Automatic Cars: ಜೀವನದಲ್ಲಿ ಒಮ್ಮೆಯಾದರೂ ಕನಸಿನ ಕಾರ್ ಕೊಳ್ಳಬೇಕು ಎಂಬ ಬಯಕೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ವಯಂಚಾಲಿತ ಎಂದರೆ ಆಟೋಮ್ಯಾಟಿಕ್ ಕಾರುಗಳ ಕ್ರೇಜ್ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಈ ಕಾರುಗಳಲ್ಲಿ ಚಾಲಕನು ಗೇರ್ ಅನ್ನು ಹಸ್ತಚಾಲಿತವಾಗಿ ಬದಲಾಯಿಸುವ ಅಗತ್ಯವಿಲ್ಲ. ಅಗತ್ಯವಿದ್ದಾಗ ಕಾರು ಸ್ವಯಂಚಾಲಿತವಾಗಿ ಗೇರ್ ಅನ್ನು ಬದಲಾಯಿಸುತ್ತದೆ. ಹೀಗಾಗಿ, ಹೆಚ್ಚು ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ಚಾಲನೆ ಮಾಡಲು ಸ್ವಯಂಚಾಲಿತ ಕಾರುಗಳು ಹೆಚ್ಚು ಸೂಕ್ತವಾಗಿವೆ.
ಮ್ಯಾನುಯಲ್ ಕಾರುಗಳಿಗೆ ಹೋಲಿಸಿದರೆ ಆಟೋಮ್ಯಾಟಿಕ್ ಕಾರುಗಳು ದುಬಾರಿಯಾಗಿರುತ್ತವೆ. ಹಾಗಾಗಿಯೇ, ಆಟೋಮ್ಯಾಟಿಕ್ ಕಾರುಗಳನ್ನು ಖರೀದಿಸಲು ಜನ ಹಿಂದೂ ಮುಂದು ನೋಡುತ್ತಾರೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಲೇಖನದಲ್ಲಿ ನಾವು ನಿಮಗೆ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಅತ್ಯುತ್ತಮ ಆಟೋಮ್ಯಾಟಿಕ್ ಕಾರುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಟಾಪ್ 5 ಆಟೋಮ್ಯಾಟಿಕ್ ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ:
ಮಾರುತಿ ಸುಜುಕಿ ಆಲ್ಟೊ ಕೆ10:
ಪ್ರಸ್ತುತ ದೇಶದಲ್ಲೇ ಅತ್ಯಂತ ಅಗ್ಗದ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರ್ ಎಂದರೆ ಅದು ಮಾರುತಿ ಸುಜುಕಿ ಆಲ್ಟೊ ಕೆ10. ಈ ಕಾರ್ 1.0-ಲೀಟರ್ NA ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ (AGS) ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ. ಇದರ ಸ್ವಯಂಚಾಲಿತ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 5.59 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ.
ಇದನ್ನೂ ಓದಿ- Top 5 Cheapest 5G Phones: ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ 5ಜಿ ಫೋನ್‌ಗಳಿವು
ಮಾರುತಿ ಸುಜುಕಿ ಎಸ್-ಪ್ರೆಸ್ಸೊ:
ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಮತ್ತೊಂದು ಆಟೋಮ್ಯಾಟಿಕ್ ಕಾರ್ ಎಂದರೆ ಅದು ಮಾರುತಿ ಎಸ್-ಪ್ರೆಸ್ಸೊ. ಮಾರುತಿ ಎಸ್-ಪ್ರೆಸ್ಸೊದ ಮೆಕ್ಯಾನಿಕಲ್‌ಗಳು ಮಾರುತಿ ಸುಜುಕಿ ಆಲ್ಟೊ ಕೆ 10 ಕಾರಿನಂತೆಯೇ ಇರುತ್ತದೆ. ಈ ಕಾರಿನಲ್ಲಿ 1.0-ಲೀಟರ್ NA ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ (AGS) ಗೇರ್‌ಬಾಕ್ಸ್ ಅನ್ನು ಸಹ ನೀಡಲಾಗುತ್ತದೆ. ಇದರ ಆಟೋಮ್ಯಾಟಿಕ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 5.76 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.
ರೆನಾಲ್ಟ್ ಕ್ವಿಡ್:
ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಲಭ್ಯವಿರುವ ಮತ್ತೊಂದು ಸ್ವಯಂಚಾಲಿತ ಕಾರು ಎಂದರೆ ರೆನಾಲ್ಟ್ ಕ್ವಿಡ್. ಈ ಕಾರ್ 1.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸ್ವಯಂಚಾಲಿತ ಪ್ರಸರಣ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಇದರ ಸ್ವಯಂಚಾಲಿತ ರೂಪಾಂತರದ ಬೆಲೆ 6.12 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.
ಇದನ್ನೂ ಓದಿ- ಪೆಟ್ರೋಲ್ ಬೇಡ, ಡೀಸೆಲ್ ಬೇಡ, ಚಾರ್ಜ್ ಮಾಡಲು ಕರೆಂಟ್ ಬೇಡ..ಬಂತು ಇನ್ನೊಂದು ಕಾರ್..!
ಮಾರುತಿ ಸುಜುಕಿ ವ್ಯಾಗನ್ಆರ್:
ಮಾರುತಿ ಸುಜುಕಿ ಕಂಪನಿಯ ವ್ಯಾಗನ್ಆರ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 1.0-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಯೂನಿಟ್ ಹೊಂದಿರುವ ಈ ಕಾರಿನಲ್ಲಿ 5-ಸ್ಪೀಡ್ ಎಮ್‌ಟಿ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯೂ ಇದೆ. ಈ ಕಾರಿನ ಸ್ವಯಂಚಾಲಿತ ರೂಪಾಂತರದ ಎಕ್ಸ್ ಶೋ ರೂಂ ಬೆಲೆಗಳು ರೂ. 6.55 ಲಕ್ಷಗಳಿಂದ ಪ್ರಾರಂಭವಾಗುತ್ತದೆ.
ಟಾಟಾ ಟಿಯಾಗೊ:
ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮತ್ತೊಂದು ಕಾರ್ ಎಂದರೆ ಅದು ಟಾಟಾ ಟಿಯಾಗೊ. ಟಾಟಾದ ಅತ್ಯಂತ ಅಗ್ಗದ ಕಾರ್ ಇದಾಗಿದ್ದು, 1.2-ಲೀಟರ್ NA ಪೆಟ್ರೋಲ್ ಎಂಜಿನ್ 5-ಸ್ಪೀಡ್ MT ಮತ್ತು ಸ್ವಯಂಚಾಲಿತ ಪ್ರಸರಣ ಆಯ್ಕೆಯೊಂದಿಗೆ ಲಭ್ಯವಾಗಲಿದೆ. ಈ ಕಾರಿನ ಸ್ವಯಂಚಾಲಿತ ರೂಪಾಂತರಗಳ ಎಕ್ಸ್ ಶೋ ರೂಂ ಬೆಲೆಗಳು ರೂ. 6.92 ಲಕ್ಷದಿಂದ ಆರಂಭವಾಗುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.