ನು ಲಕ್ಷಾಧಿಪತಿಯನ್ನಾಗಿ ಮಾಡುವಷ್ಟು ಪ್ರಭಾವ ಹೊಂದಿರುವ ಗ್ರಹಗಳು. ಅಂತೆಯೇ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಈ ಗ್ರಹಗಳು ಅಶುಭ ಸ್ಥಾನದಲ್ಲಿದ್ದರೆ ಈ ಸಮಯದಲ್ಲಿ ವ್ಯಕ್ತಿಯ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಸುತ್ತವೆ ಎಂದು ಹೇಳಲಾಗುತ್ತದೆ. ಸದ್ಯ 2023ರಲ್ಲಿ ಈ ಗ್ರಹಗಳ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಮೇಲೆ ಏನು ಪರಿಣಾಮ ಬೀರಲಿದೆ ಎಂದು ತಿಳಿಯೋಣ...
ಈ ವರ್ಷ ರಾಹು-ಕೇತು ಗ್ರಹಗಳ ಸಂಚಾರ ಬದಲಾವಣೆ: ನಿಮ್ಮ ಮೇಲೆ ಏನು ಪರಿಣಾಮ:
ಮೇಷ ರಾಶಿ:
ಈ ವರ್ಷ ರಾಹು-ಕೇತು ಗ್ರಹಗಳ ಸಂಚಾರ ಬದಲಾವಣೆಯು ಮೇಷ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಒಳ್ಳೆಯ ಅವಕಾಶಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಮಧುರವಾದ ಮಾತೇ ನಿಮಗೆ ಬಂಡವಾಳವಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿ.
ವೃಷಭ ರಾಶಿ:
ವೃಷಭ ರಾಶಿಯವರು ನಿಮ್ಮ ಆವೇಶ, ಕೋಪವನ್ನು ನಿಯಂತ್ರಿಸಿ ಮುಂದೆ ಸಾಗಿದರಷ್ಟೇ ಪರಿಸ್ಥಿತಿಯನ್ನು ಸುಧಾರಿಸಬಹುದು. ಇಲ್ಲದಿದ್ದರೆ, ಸಂಕಷ್ಟಗಳು ಹೆಚ್ಚಾಗುತ್ತವೆ. ಆದಾಗ್ಯೂ, ಮಕ್ಕಳ ವಿಷಯದಲ್ಲಿ ಶುಭ ವಾರ್ತೆಗಳನ್ನು ಕೇಳುವಿರಿ. ಹಣಕಾಸಿನ ವಿಚಾರದಲ್ಲಿಯೂ ಸಮಯ ಅತ್ಯುತ್ತಮವಾಗಿದೆ ಎಂತಲೇ ಹೇಳಬಹುದು.
ಇದನ್ನೂ ಓದಿ- Shani Vakri 2023: ನವೆಂಬರ್ 3ರವರೆಗೆ ಈ ರಾಶಿಯವರಿಗೆ ಹಣ, ಸುಖ, ಸಂಪತ್ತು ಎಲ್ಲವನ್ನೂ ನೀಡಲಿದ್ದಾನೆ ಶನಿ
ಮಿಥುನ ರಾಶಿ:
ರಾಹು-ಕೇತು ಗ್ರಹಗಳ ರಾಶಿ ಪರಿವರ್ತನೆಯು ಮಿಥುನ ರಾಶಿಯವರ ಜೀವನದಲ್ಲಿ ಸುಖ-ಸಂತೋಷವನ್ನು ತರಲಿವೆ. ಈ ಸಮಯದಲ್ಲಿ ವ್ಯಾಪಾರ-ವ್ಯವಹಾರದಲ್ಲಿಯೂ ಪ್ರಗತಿ ಕಂಡು ಬರಲಿದೆ. ಬಿಸಿನೆಸ್ ಸಂಬಂಧಿತ ಪ್ರಯಾಣಗಳು ಲಾಭದಾಯಕವಾಗಿರಲಿವೆ.
ಕರ್ಕಾಟಕ ರಾಶಿ:
ಅಕ್ಟೋಬರ್ ಮಾಸದಲ್ಲಿ ರಾಹು-ಕೇತು ಗ್ರಹಗಳ ಸಂಚಾರ ಬದಲಾವಣೆಯು ಕರ್ಕಾಟಕ ರಾಶಿಯವರ ಜೀವನದಲ್ಲಿ ಇಷ್ಟು ದಿನಗಳು ಮನೆ ಮಾಡಿದ್ದ ಸಂಕಷ್ಟಗಳಿಂದ ಅವರನ್ನು ರಕ್ಷಿಸುತ್ತವೆ. ಈ ಸಮಯದಲ್ಲಿ ನೀವು ಸುಖ ದಾಂಪತ್ಯ ಜೀವನವನ್ನು ಅನುಭವಿಸುವಿರಿ. ಮಾತ್ರವಲ್ಲ, ವಿದೇಶ ಪ್ರಯಾಣ ಯೋಗವೂ ಇದೆ.
ಸಿಂಹ ರಾಶಿ:
ರಾಹು-ಕೇತು ಗ್ರಹಗಳ ರಾಶಿ ಬದಲಾವಣೆಯು ಸಿಂಹ ರಾಶಿಯವರ ಜೀವನದಲ್ಲಿ ಹಲವು ಏರಿಳಿತಗಳನ್ನು ತರಲಿದೆ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಭೌತಿಕ ಸುಖಗಳು ಹೆಚ್ಚಾಗಳಿದ್ದು, ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ.
ಕನ್ಯಾ ರಾಶಿ:
ರಾಹು-ಕೇತು ರಾಶಿ ಪರಿವರ್ತನೆಯು ಕನ್ಯಾ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಆದಾಗ್ಯೂ, ನಿಮ್ಮ ಕೆಲಸ ಕಾರ್ಯಗಳಲ್ಲಿ ಕೊಂಚ ನಿರ್ಲಕ್ಷ್ಯವೂ ಕೂಡ ಗೊಂದಲವನ್ನು ಸೃಷ್ಟಿಸಬಹುದು.
ತುಲಾ ರಾಶಿ:
2023ರಲ್ಲಿ ರಾಹು-ಕೇತು ಗ್ರಹಗಳ ರಾಶಿಚಕ್ರ ಬದಲಾವಣೆಯು ತುಲಾ ರಾಶಿಯವರ ಮನಸ್ಸಿನ ಚಂಚಲತೆಯನ್ನು ಹೆಚ್ಚಿಸಲಿದೆ. ಆದಾಗ್ಯೂ, ಧಾರ್ಮಿಕ ಪ್ರವಾಸಗಾಲು ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿವೆ. ಇದರೊಂದಿಗೆ ವೃತ್ತಿ ಬದುಕಿನಲ್ಲಿಯೂ ಪ್ರಗತಿಯನ್ನು ಕಾಣಬಹುದು.
ಇದನ್ನೂ ಓದಿ- Mars Transit: ಅಕ್ಟೋಬರ್ 3ರವರೆಗೆ ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ
ವೃಶ್ಚಿಕ ರಾಶಿ:
ಅಕ್ಟೋಬರ್ ಬಳಿಕ ವೃಶ್ಚಿಕ ರಾಶಿಯವರ ಜೀವನದಲ್ಲಿ ರಾಹು ಒಳ್ಳೆಯ ಫಲಗಳನ್ನು ನೀಡಲಿದ್ದಾನೆ. ಆದಾಗ್ಯೂ, ಕೇತು ಅಷ್ಟು ಶುಭಕರ ಪರಿಣಾಮಗಳನ್ನು ನೀಡದ ಕಾರಣ ನೀವು ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಹೆಚ್ಚಿನ ಶ್ರಮದ ಅಗತ್ಯವಿದೆ. ಅದೇ ಸಮಯದಲ್ಲಿ, ತಾಳ್ಮೆಯಿಂದ ಕೆಲಸ ಮಾಡುವುದು ಒಳ್ಳೆಯದು.
ಧನು ರಾಶಿ:
ಧನು ರಾಶಿಯವರು ಈ ಸಮಯದಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ. ನೀವು ನಿಮ್ಮ ಭಾವನೆಗಳನ್ನೂ ಹತೋಟಿಯಲ್ಲಿಟ್ಟರಷ್ಟೇ ರಾಹು-ಕೇತು ಗ್ರಹಗಳ ರಾಶಿ ಪರಿವರ್ತನೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸಲಿದೆ. ಹಣಕಾಸಿನ ಲಾಭಕ್ಕಾಗಿ ಕಷ್ಟಪಟ್ಟು ದುಡಿಯುವುದು ಬಹಳ ಮುಖ್ಯ.
ಮಕರ ರಾಶಿ:
ರಾಹು-ಕೇತು ರಾಶಿ ಪರಿವರ್ತನೆಯ ಪರಿಣಾಮವಾಗಿ ಮಕರ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದೇ ನಿಮ್ಮ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕೂಡ ಪ್ರೇರಣೆಯಾಗಲಿದೆ. ಆದಾಗ್ಯೂ, ಮಾನಸಿಕ ಶಾಂತಿ ಕಾಪಾಡಿಕೊಳ್ಳಲು ಯೋಗ ಅಥವಾ ಧ್ಯಾನ ಮಾಡುವುದು ಒಳ್ಳೆಯದು.
ಕುಂಭ ರಾಶಿ:
ರಾಹು-ಕೇತು ಸಂಚಾರದಲ್ಲಿನ ಬದಲಾವಣೆಯು ನಿಮ್ಮಲ್ಲಿ ಅನಗತ್ಯ ಕೋಪವನ್ನು ಹೆಚ್ಚಿಸಬಹುದು. ಇದನ್ನು ತಪ್ಪಿಸಲು ನಿಮ್ಮ ಮೇಲೆ ನಿಮಗೆ ನಿಯಂತ್ರಣ ಹೊಂದಿರುವುದು ಬಹಳ ಮುಖ್ಯ. ಹಣಕಾಸಿನ ವಿಷಯದಲ್ಲೂ ಕೂಡ ಯೋಚಿಸಿ ಖರ್ಚು-ವೆಚ್ಚಗಳನ್ನು ತೂಗಿಸಿ. ಇಲ್ಲವೇ, ಧನ ನಷ್ಟ ಸಾಧ್ಯತೆ ಇದೆ.
ಮೀನ ರಾಶಿ:
ರಾಹು-ಕೇತು ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ಭಾರೀ ಆರ್ಥಿಕ ನಷ್ಟವನ್ನು ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ, ಯೋಚಿಸಿ ಹಣವನ್ನು ವ್ಯಯಿಸಿ. ಸುಖಾಸುಮ್ಮನೆ ಬೇರೆಯವರಲ್ಲಿ ವಿಶ್ವಾಸವನ್ನು ಇಡದಿರುವುದು ಒಳ್ಳೆಯದು. ಆರೋಗ್ಯದ ವಿಷಯದಲ್ಲೂ ಸಮಯ ಉತ್ತಮವಾಗಿಲ್ಲದ ಕಾರಣ, ನಿಮ್ಮ ಆರೋಗ್ಯದ ಕಡೆ ವಿಶೇಷ ಗಮನಹರಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.