ಬಿಜೆಪಿಗೆ ಬೈ.. ಕಾಂಗ್ರೆಸ್‌ಗೆ ಜೈ.. ʻಕೈʼಹಿಡಿದ ಪೂರ್ಣಿಮಾ ಶ್ರೀನಿವಾಸ್

Purnima Srinivas: ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದೆ. ಹೌದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಮಲಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಕೈಹಿಡಿದಿದ್ದಾರೆ.

Written by - Savita M B | Last Updated : Oct 20, 2023, 09:32 PM IST
  • ಬಿಜೆಪಿಗೆ ಪೂರ್ಣಿಮಾ ಶ್ರೀನಿವಾಸ್ ಗುಡ್ ಬೈ
  • ಕೈ ಹಿಡಿದ್ರು ಪತಿ, ಪತ್ನಿ.. ಬಿಜೆಪಿಗೆ ಶಾಕ್
  • ನನ್ನ ಸಮಾಜಕ್ಕೆ ನ್ಯಾಯ ಸಿಗಬೇಕೆಂದ ಶ್ರೀನಿವಾಸ್
ಬಿಜೆಪಿಗೆ ಬೈ.. ಕಾಂಗ್ರೆಸ್‌ಗೆ ಜೈ.. ʻಕೈʼಹಿಡಿದ ಪೂರ್ಣಿಮಾ ಶ್ರೀನಿವಾಸ್ title=

Purnima Srinivas Joined to Congress: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಅವರ ಜತೆ ಪತಿ ಶ್ರೀನಿವಾಸ್ ಹಾಗೂ ನೂರಾರು ಬೆಂಬಲಿಗರು ಇಂದು ಸೇರ್ಪಡೆಯಾದ್ರು.ಇದರೊಂದಿಗೆ  ಯಾದವ ಸಮುದಾಯದ ಬೆಂಬಲ ಕಾಂಗ್ರೆಸ್ ಕಡೆ ತಿರುಗಿದಂತಾಗಿದೆ.

ಕಳೆದ ಒಂದೂವರೆ ತಿಂಗಳಿಂದ ಬಿಜೆಪಿ- ಜೆಡಿಎಸ್ ನ  ನಾಯಕರು ಕೈ ಹಿಡಿತಿದ್ದಾರೆ. ಅದು ಇಂದು ಮುಂದುವರಿದಿದೆ. ಇಂದು ಹಿರಿಯೂರಿನ ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಮಲ ತೊರೆದು ಕಾಂಗ್ರೆಸ್ ಕೈಹಿಡಿದಿದ್ದಾರೆ.ಹಿರಿಯೂರು,ಚಿತ್ರದುರ್ಗ,ಶಿರಾ,ತುಮಕೂರು ಭಾಗದ ಅಪಾರ ಬೆಂಬಲಿಗರು ಅವರ ಜೊತೆ ಕಾಂಗ್ರೆಸ್ ಸೇರಿದ್ರು.ಪಕ್ಷದ ಬಾವುಟ ನೀಡುವ ಮೂಲಕ ಗಂಡ ಹೆಂಡತಿಯನ್ನ ಸಿಎಂ,ಡಿಸಿಎಂ ಬರಮಾಡಿಕೊಂಡ್ರು.

ಇದನ್ನೂ ಓದಿ-ಮುಂದಿನ 2 ದಿನ ಈ ಭಾಗಗಳಲ್ಲಿ ಭರ್ಜರಿ ಮಳೆ-ಜಲಪ್ರಳಯದ ಭೀತಿ: ಗುಡುಗು ಮಿಂಚು ಸಹಿತ ಬಿರುಗಾಳಿ ಬೀಸುವ ಮುನ್ನೆಚ್ಚರಿಕೆ

ಪೂರ್ಣಿಮಾ ಹಾಗೂ ಅವರ ಪತಿ ಶ್ರೀನಿವಾಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.ಆತ್ಮೀಯವಾಗಿ ಅವರನ್ನ ಪಕ್ಷಕ್ಕೆ ಬರಮಾಡಿಕೊಳ್ತೇವೆಂದು ಸಿಎಂ ಹೇಳಿದ್ರು. ಪೂರ್ಣಿಮಾ ಕೃಷ್ಣಪ್ಪನವರ ಮಗಳು.‌ ಅವರದ್ದು ಕಾಂಗ್ರೆಸ್ ನ ರಕ್ತ.‌ಆದ್ರೆ ೨೦೧೩ ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಮಿಸ್ ಆಗೋದಕ್ಕೆ ನಾನೇ ಕಾರಣ ಅಂತ ತಪ್ಪನ್ನ ಒಪ್ಪಿಕೊಂಡ್ರು.ಒಬ್ಬರು ಅನಿವಾರ್ಯವಾಗಿ ಬಿಜೆಪಿಗೆ ಹೋಗಿದ್ದರು.ಈಗ ವಾಪಸ್ ಬಂದಿದ್ದಾರೆ. ಇಬ್ಬರಿಗೆ ಅನ್ಯಾಯವಾಗದಂತೆ ನಾನು ನೋಡಿಕೊಳ್ತೇನೆ ಅಂತ ಭರವಸೆ ನೀಡಿದ್ರು

ಇನ್ನು ಕಾಂಗ್ರೆಸ್ ಸೇರ್ಪಡೆಯಾದ ನಂತ್ರ ಪೂರ್ಣಿಮಾ ಪತಿ‌ ಶ್ರೀನಿವಾಸ್  ಮಾತನಾಡಿ, ಪಕ್ಷಕ್ಕೆ ನಾವು ವಾಪಸ್ ಬಂದಿದ್ದೇವೆ.ನನ್ನ ಸಮಾಜ ಹಟ್ಟಿಗಳಲ್ಲಿ ವಾಸ ಮಾಡ್ತಿದೆ.ಸಮಾಜಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು.‌ ನಮ್ಮವರಿಗೆ ಸರಿಯಾದ ನೆಲೆಯಿಲ್ಲ,ಕುಲಶಾಸ್ತ್ತೀಯ ಅಧ್ಯಯನವಾದ್ರೆ ಸಮಾಜದ ಅಭಿವೃದ್ಧಿಯಾಗಲಿದೆ.ಹಾಗಾಗಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ೨ ಕೋಟಿ ಬದಲು ೫ ಕೋಟಿ ನೀಡಿ.‌ ಓಬಿಸಿ ವರ್ಗಗಳನ್ನ ಪ್ರತ್ಯೇಕ ಮಾಡಿ ಅಂತ ಸಿಎಂಗೆ ಬೇಡಿಕೆ ಇಟ್ರು.

ಇದನ್ನೂ ಓದಿ-ಸಾಮಾಜಿಕ ಬಹಿಷ್ಕಾರಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ : ಕುಟುಂಬಸ್ಥರ ಪ್ರತಿಭಟನೆ

ನಾನು ಶಾಸಕಿಯಾಗಿದ್ದವಳು,ಆದ್ರೆ ನನ್ನನ್ನ ಗುರ್ತಿಸುತ್ತಿದ್ದದ್ದು ಕೃಷ್ಣಪ್ಪನವರ ಮಗಳು ಅಂತಾನೇ.ನಾವು ಕಾರಣಾಂತ ರಗಳಿಂದ ಪಕ್ಷವನ್ನ ತೊರೆದಿದ್ದೆವು‌.ಎಲ್ಲರ ಒತ್ತಾಯದ ಮೇಲೆಯೇ ಈಗ ಕಾಂಗ್ರೆಸ್ ಗೆ ಬಂದಿದ್ದೇವೆ.‌ ಹಿಂದುಳಿದವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗ್ತಿಲ್ಲ.ರಾಜಕೀಯ ಅವಕಾಶ ಹೆಚ್ಚು ಸಿಗಬೇಕು. ಕಾಂಗ್ರೆಸ್ ರಕ್ತ ಮತ್ತೆ ಇಲ್ಲಿಗೆ ಕರೆತಂದಿದೆ‌‌ ಎನ್ನುವ ಮೂಲಕ ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ರಪಡಿಸಿದ್ರು.

ಒಟ್ನಲ್ಲಿ ಬಿಜೆಪಿ ತೊರೆದು ಪೂರ್ಣಿಮಾ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಮತ್ತಷ್ಟು ಬಲಬಂದಂತಾಗಿದೆ. ರಾಜ್ಯದಲ್ಲಿರುವ ಯಾದವ ಕೈ ಗೆ ಬೆಂಬಲ‌ ದೊರೆತಂತಾಗಿದೆ.ಇದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಬಹುದು ಎಂಬ ಲೆಕ್ಕಾಚಾರ ಕೈಪಡೆಯದ್ದು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News