Lip kiss benefits : ಚುಂಬನ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗ. ಸಂಗಾತಿಗೆ ಕಿಸ್ ಮಾಡುವುದರಿಂದ ಬಾಂಧವ್ಯ ಗಟ್ಟಿಗೊಳ್ಳುತ್ತದೆ, ಪ್ರೀತಿ ಹೆಚ್ಚುತ್ತದೆ. ಅಷ್ಟೇ ಅಲ್ಲ ಮುತ್ತಿಕ್ಕುವುದು ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಿದ್ರೆ ಮುತ್ತಿನ ಹಲವು ಆರೋಗ್ಯ ಪ್ರಯೋಜನಗಳು ಯಾವುದು ಅಂತ ವಿವರವಾಗಿ ತಿಳಿಯೋಣ ಬನ್ನಿ..
ನ್ಯೂಯಾರ್ಕ್ ನ ಖ್ಯಾತ ದಂತ ವೈದ್ಯ ಜೆಫ್ ಗೊಲುಬ್ ಪ್ರಕಾರ, ದೀರ್ಘ ಕಾಲದ ಚುಂಬನವು ನಿಮಿಷಕ್ಕೆ 12 ಕ್ಯಾಲೊರಿಗಳನ್ನು ಸುಡುತ್ತದೆ ಎಂದು ಹೇಳಲಾಗುತ್ತದೆ. ದಿನಕ್ಕೆ ಮೂರು ಬಾರಿ (ಸರಾಸರಿ 20 ಸೆಕೆಂಡುಗಳು) ಲಿಪ್ಕಿಸ್ ಮಾಡಿದ್ರೆ ದೇಹದ ಅರ್ಧ ಕಿಲೋ ತೂಕ ಕಡಿಮೆಯಾಗುತ್ತದೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ.
ಇದನ್ನೂ ಓದಿ: ಬಿಪಿ ಲೋ ಆಯ್ತು ಅಂತ ಟೆನ್ಶನ್ ಮಾಡ್ಕೋಬೇಡಿ, ಈ ಆಹಾರ ತಿನ್ನಿ ಸಾಕು
ಚುಂಬನವು ನಮ್ಮ ಹೃದಯ ಬಡಿತವನ್ನು ವೇಗಗೊಳಿಸುತ್ತದೆ. ಇದರ ಪರಿಣಾಮವಾಗಿ, ಹೃದಯವು ಹೆಚ್ಚು ಕೆಲಸ ಮಾಡುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. ಈ ಸಮಯದಲ್ಲಿ ನಮ್ಮ ನಾಡಿ ಪ್ರತಿ ನಿಮಿಷಕ್ಕೆ 110 ಬಾರಿ ಬಡಿದುಕೊಳ್ಳುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ 72 ಬಾರಿ ಬಡಿಯುತ್ತದೆ.
ಈ ಸಮಯದಲ್ಲಿ ನಮ್ಮ ಶ್ವಾಸಕೋಶಗಳು ಹೆಚ್ಚುವರಿಯಾಗಿ ಕೆಲಸ ಮಾಡುತ್ತವೆ. ನಿಮಿಷಕ್ಕೆ 60 ಬಾರಿ ನಾವು ಉಸಿರಾಡುತ್ತೇವೆ, ಹಾಗಾಗಿ ನಿಯಮಿತವಾಗಿ ಚುಂಬಿಸುವುದರಿಂದ ನಮ್ಮ ಹೃದಯ ಮತ್ತು ಶ್ವಾಸಕೋಶಗಳನ್ನು ಆರೋಗ್ಯವಾಗಿಡಬಹುದು ಎನ್ನುತ್ತಾರೆ ಸಂಶೋಧಕರು. ಅಲ್ಲದೆ, ಪ್ರೀತಿಪಾತ್ರರನ್ನು ತಬ್ಬಿಕೊಳ್ಳುವುದು ಅಥವಾ ಚುಂಬಿಸುವುದು ಒತ್ತಡವನ್ನು ದೂರ ಮಾಡುತ್ತದೆ.
ಇದನ್ನೂ ಓದಿ:ಹವಾಮಾನ ಬದಲಾಗುತ್ತಿದ್ದಂತೆಯೇ ನಿಂಬೆಹಣ್ಣು ಸೇವಿಸಿ ! ಈ ಸಮಸ್ಯೆಗಳು ಕಾಡುವುದಿಲ್ಲ
ಆದರೆ ಚುಂಬಿಸುವುದರಿಂದ ಕೆಲವು ಅಡ್ಡ ಪರಿಣಾಮಗಳಿವೆ ಎನ್ನುತ್ತಾರೆ ದಂತವೈದ್ಯ ಭೂಪೇಶ್ ಗುಪ್ತಾ. ಪ್ರತಿ 10 ಸೆಕೆಂಡ್ ಚುಂಬಿಸುವುದರಿಂದ ಸುಮಾರು 80 ಮಿಲಿಯನ್ ಬ್ಯಾಕ್ಟೀರಿಯಾಗಳು ಒಬ್ಬ ವ್ಯಕ್ತಿಯ ದೇಹದಿಂದ ಇನ್ನೊಬ್ಬ ವ್ಯಕ್ತಿಯ ದೇಹಕ್ಕೆ ವರ್ಗಾವಣೆಯಾಗುತ್ತವೆ. ಅಲ್ಲದೆ, ವಸಡು ಕಾಯಿಲೆ, ಹರ್ಪಿಸ್, ಮೆನಿಂಜೈಟಿಸ್, ಸಾಮಾನ್ಯ ಶೀತ-ಕೆಮ್ಮು-ಜ್ವರದಂತಹ ರೋಗಗಳಿಂದ ವೈರಸ್ ಅಥವಾ ಬ್ಯಾಕ್ಟೀರಿಯಾಗಳು ಚುಂಬನದ ಮೂಲಕವೂ ಹರಡಬಹುದು ಎಂದು ತಿಳಿಯುವುದು ಮುಖ್ಯ. ಆದ್ದರಿಂದ ಎಚ್ಚರಿಕೆಯಿಂದ ಮತ್ತು ಸ್ವಚ್ಛವಾಗಿರುವುದು ತುಂಬಾ ಒಳ್ಳೆಯದು ಎನ್ನುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.