WATCH: ಅನುಷ್ಕಾ ಶರ್ಮಾ ಬೇಬಿ ಬಂಪ್ ಕಂಡೇ ಬಿಡ್ತಾ.! ವಿರಾಟ್ ಜೊತೆಗಿನ ವಿಡಿಯೋ ವೈರಲ್‌

Anushka Sharma Baby Bump Video Viral : ವಿರಾಟ್ ಕೊಹ್ಲಿಯೊಂದಿಗಿನ ಅನುಷ್ಕಾ ಶರ್ಮಾ ಹೊಸ ವಿಡಿಯೋದಲ್ಲಿ ಬೇಬಿ ಬಂಪ್‌ ಮರೆಮಾಚುವಂತೆ ಕಂಡಿದೆ. ಇದು ಪ್ರಗ್ನೆನ್ಸಿ ವದಂತಿಗಳನ್ನು ದೃಢಪಡಿಸುವಂತಿದೆ.   

Written by - Chetana Devarmani | Last Updated : Oct 15, 2023, 01:57 PM IST
  • ವಿರಾಟ್ ಕೊಹ್ಲಿಯೊಂದಿಗಿನ ಅನುಷ್ಕಾ ಶರ್ಮಾ ವಿಡಿಯೋ
  • ಹೊಸ ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಬೇಬಿ ಬಂಪ್!!
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
WATCH: ಅನುಷ್ಕಾ ಶರ್ಮಾ ಬೇಬಿ ಬಂಪ್ ಕಂಡೇ ಬಿಡ್ತಾ.! ವಿರಾಟ್ ಜೊತೆಗಿನ ವಿಡಿಯೋ ವೈರಲ್‌  title=

Virat Kohli - Anushka Sharma Video Viral : ಅನುಷ್ಕಾ ಶರ್ಮಾ ಗರ್ಭಧಾರಣೆಯ ವದಂತಿಗಳ ನಡುವೆ ಹೊಸ ವಿಡಿಯೋವೊಂದು ವೈರಲ್‌ ಆಗಿದೆ. ಈ ವಿಡಿಯೋವು ಅನುಷ್ಕಾ ಶರ್ಮಾ ಅವರ ಗರ್ಭಧಾರಣೆಯ ವದಂತಿಗಳನ್ನು ದೃಢಪಡಿಸುವಂತಿದೆ. ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದ ನಂತರ ನಟಿ ವಿರಾಟ್ ಕೊಹ್ಲಿಯೊಂದಿಗೆ ಕಾಣಿಸಿಕೊಂಡರು.

ವಿರಾಟ್ ಕೊಹ್ಲಿಯೊಂದಿಗಿನ ಅನುಷ್ಕಾ ಶರ್ಮಾ ಹೊಸ ವಿಡಿಯೋದಲ್ಲಿ ಬೇಬಿ ಬಂಪ್‌ ಮರೆಮಾಚುವಂತೆ ಕಂಡಿದೆ. ಇದು ಪ್ರಗ್ನೆನ್ಸಿ ವದಂತಿಗಳನ್ನು ದೃಢಪಡಿಸುವಂತಿದೆ. ಶನಿವಾರ ಅಹಮದಾಬಾದ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ನಟಿ ಅನುಷ್ಕಾ ಶರ್ಮಾ ಆಗಮಿಸಿದ್ದರು. ಪಂದ್ಯದ ಸಮಯದಲ್ಲಿ ಕೆಲವು ಬಾರಿ ಕ್ಯಾಮರಾಮನ್‌ಗಳು ಅನುಷ್ಕಾರನ್ನು ಸೆರೆ ಹಿಡಿದರು. ಅನುಷ್ಕಾ ತನ್ನ ಬೇಬಿ ಬಂಪ್‌ನ್ನು ಮರೆ ಮಾಡುವ ರೀತಿಯಲ್ಲಿ ಕಾಣಿಸಿಕೊಂಡರು. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ಇದನ್ನೂ ಓದಿ: ಸೋಲಿಲ್ಲದ ಸರದಾರ ‘ಭಾರತ’ಕ್ಕೆ ಅದ್ಭುತ ಜಯ: ಟೀಂ ಇಂಡಿಯಾ ದಾಳಿಗೆ ಬೆದರಿದ ಪಾಕಿಸ್ತಾನಕ್ಕೆ ಹೀನಾಯ ಸೋಲು

ಟ್ವಿಟರ್ (ಈಗ X ಎಂದು ಕರೆಯಲಾಗುತ್ತದೆ) ಖಾತೆ @wrogn_edits ಹಂಚಿಕೊಂಡ ವಿಡಿಯೋದಲ್ಲಿ, ಅನುಷ್ಕಾ ತನ್ನ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಲಾಬಿ ಮೂಲಕ ಸಾಗುತ್ತಿರುವಾಗ ವಿರಾಟ್ ಅನುಷ್ಕಾ ಅವರ ಕೈ ಹಿಡಿದಿರುವುದು ಕಂಡುಬಂದಿದೆ. ಅನುಷ್ಕಾ ದೊಡ್ಡ ಗಾತ್ರದ ಬಿಳಿ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಲೈಟ್‌ ಆಗಿ ಅವರ ಬೇಬಿ ಬಂಪ್‌ ಕಾಣುತ್ತಿದೆ. 

 

 

ಕೆಲವು ವಾರಗಳಿಂದ ಅನುಷ್ಕಾ ಗರ್ಭಿಣಿ ಎಂಬ ವದಂತಿ ಹಬ್ಬಿತ್ತು. ಕಳೆದ ತಿಂಗಳು, ಅವರು ಮತ್ತು ವಿರಾಟ್ ತಮ್ಮ ಎರಡನೇ ಮಗುವವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವದಂತಿ ಹಬ್ಬಿದೆ. ಅನುಷ್ಕಾ ಮತ್ತು ವಿರಾಟ್ ಅವರಿಗೆ ಈಗಾಗಲೇ ಎರಡೂವರೆ ವರ್ಷದ ವಾಮಿಕಾ ಎಂಬ ಮಗಳಿದ್ದಾಳೆ.

ಅನುಷ್ಕಾ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯಂತೆ, ಅವರು ನಂತರದ ಹಂತದಲ್ಲಿ ಔಪಚಾರಿಕವಾಗಿ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ ಎಂಬ ವರದಿಗಳು ಹಬ್ಬಿದ್ದವು. ಕೆಲಸದ ಮುಂಭಾಗದಲ್ಲಿ, ಅನುಷ್ಕಾ Chakda Xpress ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಕ್ರಿಕೆಟರ್‌ ಜೂಲನ್ ಗೋಸ್ವಾಮಿ ಅವರ ಜೀವನವನ್ನು ಆಧರಿಸಿದೆ. ಅನುಷ್ಕಾ ಜೂಲನ್ ಗೋಸ್ವಾಮಿ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಏಕದಿನದಲ್ಲಿ ವಿಶೇಷ 'ಶತಕ' ಪೂರೈಸಿದ ಜಡೇಜಾ, ಕಪಿಲ್ ದೇವ್-ಅನಿಲ್ ಕುಂಬ್ಳೆ ಕ್ಲಬ್ ಸೇರಿದ ಜಡ್ಡು! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News