ಹೊಟ್ಟೆಯ ಬೊಜ್ಜು ಹೆಚ್ಚಾದ ಕಾರಣ ಸೊಂಟ ದಪ್ಪ ಕಾಣಿಸುತ್ತಿದೆಯಾ, ಈ ದೇಸಿ ಉಪಾಯ ಕೇವಲ 15 ದಿನಗಳಲ್ಲಿ ಸೊಂಟಕ್ಕೆ ನಾರ್ಮಲ್ ಲುಕ್ ನೀಡುತ್ತೆ!

Weight Loss Natural Remedy: ತೂಕ ಇಳಿಕೆಗೆ ಅಶ್ವಗಂಧ ಒಂದು ರಾಮಬಾಣ ಗಿಡಮೂಲಿಕೆ ಎಂದು ಪರಿಗಣಿಸಲಾಗುತ್ತದೆ. ಈ ಮೂಲಿಕೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ ಮತ್ತು ಕೊಬ್ಬನ್ನು ಕಡಿಮೆ ಮಾಡುವ ಮೂಲಕ ದೇಹವನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಕೊಬ್ಬನ್ನು ಕಡಿಮೆ ಮಾಡಲು ಅಶ್ವಗಂಧವನ್ನು ಹೇಗೆ ಸೇವಿಸಬೇಕೆಂದು ಇಲ್ಲಿ ತಿಳಿಯಿರಿ (Health News In Kannada).  

Written by - Nitin Tabib | Last Updated : Sep 17, 2023, 07:30 PM IST
  • ಅಶ್ವಗಂಧವು ಕ್ಯಾಪ್ಸುಲ್ ರೂಪದಲ್ಲಿಯೂ ಲಭ್ಯವಿದೆ, ಆದರೆ ಒಣಗಿದ ಅಶ್ವಗಂಧದ ಎಲೆಗಳಿಂದ ಮಾಡಿದ ಪುಡಿಯ ರೂಪದಲ್ಲಿ ಇದನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ.
  • ರುಚಿಯನ್ನು ಹೆಚ್ಚಿಸಲು, ನೀವು ಅದನ್ನು ಒಂದು ಲೋಟ ಹಾಲು ಮತ್ತು ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಬಹುದು.
  • ರುಚಿಯನ್ನು ಹೆಚ್ಚಿಸಲು, ಚಯಾಪಚಯವನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ನೀವು ಏಲಕ್ಕಿಯನ್ನು ಸೇರಿಸಬಹುದು.
ಹೊಟ್ಟೆಯ ಬೊಜ್ಜು ಹೆಚ್ಚಾದ ಕಾರಣ ಸೊಂಟ ದಪ್ಪ ಕಾಣಿಸುತ್ತಿದೆಯಾ, ಈ ದೇಸಿ ಉಪಾಯ ಕೇವಲ 15 ದಿನಗಳಲ್ಲಿ ಸೊಂಟಕ್ಕೆ ನಾರ್ಮಲ್ ಲುಕ್ ನೀಡುತ್ತೆ! title=

ಬೆಂಗಳೂರು: ಅಶ್ವಗಂಧವನ್ನು ಜಿನ್ಸೆಂಗ್ ಎಂದೂ ಕರೆಯುತ್ತಾರೆ. ತೂಕ ಇಳಿಕೆಗೆ ಈ ಮೂಲಿಕೆ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಅಶ್ವಗಂಧದ ಪ್ರಯೋಜನಗಳು ಗೊತ್ತಿರದೆ ಇರುವವರು ತೀರಾ ಕಮ್ಮಿ. ಅಶ್ವಗಂಧವನ್ನು ತೂಕ ಇಳಿಕೆಗೆ ಪರಿಣಾಮಕಾರಿ ಮನೆಮದ್ದು ಎಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಹಲವರು ಬೊಜ್ಜು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಹೊಟ್ಟೆಯ ಕೊಬ್ಬು ಇರಲಿ ಅಥವಾ ಇಡೀ ದೇಹದ ಬೊಜ್ಜು ಇರಲಿ, ಅದು ನಮ್ಮ ಆಹಾರ ಮತ್ತು ಜೀವನಶೈಲಿಯಿಂದ ಪ್ರಭಾವಿತವಾಗಿರುತ್ತದೆ. ನೀವೂ ಸಹ ತೂಕವನ್ನು ಇಳಿಕೆ ಮಾಡಿಕೊಳ್ಳಲು  ಮಾರ್ಗಗಳನ್ನು ಹುಡುಕುತ್ತಿದ್ದರೆ ಮತ್ತು ತೂಕವನ್ನು ಇಳಿಕೆ ಮಾಡಲು ಮನೆಮದ್ದುಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಿದ್ದಾರೆ, ಕೆಲವೇ ದಿನಗಳಲ್ಲಿ ದೇಹದ ಕೊಬ್ಬನ್ನು ಕರಗಿಸುವ ಮೂಲಕ ನಿಮ್ಮನ್ನು ಫಿಟ್ ಮಾಡುವ ಒಂದು ಉಪಾಯವನ್ನು ನಾವು ನಿಮಗೆ ಹೇಳಿಕೊಡಳಿದ್ದೇವೆ. ತೂಕವನ್ನು ತೂಕ ಇಳಿಕೆಗೆ ಚೆನ್ನಾಗಿ ನಿದ್ದೆ ಮಾಡುವುದು, ಒತ್ತಡ ಮುಕ್ತವಾಗಿರುವುದು, ಖಿನ್ನತೆಯನ್ನು ದೂರವಿಡುವುದು, ಲೈಂಗಿಕ ಆರೋಗ್ಯ ಮತ್ತು ಆಹಾರದ ಮೇಲೆ ನಿಗಾ ಇಡುವುದು ತುಂಬಾ ಮುಖ್ಯ. ಇದೆಲ್ಲವನ್ನೂ ಒಟ್ಟಿಗೆ ಮಾಡಲು ಸಹಾಯ ಮಾಡುವ ಒಂದು ಗಿಡಮೂಲಿಕೆ ಇದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೌದು, ಅಶ್ವಗಂಧ ಇದನ್ನೆಲ್ಲ ಮಾಡುವುದರಲ್ಲಿ ಪರಿನೀತಿಯನ್ನು ಹೊಂದಿದೆ, ನಿಮ್ಮ ಬೊಜ್ಜನ್ನು ತ್ವರಿತವಾಗಿ ನಿವಾರಿಸಬಲ್ಲದು. ಅದನ್ನು ಹೇಗೆ ಬಳಸಬೇಕು ಎಂಬುದನ್ನು ತ್ದಿಳಿದುಕೊಳ್ಳೋಣ ಬನ್ನಿ.

ಅಶ್ವಗಂಧ ಎಂದರೇನು?
ಅಶ್ವಗಂಧವು ಜನಪ್ರಿಯ ಆಯುರ್ವೇದ ಗಿಡಮೂಲಿಕೆಯಾಗಿದೆ. ಅಶ್ವಗಂಧವು ಆಯುರ್ವೇದ ಮತ್ತು ಹೋಮಿಯೋಪತಿಯಲ್ಲಿ ಮಾತ್ರವಲ್ಲದೆ ಆಫ್ರಿಕನ್ ಔಷಧ, ಯುನಾನಿ ಔಷಧದಲ್ಲಿಯೂ ಬಳಸಲಾಗುವ ಪ್ರಾಚೀನ ಔಷಧೀಯ ಮೂಲಿಕೆಯಾಗಿದೆ. ಅಶ್ವಗಂಧವು ಆತಂಕ ಮತ್ತು ಒತ್ತಡ, ಖಿನ್ನತೆ, ಸಂಧಿವಾತ, ನಿದ್ರಾಹೀನತೆ, ನ್ಯೂರೋ ಡಿಜೆನೆರೆಟಿವ್ ಡಿಸಾರ್ಡರ್‌ಗಳಂತಹ ಅಸಂಖ್ಯಾತ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ತೂಕ ಇಳಿಕೆಯಲ್ಲಿ ಅಶ್ವಗಂಧದ ಪರಿಣಾಮಕಾರಿತ್ವದ ಬಗ್ಗೆ ಅನೇಕ ಅಧ್ಯಯನಗಳು ಇತ್ತೀಚೆಗೆಬೆಳಕಿಗೆ ಬಂದಿವೆ.

ಅಶ್ವಗಂಧ ಸಾರವು ತೂಕ ಇಳಿಕೆಗೆ ಪರಿಣಾಮಕಾರಿಯಾಗಿದೆ. ಅಶ್ವಗಂಧವನ್ನು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವೆಂದು ಪರಿಗಣಿಸಲಾಗುತ್ತದೆ, ಇದು ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಅಶ್ವಗಂಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಅಶ್ವಗಂಧವು ನಿಮಗೆ ಸರಿಹೊಂದುವುದಿಲ್ಲವಾದರೆ ತೂಕವನ್ನು ಇಳಿಕೆಗೆ ನೀವು ಇತರ ನೈಸರ್ಗಿಕ ಮಾರ್ಗಗಳನ್ನು ಪ್ರಯತ್ನಿಸಿ.

ಅಶ್ವಗಂಧವು ಕ್ಯಾಪ್ಸುಲ್ ರೂಪದಲ್ಲಿಯೂ ಲಭ್ಯವಿದೆ, ಆದರೆ ಒಣಗಿದ ಅಶ್ವಗಂಧದ ಎಲೆಗಳಿಂದ ಮಾಡಿದ ಪುಡಿಯ ರೂಪದಲ್ಲಿ ಇದನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ರುಚಿಯನ್ನು ಹೆಚ್ಚಿಸಲು, ನೀವು ಅದನ್ನು ಒಂದು ಲೋಟ ಹಾಲು ಮತ್ತು ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಬಹುದು. ರುಚಿಯನ್ನು ಹೆಚ್ಚಿಸಲು, ಚಯಾಪಚಯವನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ನೀವು ಏಲಕ್ಕಿಯನ್ನು ಸೇರಿಸಬಹುದು.

ಇದನ್ನೂ ಓದಿ-ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಸ್ಪೆಷಲ್ ಸ್ಪ್ರೌಟ್ಸ್ ದೋಸೆ ನಿಮ್ಮ ಬೆಳಗಿನ ಉಪಹಾರದಲ್ಲಿರಲಿ!

ತೂಕ ಇಳಿಕೆಯಲ್ಲಿ ಅಶ್ವಗಂಧದ ಪ್ರಯೋಜನಗಳು
ತೂಕ ಇಳಿಕೆಗೆ ಅಶ್ವಗಂಧ ಹೇಗೆ ಸಹಾಯ ಮಾಡುತ್ತದೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಅಶ್ವಗಂಧವು ತೂಕ ಇಳಿಕೆಯ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಆದಾಗ್ಯೂ, ತೂಕವನ್ನು ಏರಿಕೆಯ ಮೂಲ ಕಾರಣಗಳನ್ನು ಪರಿಹರಿಸುವ ಮೂಲಕ ತೂಕ ಇಳಿಕೆಗೆ ಇದು ಸಹಾಯ ಮಾಡುತ್ತದೆ. ಕೊಬ್ಬನ್ನು ಕಡಿಮೆ ಮಾಡಲು ಅಶ್ವಗಂಧ ಸಹಾಯ ಮಾಡುವ ಕೆಲವು ಕಾರಣಗಳನ್ನು ಕೆಳಗೆ ನೀಡಲಾಗಿದೆ.

ಇದನ್ನೂ ಓದಿ-ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುತ್ತವೆ ಈ 5 ಸಂಕೇತಗಳು, ನಿರ್ಲಕ್ಷಿಸಬೇಡಿ!

>> ಅಶ್ವಗಂಧವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
>> ತೂಕ ಇಳಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುವ ಚಯಾಪಚಯವನ್ನು ಹೆಚ್ಚಿಸಲು ಸಹಾಯಕವಾಗಿದೆ.
>> ಅಶ್ವಗಂಧವು ಒತ್ತಡ ನಿವಾರಕವಾಗಿದೆ ಮತ್ತು ಕಡಿಮೆ ಒತ್ತಡದೊಂದಿಗೆ ತ್ವರಿತ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
>> ಅಶ್ವಗಂಧ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ತೂಕ ಏರಿಕೆಗೆ ಕಾರಣವಾಗುವ ನಿದ್ರಾಹೀನತೆಗೆ ಚಿಕಿತ್ಸೆ ನೀಡುತ್ತದೆ.
>> ಈ ಮೂಲಿಕೆಯು ಶಕ್ತಿಯ ಬೂಸ್ಟರ್ ಆಗಿದ್ದು ವ್ಯಾಯಾಮದ ಸಮಯದಲ್ಲಿ ಸಹಾಯ ಮಾಡುತ್ತದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News