ತಂಗಿಯ ಮೇಲೆ ಅತ್ಯಾಚಾರವೆಸಗಿದ್ದ ಅಣ್ಣನಿಗೆ ರಕ್ಷಾ ಬಂಧನದಂದೇ ಶಿಕ್ಷೆ!

Rape Case: 14 ವರ್ಷದ ತಂಗಿಯ ಮೇಲೆ ಪಾಪಿ ಸಹೋದರನೊಬ್ಬ ಪದೇ ಪದೇ ಅತ್ಯಾಚಾರ ನಡೆಸಿದ್ದ. ಆಕೆ ಗರ್ಭಧರಿಸುವಂತೆ ಮಾಡಿ ಬಳಿಕ ಗರ್ಭಪಾತ ಮಾಡಿಸಿರುವ ಆರೋಪ ಆತನ ವಿರುದ್ಧ ಕೇಳಿಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ಒಡಿಶಾ ಹೈಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

Written by - Zee Kannada News Desk | Last Updated : Sep 1, 2023, 12:32 PM IST
  • ತಂಗಿ ಮೇಲೆ ಅತ್ಯಾಚಾರವೆಸಗಿದ್ದ ಅಣ್ಣನಿಗೆ ರಕ್ಷಾ ಬಂಧನದಂದೇ ​ಶಿಕ್ಷೆ ಪ್ರಕಟಿಸಿದ ಒಡಿಶಾ ಹೈಕೋರ್ಟ್
  • 14 ವರ್ಷದ ತಂಗಿಯ ಮೇಲೆ ಪಾಪಿ ಸಹೋದರನೊಬ್ಬ ಪದೇ ಪದೇ ಅತ್ಯಾಚಾರ ನಡೆಸಿದ್ದ
  • 20 ವರ್ಷಗಳ ಜೈಲು ಶಿಕ್ಷೆ ಜೊತೆಗೆ 40 ಸಾವಿರ ರೂ. ದಂಡ ವಿಧಿಸಿದ ಒಡಿಶಾ ಕೋರ್ಟ್
ತಂಗಿಯ ಮೇಲೆ ಅತ್ಯಾಚಾರವೆಸಗಿದ್ದ ಅಣ್ಣನಿಗೆ ರಕ್ಷಾ ಬಂಧನದಂದೇ ಶಿಕ್ಷೆ!   title=
ಅಣ್ಣನಿಗೆ ರಕ್ಷಾ ಬಂಧನದಂದೇ ​ಶಿಕ್ಷೆ!

ನವದೆಹಲಿ: ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಒಡಿಶಾ ಹೈಕೋರ್ಟ್ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದ ಅಣ್ಣನಿಗೆ ರಕ್ಷಾ ಬಂಧನದಂದೇ ​ಶಿಕ್ಷೆ ಪ್ರಕಟಿಸಿರುವ ಅಪರೂಪದ ಘಟನೆ ನಡೆದಿದೆ.

14 ವರ್ಷದ ತಂಗಿಯ ಮೇಲೆ ಪಾಪಿ ಸಹೋದರನೊಬ್ಬ ಪದೇ ಪದೇ ಅತ್ಯಾಚಾರ ನಡೆಸಿದ್ದ. ಆಕೆ ಗರ್ಭಧರಿಸುವಂತೆ ಮಾಡಿ ಬಳಿಕ ಗರ್ಭಪಾತ ಮಾಡಿಸಿರುವ ಆರೋಪ ಆತನ ವಿರುದ್ಧ ಕೇಳಿಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ಒಡಿಶಾ ಹೈಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಕಾಣೆಯಾದ ಹಸಿರು ಗಿಳಿ... ಹುಡುಕಿಕೊಟ್ಟವರಿಗೆ ₹5,000 ಬಹುಮಾನ!

ಪವಿತ್ರ ರಕ್ಷಾಬಂಧನ ಹಬ್ಬದ ದಿನದಂದೇ ತನ್ನ ತಂಗಿಯ ಮೇಲೆ ಅತ್ಯಾಚಾರ ನಡೆಸಿ ನೀಚ ಕೃತ್ಯವೆಸಗಿದ ಅಣ್ಣನಿಗೆ ಕೋರ್ಟ್ ಶಿಕ್ಷೆ ವಿಧಿಸಿದ ಅಪರೂಪದ ಪ್ರಕರಣ ಇದಾಗಿದೆ. ಆರೋಪಿಯ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಸ್.ಕೆ.ಸಾಹೂ 40 ಸಾವಿರ ರೂ. ದಂಡವನ್ನೂ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಅಪರಾಧಿಗೆ ಹೆಚ್ಚುವರಿ 2 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ರಕ್ಷಾ ಬಂಧನ ಹಬ್ಬದ ದಿನವೇ ಇಂತಹ ಪ್ರಕರಣದಲ್ಲಿ ತೀರ್ಪು ನೀಡಬೇಕಾಯಿತು ಎಂದು ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದ್ದಾರೆ.

 ‘ಒಬ್ಬ ಸಹೋದರನು ತನ್ನ ಸಹೋದರಿಯನ್ನು ರಕ್ಷಿಸಲು ಮಾತ್ರವಲ್ಲದೆ ತನ್ನ ಕೊನೆಯ ಉಸಿರಿನವರೆಗೂ ಅವಳನ್ನು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಆದರೆ ಈ ಪ್ರಕರಣದಲ್ಲಿ ಆಗಿರುವ ಕೃತ್ಯ ಸಹಿಸಲು ಸಾಧ್ಯವಿಲ್ಲ. ಮಂಗಳಕರ ದಿನದಂದೇ ತೀರ್ಪು ನೀಡುವುದು ಆಘಾತಕಾರಿಯಾಗಿದೆ’ ಎಂದು ನ್ಯಾಯಮೂರ್ತಿ ಸಾಹೂ ಹೇಳಿದರು.

ಇದನ್ನೂ ಓದಿ: ಕೇಂದ್ರ ಸಚಿವರ ನಿವಾಸದಲ್ಲಿಯೇ ಕೊಲೆ ! ಗುಂಡು ಹಾರಿಸಿ ವ್ಯಕ್ತಿಯ ಹತ್ಯೆ

ಮೇ 2018 ಮತ್ತು ಮೇ 2019ರ ನಡುವೆ ತಮ್ಮ ಗ್ರಾಮದಲ್ಲಿ ತನ್ನ ತಂಗಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದ ಅಣ್ಣನಿಗೆ ಮಲ್ಕಾನ್‌ಗಿರಿ ವಿಶೇಷ ನ್ಯಾಯಾಧೀಶರ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿತ್ತು. ತಾನು ಎಸಗಿರುವ ಕೃತ್ಯವನ್ನು ಬಹಿರಂಗಪಡಿಸದಂತೆ ತನ್ನ ಸಹೋದರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಜನವರಿ 2020ರಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News