Virat Kohli Reaction: ಪುಣೆಯಲ್ಲಿ ನಡೆದ ವಿಶ್ವಕಪ್ 2023ರ 17ನೇ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದೆ. ವಿರಾಟ್ ಕೊಹ್ಲಿ ಅಜೇಯ ಶತಕ ಬಾರಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ರನ್ ಬೆನ್ನಟ್ಟಿದ ಕೊಹ್ಲಿ 97 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್’ಗಳ ಸಹಾಯದಿಂದ ಅಜೇಯ 103 ರನ್ ಗಳಿಸಿದರು, ಈ ಅದ್ಭುತ ಪ್ರದರ್ಶನದಿಂದಾಗಿ ಅವರಿಗೆ 'ಪಂದ್ಯ ಶ್ರೇಷ್ಠ ಆಟಗಾರ' ಪ್ರಶಸ್ತಿ ನೀಡಲಾಯಿತು. ಆದರೆ ಈ ಪ್ರಶಸ್ತಿ ಸ್ವೀಕರಿಸಿದ ನಂತರ ಕೊಹ್ಲಿ, ರವೀಂದ್ರ ಜಡೇಜಾ ಬಳಿ ಕ್ಷಮೆ ಕೇಳಿದ್ದಾರೆ. ಜಡೇಜಾ 10 ಓವರ್’ಗಳಲ್ಲಿ ಕೇವಲ 38 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.
ಇದನ್ನೂ ಓದಿ: Nayanathara: ಸಿನಿಮಾಗೆ ಪಡೆಯುವ ಸಂಭಾವನೆ ಹೆಚ್ಚಿಸಿಕೊಂಡ ಲೇಡಿ ಸೂಪರ್ ಸ್ಟಾರ್..! ಎಷ್ಟು ಕೋಟಿ ಗೊತ್ತಾ?
"ಜಡೇಜಾ ಅವರಿಂದ ಇದನ್ನು ('ಪಂದ್ಯ ಶ್ರೇಷ್ಠ ಆಟಗಾರ) ಕಸಿದುಕೊಂಡಿದ್ದೇನೆ, ಕ್ಷಮಿಸಿ, ನಾನು ಕೆಲವು ದೊಡ್ಡ ಕೊಡುಗೆ ನೀಡಲು ಬಯಸುತ್ತೇನೆ. ವಿಶ್ವಕಪ್’ನಲ್ಲಿ ನನ್ನ ಹೆಸರಲ್ಲಿ ಕೆಲವು ಅರ್ಧ ಶತಕಗಳಿವೆ. ಆದರೆ ಅವುಗಳನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಕೊನೆಯವರೆಗೂ ನಿಂತು ಆಟವನ್ನು ಮುಗಿಸಲು ಬಯಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ಮಜ್ಜಿಗೆ ಜೊತೆ ಈ ಪುಡಿಯನ್ನು ಬೆರೆಸಿ ಕುಡಿದರೆ ಸೊಂಟದ ಸುತ್ತಲಿನ ಬೊಜ್ಜು ಸಲೀಸಾಗಿ ಕರಗುತ್ತೆ
ಇನ್ನು ಪಿಚ್ ಬಗ್ಗೆ ಮಾತನಾಡಿದ ಕೊಹ್ಲಿ, “ಪಿಚ್ ಚೆನ್ನಾಗಿತ್ತು ಮತ್ತು ಇದು ನನ್ನ ಸಹಜ ಆಟವನ್ನು ಆಡಲು ಅವಕಾಶ ಮಾಡಿಕೊಟ್ಟಿತು. ತವರಿನಲ್ಲಿ ಆಡುತ್ತಿರುವ ನಮಗೆ ವಿಶೇಷ ಭಾವನೆ ಇದೆ, ಈ ಜನರ ಮುಂದೆ ಆಡುವ ಮೂಲಕ ನಾವು ಅದರ ಸಂಪೂರ್ಣ ಲಾಭವನ್ನು ಪಡೆಯಲು ಬಯಸುತ್ತೇವೆ” ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.