ಆಸ್ಪತ್ರೆ ಬೆಡ್‌ ಮೇಲೆ ಗಂಭೀರ ಸ್ಥಿತಿಯಲ್ಲಿ ʼಗಂಗೆ ಬಾರೆ ತುಂಗೆ ಬಾರೆʼ ನಟಿ..! ಏನಾಯ್ತು ಸುನೈನಾಗೆ

Actress Sunaina : ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಸಿದ್ಧ ನಟಿ ಸುನೈನಾ. ಕುಮಾರ್ ವರ್ಸಸ್ ಕುಮಾರಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಉತ್ತಮ ನಟನೆ ಮತ್ತು ಸೌಂದರ್ಯದ ಮೂಲಕ ಸೌತ್‌ ಸಿನಿ ಪ್ರೇಕ್ಷಕರ ಗಮನಸೆಳೆದಿದ್ದರು. ಸಧ್ಯ ನಟಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಸುದ್ದಿಯಾಗಿದ್ದು ಈ ಕುರಿತ ಫೋಟೋ ವೈರಲ್‌ ಆಗಿದೆ.. ಸುನೈನಾಗೆ ಏನಾಯ್ತು..? ಸಧ್ಯ ಹೇಗಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ..

Written by - Krishna N K | Last Updated : Oct 20, 2023, 09:59 PM IST
  • ಆಸ್ಪತ್ರೆ ಬೆಡ್‌ ಮೇಲೆ ನಟಿ ಸುನೈನಾ
  • ಫೋಟೋ ಹಂಚಿಕೊಂಡ ನಟಿ
  • ನಟಿ ಸುನೈನಾ ಫೋಟೋ ವೈರಲ್‌
ಆಸ್ಪತ್ರೆ ಬೆಡ್‌ ಮೇಲೆ ಗಂಭೀರ ಸ್ಥಿತಿಯಲ್ಲಿ ʼಗಂಗೆ ಬಾರೆ ತುಂಗೆ ಬಾರೆʼ ನಟಿ..! ಏನಾಯ್ತು ಸುನೈನಾಗೆ title=
actor Sunaina

Actress Sunaina hospitalized : ಪ್ರಜ್ವಲ್‌ ದೇವರಾಜ ನಟನೆಯ ʼಗಂಗೆ ಬಾರೆ ತುಂಗೆ ಬಾರೆʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಸುನೈನಾ ಆಸ್ಪತ್ರೆಗೆ ದಾಖಲಾಗಿದ್ದು, ಈ ಕುರಿತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ನಟಿಗೆ ಏನಾಯ್ತು ಎಂದು ಅವರ ಫ್ಯಾನ್ಸ್‌ ತುಂಬಾ ಆತಂಕಗೊಂಡಿದ್ದಾರೆ.

ಹೌದು.. ನಟಿ ಸುನೈನಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಾವು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅವರ ಫ್ಯಾನ್ಸ್‌ ಆತಂಕಗೊಂಡಿದ್ದಾರೆ. ಏಕಾಎಕಿ ನಟಿಗೆ ಏನಾಯ್ತು ಎಂದು ಚಿಂತಿತರಾಗಿದ್ದಾರೆ. ಕೈಯಲ್ಲಿ ಡ್ರಿಪ್ಸ್ ಮೂಗಿನಲ್ಲಿ ಟ್ಯೂಬ್ ಹಾಕಿಸಿಕೊಂಡು ಆಸ್ಪತ್ರೆಗಯ ಬೆಡ್‌ ಮೇಲೆ ಮಲಗಿ ನಟಿ 'ಥಂಬ್ಸ್ ಅಪ್' ಸಿಗ್ನಲ್ ನೀಡಿರುವ ದೃಶ್ಯ ಚಿತ್ರದಲ್ಲಿದೆ.

 
 
 
 

 
 
 
 
 
 
 
 
 
 
 

A post shared by Sunainaa Yeellaa (@thesunainaa)

ಇದನ್ನೂ ಓದಿ: BBK10: ಬಿಗ್‌ಬಾಸ್‌ ಮನೆಯಲ್ಲಿ ಮ್ಯೂಸಿಕ್ ಕ್ಲಾಸ್..! ʼಸಂಗೀತʼಕ್ಕೆ ಅಭಿಮಾನಿಗಳು ಫುಲ್‌ ಫಿದಾ

ಸ್ವತಃ ಈ ಫೋಟೋವನ್ನು ಸುನೈನಾ ಪೋಸ್ಟ್ ಮಾಡಿದ್ದಾರೆ. ಇದಕ್ಕೆ, “ನನಗೆ ಸ್ವಲ್ಪ ಸಮಯ ಕೊಡಿ. ನಾನು ಹಿಂತಿರುಗುತ್ತೇನೆ...”ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಆದ್ರೆ ಸುನೈನಾಗೆ ಅಪಘಾತವಾಯ್ತಾ ಅಥವಾ ಅವರ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಅವರು ಸ್ಪಷ್ಟ ಪಡಿಸಿಲ್ಲ.

ನಟಿ ಸುನೈನಾ ಸದ್ಯ ಕೆಲವು ವೆಬ್ ಸಿರೀಸ್ ಮತ್ತು ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂತಿಮವಾಗಿ "ರೆಜಿನಾ" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ ನಂತರ ಸುನೈನಾ ಕೆಲವು ಚಿತ್ರಗಳಿಗೆ ಕಮಿಟ್ ಆಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News