ENG vs BAN: ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಶತಕ ಬಾರಿಸಿದ ಡೇವಿಡ್ ಮಲನ್...!

ENG vs BAN Match Updates: ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ನ 7ನೇ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 364 ರನ್ ಗಳಿಸಿತು.

Written by - Savita M B | Last Updated : Oct 10, 2023, 04:20 PM IST
  • ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ 7ನೇ ಲೀಗ್ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ
  • ಇದರಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು.
  • ಮಲಾನ್ ವಿಶ್ವಕಪ್‌ನಲ್ಲಿ ಮೊದಲ ಶತಕ ಬಾರಿಸಿದ್ದಲ್ಲದೇ, ಏಕದಿನದಲ್ಲಿ 6ನೇ ಶತಕ ದಾಖಲಿಸಿದ್ದಾರೆ.
ENG vs BAN: ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಶತಕ ಬಾರಿಸಿದ ಡೇವಿಡ್ ಮಲನ್...!  title=

World Cup 2023: ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ 7ನೇ ಲೀಗ್ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಇದರಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದಲ್ಲಿ ಜಾನಿ ಬೈರ್‌ಸ್ಟೋ ಮತ್ತು ಡೇವಿಡ್ ಮಲಾನ್ ಮೊದಲ ವಿಕೆಟ್‌ಗೆ 115 ರನ್ ಗಳಿಸಿದರು. ಬೈರ್‌ಸ್ಟೋ 59 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 52 ರನ್ ಗಳಿಸಿದರು.

ಇದನ್ನೂ ಓದಿ-Asia Cup, 2023: ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸ್ಪೋಟಕ ಶತಕಕ್ಕೆ  ಬೆದರಿದ ಪಾಕ್

ಮಲಾನ್ ನಂತರ ಜೋ ರೂಟ್ ಕಣಕ್ಕಿಳಿದರು. ಈಗಾಗಲೇ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ರೂಟ್ ಈ ಪಂದ್ಯದಲ್ಲಿಯೂ ಅರ್ಧಶತಕ ಗಳಿಸಿದರು. ಒಂದೆಡೆ, ಮಲಾನ್ ವಿಶ್ವಕಪ್‌ನಲ್ಲಿ ಮೊದಲ ಶತಕ ಬಾರಿಸಿದ್ದಲ್ಲದೇ, ಏಕದಿನದಲ್ಲಿ 6ನೇ ಶತಕ ದಾಖಲಿಸಿದ್ದಾರೆ. ಆಟ ಮುಂದುವರಿಸಿದ ಮಲಾನ್ 107 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 142 ರನ್ ಗಳಿಸಿದರು. 

ಇದನ್ನೂ ಓದಿ-ಏಷ್ಯಾಕಪ್’ಗೆ ತಪ್ಪುತ್ತಿಲ್ಲ ವರುಣನ ಕಾಟ: ಫೈನಲ್ ಪಂದ್ಯ ಕೊಲಂಬೋದಿಂದ ಈ ಮೈದಾನಕ್ಕೆ ಶಿಫ್ಟ್!

ಇನ್ನು ರೂಟ್ 68 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು 8 ಬೌಂಡರಿ ಸೇರಿದಂತೆ 82 ರನ್ ಗಳಿಸಿದರು. ಅಂತಿಮವಾಗಿ ಇಂಗ್ಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 364 ರನ್ ಗಳಿಸಿ ಕೆಲವೇ ರನ್‌ಗಳಿಂದ ಆಲೌಟ್ ಆಯಿತು. ಇನ್ನು ಬಾಂಗ್ಲಾದೇಶ ತಂಡದ ಬೌಲಿಂಗ್‌ನಲ್ಲಿ ಮೆಹದಿ ಹಸನ್ 4 ಹಾಗೂ ಶೋರಿಫುಲ್ ಇಸ್ಲಾಂ 3 ವಿಕೆಟ್ ಪಡೆದರು. ತಸ್ಕಿನ್ ಅಹ್ಮದ್ ಮತ್ತು ಶಕೀಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News