Mobile Network Issue: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳನ್ನು ಮೊಬೈಲ್ ನೆಟ್ವರ್ಕ್ ಸಮಸ್ಯೆ ಕೂಡ ಒಂದು. ಆದರೆ, ನೆಟ್ವರ್ಕ್ ಸಮಸ್ಯೆ ಯಾವಾಗಲೂ ನಿಮ್ಮ ನೆಟ್ವರ್ಕ್ ಸೇವಾ ಪೂರೈಕೆದಾರರ ದೋಷದಿಂದ ಉಂಟಾಗುವುದಿಲ್ಲ. ಕೆಲವೊಮ್ಮೆ ಇದಕ್ಕೆ ನಿಮ್ಮ ಸ್ಮಾರ್ಟ್ ಫೋನ್ ಕೂಡ ಕಾರಣವಾಗಿರಬಹುದು.
ಒಂದು ವೇಳೆ ನೀವು Android ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ ಮತ್ತು ವೈ-ಫೈ, ಬ್ಲೂಟೂತ್ ಅಥವಾ ಸೆಲ್ಯುಲಾರ್ ಸಂಪರ್ಕವನ್ನು ಬಳಸಲು ಪ್ರಯತ್ನಿಸುತ್ತಿರುವಾಗ ಸಮಸ್ಯೆ ಎದುರಾಗುತ್ತಿದ್ದರೆ, ನಿಮ್ಮ ಸ್ಮಾರ್ಟ್ ಫೋನ್ ನೆಟ್ವರ್ಕ್ ಸೆಟ್ಟಿಂಗ್ಗಳಲ್ಲಿ ಏನಾದರೂ ದೋಷ ಉಂಟಾಗಿರುವ ಸಾಧ್ಯತೆ ಇರುತ್ತದೆ.
ನಿಮ್ಮ ಸ್ಮಾರ್ಟ್ಫೋನ್ನ ನೆಟ್ವರ್ಕ್ ಸೆಟ್ಟಿಂಗ್ಗಳು ನಿಮ್ಮ ಸ್ಮಾರ್ಟ್ ಫೋನ್ ಹೊಂದಿರುವ ಎಲ್ಲಾ ಸಂಪರ್ಕಗಳ ಸಾಮರ್ಥ್ಯಕ್ಕೆ ಜವಾಬ್ದಾರಿಯಾಗಿರುತ್ತದೆ ಮತ್ತು ಅದು ಕೆಲವು ಕಾರಣಗಳಿಂದ ವಿಫಲವಾಗಬಹುದು. ಈ ಸಮಸ್ಯೆಗಳನ್ನು ಪರಿಹರಿಸಲು ನೆಟ್ವರ್ಕ್ ಸೆಟ್ಟಿಂಗ್ಗಳನ್ನು ರಿಸೆಟ್ ಮಾಡಲು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಬಳಕೆದಾರರಿಗೆ ಅನುಮತಿಸುತ್ತವೆ..
ನಿಮ್ಮ ಸಾಧನದ ನೆಟ್ವರ್ಕ್ ಸೆಟ್ಟಿಂಗ್ಗಳನ್ನು ಮರುಹೊಂದಿಸುವ ಕುರಿತು ತಿಳಿದುಕೊಳ್ಳಬೇಕಾದ ವಿಷಯಗಳು
ನೆಟ್ವರ್ಕ್ ಸೆಟ್ಟಿಂಗ್ಗಳನ್ನು ಮರುಹೊಂದಿಸುವುದರಿಂದ ನಿಮ್ಮ ಅಪ್ಲಿಕೇಶನ್ಗಳು ಅಥವಾ ಡೇಟಾವನ್ನು ಅಳಿಸುವುದಿಲ್ಲ. ಇದು ನಿಮ್ಮ ನೆಟ್ವರ್ಕ್ ಸೆಟ್ಟಿಂಗ್ಗಳು, ಇಂಟಿಗ್ರೇಟೆಡ್ ವೈ-ಫೈ ಪಾಸ್ವರ್ಡ್ ಮತ್ತು ಬ್ಲೂಟೂತ್ ಸಂಪರ್ಕವನ್ನು ಅಳಿಸುತ್ತದೆ, ಆದರೆ ಇದು ಸೇವಾ ಪೂರೈಕೆದಾರರಿಂದ ಆಗಿದ್ದರೆ ನೆಟ್ವರ್ಕ್ ಕವರೇಜ್ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ.
ಇದನ್ನೂ ಓದಿ-Chandrayaan 3 ಯಶಸ್ಸಿನ ನಡುವೆಯೇ ಚಂದ್ರನ ಮೇಲ್ಮೈ ವೀಕ್ಷಣೆಗೆ ಮನೆಗೆ ತನ್ನಿ ಈ ಪವರ್ಫುಲ್ ಟೆಲಿಸ್ಕೋಪ್!
Android ಸ್ಮಾರ್ಟ್ ಫೋನ್ ನಲ್ಲಿ ನಿಮ್ಮ ನೆಟ್ವರ್ಕ್ ಸೆಟ್ಟಿಂಗ್ಗಳನ್ನು ರಿಸೆಟ್ ಮಾಡುವುದು ಹೇಗೆ?
>> ಮೊದಲು ನಿಮ್ಮ Android ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ನಲ್ಲಿ ಸೆಟ್ಟಿಂಗ್ಗಳ ವಿಭಾಗಕ್ಕೆ ಭೇಟಿ ನೀಡಿ
>> ಬಳಿಕ ಸಾಮಾನ್ಯ ನಿರ್ವಹಣೆ ಅಥವಾ ವ್ಯವಸ್ಥೆ ಸೆಟ್ಟಿಂಗ್ ಗೆ ಹೋಗಿ. (ನೀವು ಬಳಸುತ್ತಿರುವ ಸಾಧನವನ್ನು ಅವಲಂಬಿಸಿ)
>> ನಂತರ ರೀಸೆಟ್ ಅಥವಾ ಮರುಹೊಂದಿಸುವ ಆಯ್ಕೆಗೆ ಹೋಗಿ ಮತ್ತು 'ನೆಟ್ವರ್ಕ್ ಸೆಟ್ಟಿಂಗ್ ರೀಸೆಟ್' ಅನ್ನು ಆಯ್ದುಕೊಳ್ಳಿ.
ಇದನ್ನೂ ಓದಿ-ತನ್ನ ಈ ಜನಪ್ರಿಯ ಯೋಜನೆ ಸ್ಥಗಿತಗೊಳಿಸಿದ ರಿಲಯನ್ಸ್ ಜಿಯೋ, ಇನ್ಮುಂದೆ ಇದೇ ನೋಡಿ ಅಗ್ಗದ ಯೋಜನೆ!
>> ಈಗ, ರೀಸೆಟ್ ಬಟನ್ ಮೇಲೆ ಟ್ಯಾಪ್ ಮಾಡಿ.
>> ಈಗ ನಿಮ್ಮ ಸ್ಮಾರ್ಟ್ ಫೋನ್ ನಿಮಗೆ ಪಿನ್, ಪಾಸ್ವರ್ಡ್ ಅಥವಾ ಬಯೋಮೆಟ್ರಿಕ್ಗಳನ್ನು ನಮೂದಿಸಲು ಕೇಳುತ್ತದೆ.
>> ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಸಾಧನವು ರೀಸ್ಟಾರ್ಟ್ ಆಗುತ್ತದೆ ಮತ್ತು ನಿಮ್ಮ ಎಲ್ಲಾ ನೆಟ್ವರ್ಕ್ ಸೆಟ್ಟಿಂಗ್ಗಳನ್ನು ಮರುಹೊಂದಿಸಲಾಗುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.