ಚಂದ್ರಗ್ರಹಣದ ದಿನ ತಪ್ಪಿಯೂ ಮಾಡಬಾರದು ಈ ಕೆಲಸ ! ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ

Lunar Eclipse 2023: ಮಧ್ಯಾಹ್ನದಿಂದಲೇ ಗ್ರಹಣದ ಸೂತಕದ ಅವಧಿ ಪ್ರಾರಂಭವಾಗುತ್ತದೆ. ಚಂದ್ರಗ್ರಹಣ ಅವಧಿ ಮತ್ತು ಸೂತಕ ಕಾಲವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ.  

Written by - Ranjitha R K | Last Updated : Oct 20, 2023, 02:03 PM IST
  • 2023 ರ ಕೊನೆಯ ಚಂದ್ರಗ್ರಹಣ ಇದೇ ತಿಂಗಳಲ್ಲಿ ನಡೆಯುತ್ತಿದೆ.
  • ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುತ್ತದೆ.
  • ಭಾರತದಲ್ಲಿ ಗೋಚರಿಸುವ ವರ್ಷದ ಏಕೈಕ ಗ್ರಹಣ ಇದಾಗಿರಲಿದೆ.
ಚಂದ್ರಗ್ರಹಣದ ದಿನ ತಪ್ಪಿಯೂ ಮಾಡಬಾರದು ಈ ಕೆಲಸ ! ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ  title=

Lunar Eclipse 2023 : 2023 ರ ಕೊನೆಯ ಚಂದ್ರಗ್ರಹಣ ಇದೇ ತಿಂಗಳಲ್ಲಿ ನಡೆಯುತ್ತಿದೆ. ಈ ಚಂದ್ರಗ್ರಹಣವು ಅಕ್ಟೋಬರ್ 28 ರಂದು ನಡೆಯಲಿದೆ. ಈ ಚಂದ್ರಗ್ರಹಣ  ಭಾರತದಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಗೋಚರಿಸುವ ವರ್ಷದ ಏಕೈಕ ಗ್ರಹಣ ಇದಾಗಿರಲಿದೆ. ಭಾರತೀಯ ಕಾಲಮಾನದ ಪ್ರಕಾರ 2023 ರ ಅಕ್ಟೋಬರ್ 28 ಮತ್ತು 29 ರ ಮಧ್ಯರಾತ್ರಿ ಚಂದ್ರಗ್ರಹಣ ಸಂಭವಿಸುತ್ತದೆ. ಮಧ್ಯಾಹ್ನದಿಂದಲೇ ಗ್ರಹಣದ ಸೂತಕದ ಅವಧಿ ಪ್ರಾರಂಭವಾಗುತ್ತದೆ. ಚಂದ್ರಗ್ರಹಣ ಅವಧಿ ಮತ್ತು ಸೂತಕ ಕಾಲವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ.

ಚಂದ್ರಗ್ರಹಣದ ಸಮಯದಲ್ಲಿ ಈ ತಪ್ಪನ್ನು ಮಾಡಬಾರದು :  
ಚಂದ್ರಗ್ರಹಣದ ಸಮಯದಲ್ಲಿ, ತುಳಸಿ ಎಲೆಗಳನ್ನು ಆಹಾರ ಮತ್ತು ನೀರಿನಲ್ಲಿ ಹಾಕಿ ಇಡಲಾಗುತ್ತದೆ. ಗ್ರಹಣದ ಸಮಯದಲ್ಲಿ ಹೊರಸೂಸುವ ಹಾನಿಕಾರಕ ಕಿರಣಗಳಿಂದ ಆಹಾರ ಪದಾರ್ಥಗಳು ಹಾಳಾಗಬಾರದು ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗುತ್ತದೆ. ಆದರೆ, ಚಂದ್ರಗ್ರಹಣದ ಸಮಯದಲ್ಲಿ ತುಳಸಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ತಪ್ಪಿಯೂ ಮಾಡಬಾರದು. 

ಇದನ್ನೂ ಓದಿ : ದುರ್ಗಾಷ್ಟಮಿಯಂದು ಈ ವಸ್ತುಗಳನ್ನು ಮನೆಗೆ ತನ್ನಿ, ಸಂಪತ್ತು ಸಂತಸ ಕರುಣಿಸುವಳು ದುರ್ಗೆ!

- ಚಂದ್ರಗ್ರಹಣದ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟಬೇಡಿ. ತುಳಸಿಯನ್ನು ಪೂಜಿಸಬೇಡಿ ಅಥವಾ ತುಳಸಿಗೆ ನೀರನ್ನು ಅರ್ಪಿಸಬೇಡಿ. ಚಂದ್ರಗ್ರಹಣ ಅಥವಾ ಸೂರ್ಯಗ್ರಹಣದ ಸಮಯದಲ್ಲಿ ತುಳಸಿಯನ್ನು ಮುಟ್ಟಬಾರದು.

- ಚಂದ್ರಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಮುಟ್ಟುವ ತಪ್ಪನ್ನು ಮಾಡಬೇಡಿ. ಚಂದ್ರಗ್ರಹಣದ ಸೂತಕ ಪ್ರಾರಂಭವಾಗುವ ಮೊದಲು ತುಳಸಿ ಎಲೆಗಳನ್ನು ಕಿತ್ತು ಇಟ್ಟುಕೊಳ್ಳುವುದು ಉತ್ತಮ. ಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಕೀಳುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಎನ್ನುವುದು ನಂಬಿಕೆ. ಲಕ್ಷ್ಮೀದೇವಿ ಅಸಮಾಧಾನಗೊಂಡರೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  

ಇದನ್ನೂ ಓದಿ : ಈ ರಾಶಿಯವರಿಗೆ ಅದೃಷ್ಟದ ಸಿರಿ ಹೊತ್ತು ತರಲಿದೆ 2024 ! ವರ್ಷ ಪೂರ್ತಿ ಇರುವುದು ಲಕ್ಷ್ಮೀ ಕಟಾಕ್ಷ ! ಹರಿದು ಬರುವುದು ಧನ ಸಂಪತ್ತು

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News