ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟು ಹಬ್ಬಕ್ಕೆ ಅಣ್ಣನ 'ರಾಜಮಾರ್ತಾಂಡ' ಸಿನಿಮಾ ರಿಲೀಸ್.. ಡಿ ಬಾಸ್ ಕೊಟ್ಟಿದ್ದಾರೆ ಬಿಗ್ ಸಾಥ್

Rajamarthanda: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅಣ್ಣ ಚಿರು ಅಂದ್ರೆ ಪಂಚ ಪ್ರಾಣ. ವಾರದಲ್ಲಿ ಒಂದು  ದಿನ ಅಣ್ಣ ನ ಸಮಾಧಿಯಲ್ಲಿ ಮಲಗುತ್ತಾರೆ. ಆ ವಿಡಿಯೋ ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. 

Written by - YASHODHA POOJARI | Last Updated : Sep 22, 2023, 11:58 AM IST
  • ಹೃದಯಾಘಾತದಿಂದ ಚಿರಂಜೀವಿ ಸರ್ಜಾ ನಿಧನರಾಗುವುದಕ್ಕೂ ಮುನ್ನ ಅವರು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು.
  • ಆ ಪೈಕಿ ‘ರಾಜಮಾರ್ತಾಂಡ’ ಸಿನಿಮಾ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ.
  • ಮಾತ್ರವಲ್ಲ ಈ ಸಿನಿಮಾ ಚಿರುಗೆ ಕನಸಿನ ಕೂಸಾಗಿತ್ತು.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟು ಹಬ್ಬಕ್ಕೆ  ಅಣ್ಣನ 'ರಾಜಮಾರ್ತಾಂಡ' ಸಿನಿಮಾ ರಿಲೀಸ್.. ಡಿ ಬಾಸ್ ಕೊಟ್ಟಿದ್ದಾರೆ ಬಿಗ್ ಸಾಥ್  title=

Rajamarthanda: ಚಿರು ಸರ್ಜಾ ನಮ್ಮನ್ನ ಆಗಲಿ ವರುಷಗಳೇ ಕಳೆದು ಹೋಗಿದೆ. ಚಿರು ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಚಿರುಸರ್ಜಾ ಅಂದ್ರೆ ಸದಾ ನಗುಮೊಗದ ಅರಸ. ಚಿರು ಇದ್ದಲ್ಲಿ ಪಕ್ಕಾ ನಗು ಇದ್ದೇ ಇರುತ್ತೆ. ಆದರೆ ವಿಧಿಯಾಟಕ್ಕೆ ಚಿರು ನಮ್ಮನ್ನ ಆಗಲಿ ದೇವರ ಬಳಿ ಹೋಗೇಬಿಟ್ಟರು. ಆದರೆ ಚಿರು ನಮಗಾಗಿ ಸಾಕಷ್ಟು ನೆನಪುಗಳನ್ನ ಹಾಗೇ ಬಿಟ್ಟು ಹೋಗಿದ್ದಾರೆ. 

ಹೃದಯಾಘಾತದಿಂದ ಚಿರಂಜೀವಿ ಸರ್ಜಾ ನಿಧನರಾಗುವುದಕ್ಕೂ ಮುನ್ನ ಅವರು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆ ಪೈಕಿ ‘ರಾಜಮಾರ್ತಾಂಡ’ ಸಿನಿಮಾ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ. ಮಾತ್ರವಲ್ಲ ಈ ಸಿನಿಮಾ ಚಿರುಗೆ ಕನಸಿನ ಕೂಸಾಗಿತ್ತು.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅಣ್ಣ ಚಿರು ಅಂದ್ರೆ ಪಂಚ ಪ್ರಾಣ. ವಾರದಲ್ಲಿ ಒಂದು  ದಿನ ಅಣ್ಣ ನ ಸಮಾಧಿಯಲ್ಲಿ ಮಲಗುತ್ತಾರೆ. ಆ ವಿಡಿಯೋ ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ಜೊತೆಗೆ ಎರಡನೇ ಮಗುವಿನ ಆಗಮನದ ಖುಷಿಯಲ್ಲಿ ಸಮಾಧಿ ಬಳಿ ಸೀಮಂತ ಕೂಡ ಮಾಡಿದ್ದರು ತಮ್ಮ ಧ್ರುವ. ಇದೀಗ ಅಣ್ಣ ನಟನೆಯ ಕೊನೆಯ ಸಿನಿಮಾ ಧ್ರುವ ಸರ್ಜಾ ಹುಟ್ಟುಹಬ್ಬದ ದಿನ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ- ಇದೇ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಲಿದೆ ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ2

ತಮ್ಮದೇ ಆದ ಶೈಲಿಯಲ್ಲಿ ನಟಿಸಿ ಜನರ ಮನಸ್ಸು ಗೆದ್ದಿದ್ದ ‘ವಾಯುಪುತ್ರ’. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಚಿರಂಜೀವಿ ಸರ್ಜಾ ಹೊಂದಿದ್ದರು. ಇನ್ನೂ ಕನ್ನಡ ಚಿತ್ರರಂಗದಲ್ಲಿ ಬೆಳೆದು ದೊಡ್ಡ ಸ್ಟಾರ್​ ಆಗಬೇಕೆಂಬ ಆಸೆ ಹೊಂದಿದ್ದರು. 39ನೇ ವಯಸ್ಸಿಗೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದರು. ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕಾದ ದೊಡ್ಡ ನಷ್ಟ.  ಚಿರು ನಮ್ಮನ್ನೆಲ್ಲ ಬಿಟ್ಟು ಹೋಗಿ ಇಷ್ಟು ದಿನ ಕಳೆದರೂ, ಅವರ ನೆನಪುಗಳು ಮಾತ್ರ ಪ್ರತಿಯೊಬ್ಬರ ಮನಸ್ಸಿನಲ್ಲಿದೆ. ಚಿರು ನೆನಪಾದ್ರೆ ರಾಯನ್ ಸರ್ಜಾನ ನೋಡಿದ್ರೆ ಸಾಕು ಅದರಲ್ಲೇ ತೃಪ್ತಿಪಟ್ಟುಕೊಳ್ಳಬಹುದು. 

ಚಿರು ಮೃತರಾದಾಗ ಕುಟುಂಬದ ಜೊತೆ ನಿಂತಿದ್ದ ಡಿ ಬಾಸ್ ದರ್ಶನ್, ರಾಜಮಾರ್ತಾಂಡ ತಂಡಕ್ಕೂ ಸಾಥ್ ನೀಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

ಈ ಎಲ್ಲದರ ನಡುವೆ ಚಿರು ನಟನೆಯ ರಾಜಮಾರ್ತಾಂಡ ಸಿನಿಮಾ ರಿಲೀಸ್ ಯಾವಾಗ ಅನ್ನೋ ಪ್ರಶ್ನೆ ಗೆ ಉತ್ತರ ತಮ್ಮ ಧ್ರುವ ಸರ್ಜಾ ಹುಟ್ಟುಹಬ್ಬದ ದಿನ ಅಂದ್ರೆ ಅಕ್ಟೋಬರ್ 5ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಚಿರು ಅಂದ್ರೆ ನಿರ್ಮಾಪಕ ಶಿವಕುಮಾರ್ ಅವರಿಗೆ ಅಚ್ಚುಮೆಚ್ಚು. ಹಣಕ್ಕಾಗಿ ಸಿನಿಮಾ ಮಾಡಿದ್ರೆ ಚಿರು ಅಗಲಿದ ವರ್ಷದಲ್ಲೇ ಸಿನಿಮಾ ರಿಲೀಸ್ ಮಾಡಬಹುದಿತ್ತು. ಆದ್ರೆ ಹಾಗೇ ಮಾಡದೆ ಇಷ್ಟೂ ಸಮಯ ತೆಗೆದುಕೊಂಡು ರಿಲೀಸ್ ಮಾಡುತ್ತಿದೆ. ಈ ಸಿನಿಮಾನ ನಮ್ಮ ಎಮೋಷನ್ ಅಂತ ನಾವು ಮಿಸ್ ಇಲ್ಲದೇ ನೋಡೋಣ ಅನ್ನೋದೇ ನಮ್ಮ ಕಳಕಳಿ.

ಇದನ್ನೂ ಓದಿ- ಸಂದರ್ಶನದ ವೇಳೆ ಕ್ಯಾಮರಾಗೆ ಅಡ್ಡ ಬಂದ ವ್ಯಕ್ತಿಗೆ ಹೊಡೆದ ನಟಿ ಲಕ್ಷ್ಮಿ..! ವಿಡಿಯೋ ವೈರಲ್‌

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News