Shani Zodiac Signs: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ರಾಶಿಗಳ ಜನರು ತಮ್ಮ ಜೀವನದ 30ನೇ ವಯಸ್ಸಿನ ನಂತರ ಅತಿ ಧನವಂತರಾಗುತ್ತಾರೆ ಎನ್ನಲಾಗಿದೆ. ವಿಶೇಷವಾಗಿ ಕುಂಭ, ಕನ್ಯಾ ಹಾಗೂ ಮಕರ ರಾಶಿಗಳ ಜಾತಕದವರ ಭಾಗ್ಯ 30ನೇ ವಯಸ್ಸಿನ ಬಳಿಕ ಸೂರ್ಯನಂತೆ ಹೊಳೆಯುತ್ತದೆ ಮತ್ತು ಶನಿಯ ವಿಶೇಷ ಕೃಪೆ ಇವರ ಮೇಲಿರುತ್ತದೆ.
ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಒಂಬತ್ತು ಗ್ರಹಗಳು, 12 ರಾಶಿಗಳು ಹಾಗೂ 27 ನಕ್ಷತ್ರಗಳ ಕುರಿತು ವರ್ಣನೆ ಸಿಗುತ್ತದೆ. ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಯಾವುದಾದರೊಂದು ಗ್ರಹದ ಆಧಿಪತ್ಯ ಇದ್ದೇ ಇರುತ್ತದೆ. ಇದು ಆ ರಾಶಿಗೆ ಸೇರಿದ ಜನರ ವ್ಯಕ್ತಿತ್ವದ ಮೇಲೆ ಗೋಚರಿಸುತ್ತದೆ. ಇದಲ್ಲದೆ ಈ ಜನರ ಆರ್ಥಿಕ ಸ್ಥಿತಿಯೂ ಕೂಡ ಭಿನ್ನ ಭಿನ್ನವಾಗಿರುತ್ತದೆ. ಹೀಗಿರುವಾಗ ಇಂದು ನಾವು ನಿಮಗೆ ಒಟ್ಟು ಮೂರು ರಾಶಿಗಳ ಜನರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಜನರ ಭಾಗ್ಯ 30ನೇ ವಯಸ್ಸಿನ ಬಳಿಕ ಭಾರಿ ಹೊಳೆಯುತ್ತದೆ ಹಾಗೂ ಅವರು ತಮ್ಮ ಜೀವನದಲ್ಲಿ ಅತೀ ಧನವಂತರಾಗುತ್ತಾರೆ. ಈ ಜನರ ಮೇಲೆ ಶನಿಯ ವಿಶೇಷ ಕೃಪೆ ಇರುತ್ತದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ,
ಇದನ್ನೂ ಓದಿ-ಅಕ್ಟೋಬರ್ ನಲ್ಲಿ ಒಟ್ಟು 6 ಬಾರಿ ಗ್ರಹಗಳ ನಡೆ ಬದಲಾವಣೆ, ವಿಘ್ನ ವಿನಾಶಕನ ಕೃಪೆಯಿಂದ ಈ ರಾಶಿಗಳಿಗೆ ಭಾರಿ ಧನಲಾಭ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Shani Zodiac Signs: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ರಾಶಿಗಳ ಜನರು ತಮ್ಮ ಜೀವನದ 30ನೇ ವಯಸ್ಸಿನ ನಂತರ ಅತಿ ಧನವಂತರಾಗುತ್ತಾರೆ ಎನ್ನಲಾಗಿದೆ. ವಿಶೇಷವಾಗಿ ಕುಂಭ, ಕನ್ಯಾ ಹಾಗೂ ಮಕರ ರಾಶಿಗಳ ಜಾತಕದವರ ಭಾಗ್ಯ 30ನೇ ವಯಸ್ಸಿನ ಬಳಿಕ ಸೂರ್ಯನಂತೆ ಹೊಳೆಯುತ್ತದೆ ಮತ್ತು ಶನಿಯ ವಿಶೇಷ ಕೃಪೆ ಇವರ ಮೇಲಿರುತ್ತದೆ.
ಕನ್ಯಾರಾಶಿ: ಈ ಜನರು ತುಂಬಾ ಬಿಸ್ನೆಸ್ ಮೈಂಡೆಡ್ ಆಗಿರುತ್ತಾರೆ, 30ನೇ ವಯಸ್ಸಿಯನ್ ಬಳಿಕ ಈ ಜನರ ಭಾಗ್ಯ ಭಾರಿ ಹೊಳೆಯುತ್ತದೆ. ಈ ಜನರು ತಮ್ಮ ಬಿಸ್ನೆಸ್ ಗೆ ಸಂಬಂಧಿಸಿದಂತೆ ತುಂಬಾ ಪರಿಶ್ರಮಿಗಳು ಹಾಗೂ ನಿಷ್ಟಾವಂತರಾಗಿರುತ್ತಾರೆ. ಹೀಗಾಗಿ 30ನೇ ವಯಸ್ಸಿನ ನಂತರ ಇವರು ಅತಿ ಧನವಂತರಾಗುತ್ತಾರೆ. ಇವರು ಓರ್ವ ಅತ್ಯುತ್ತಮ ಲೀಡರ್ ಎಂದು ಸಾಬೀತಾಗುತ್ತಾರೆ. ಅತಿ ಬುದ್ಧಿವಂತರಾದ ಇವರು ಸಾಕಷ್ಟು ದೂರದೃಷ್ಟಿವುಳ್ಳವರಾಗಿರುತ್ತಾರೆ. 30ನೇ ವಯಸ್ಸಿನ ಬಳಿಕ ಈ ಜನರಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ ಹಾಗೂ ಈ ಜನರ ಮೇಲೆ ಶನಿ ಹಾಗೂ ಬುಧನ ವಿಶೇಷ ಕೃಪೆ ಇರುತ್ತದೆ.
ಮಕರ ರಾಶಿ: ರಾಶಿಗಳ ಜನ್ಮ ಜಾತಕದಲ್ಲಿರುವ ಯೋಗಗಳು ಈ ಜನರ ಭಾಗ್ಯವನ್ನು 30ನೇ ವಯಸ್ಸಿನ ಬಳಿಕ ಭಾರಿ ಹೊಳೆಯುವಂತೆ ಮಾಡುತ್ತವೆ. ಏಕೆಂದರೆ ಮಕರ ರಾಶಿಗೆ ಶನಿ ಅಧಿಪತಿಯಾಗಿದ್ದು, ಆತ ತುಂಬಾ ನಿಧಾನವಾಗಿ ಇವರಿಗೆ ತನ್ನ ಫಲಗಳನ್ನು ನೀಡುತ್ತಾನೆ. ಆದರೆ, ಈ ಜನರಿಗೆ 30ನೇ ವಯಸ್ಸಿನ ಬಳಿಕ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳುವ ಪ್ರವೃತ್ತಿ ಇವರದ್ದಾಗಿರುತ್ತದೆ ಮತ್ತು ಇದೆ ಕಾರಣದಿಂದ ಇವರಿಗೆ ಈ ಯಶಸ್ಸು ಲಭಿಸುತ್ತದೆ. ಈ ಜನರು ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು ದುಡಿಯುವವರಾಗಿರುತ್ತಾರೆ.
ಕುಂಭ ರಾಶಿ: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಜನರ ರಾಶಿ ಕುಂಭ ರಷಿಯಾಗಿರುತ್ತದೆಯೋ ಅವರಿಗೆ 30ನೇ ವಯಸ್ಸಿನ ಗಳಿಕ ವಿಶೇಷ ಯಶಸ್ಸು ಸಿಗುತ್ತದೆ. 30ನೇ ವಯಸ್ಸಿನ ಬಳಿಕ ಇವರ ವೃತ್ತಿ ಹಾಗೂ ವ್ಯಾಪಾರ ಜೀವನದಲ್ಲಿ ಸಾಕಷ್ಟು ಉನ್ನತಿ ಲಭಿಸುತ್ತದೆ. ಹಣ ಉಳಿತಾಯ ಮಾಡುವಲ್ಲಿ ಈ ಜನರು ಸಾಕಷ್ಟು ನಿಪುಣರಾಗಿರುತ್ತಾರೆ. ಇವರಲ್ಲಿರುವ ವಿಶೇಷ ಗುಣ ಇವರನ್ನು ಇತರರಿಂದ ಭಿನ್ನವಾಗಿಸುತ್ತದೆ. ಸಾಮಾನ್ಯವಾಗಿ ಈ ಜನರು ಏಕಕಾಲಕ್ಕೆ ಹಲವು ಕೆಲಸ ನಿಭಾಯಿಸುವ ವಿಶೇಷ ಕಲೆ ಹೊಂದಿರುತ್ತಾರೆ. ಇವರು ತಮ್ಮ ಸಂಗಾತಿಗೆ ತುಂಬಾ ಪ್ರೀತಿಯನ್ನು ನೀಡುತ್ತಾರೆ. ಒಂದು ಬಾರಿ ಇವರು ಯಾವುದಾದರೊಂದು ಗುರಿಯನ್ನು ನಿಗದಿಪಡಿಸಿದರೆ, ಗುರಿ ತಲುಪುವವರೆಗೆ ನಿಲ್ಲುವ ಮಾತೆ ಎತ್ತುವುದಿಲ್ಲ. ಈ ರಾಶಿಗೂ ಕೂಡ ಶನಿ ಅಧಿಪತಿಯಾಗಿದ್ದಾನೆ ಮತ್ತು ಆತನೇ ಇವರಿಗೆ ಈ ಗುಣಗಳನ್ನು ದಯಪಾಲಿಸುತ್ತಾನೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)