ಗಾಜಾದ ಮೇಲೆ ಇಸ್ರೇಲ್‌ ಭಾರೀ ಬಾಂಬ್ ದಾಳಿ : 24 ಗಂಟೆಗಳಲ್ಲಿ 400 ಪ್ಯಾಲೆಸ್ತೀನ್ ಪ್ರಜೆಗಳ ಸಾವು

Israel hamas war updates : ಇಸ್ರೇಲಿ ದಾಳಿಗೆ 24 ಗಂಟೆಗಳಲ್ಲಿ 400 ಪ್ಯಾಲೆಸ್ತೀಯನ್ನರು ಮೃತಪಟ್ಟಿದ್ದಾರೆ. ಗಾಜಾದಲ್ಲಿ ಇದುವರೆಗೆ 19 ಪತ್ರಕರ್ತರು ಹತ್ಯೆಯಾಗಿದ್ದಾರೆ. ಇಷ್ಟು ದಿನ ವಾಯು ದಾಳಿ ನಡೆಸುತ್ತಿದ್ದ ಇಸ್ರೇಲ್‌ ಸೇನೆಯು ಸಧ್ಯ ಗಾಜಾದ ಮೇಲೆ ಯಾವುದೇ ಸಮಯದಲ್ಲಿ ಭೂ ದಾಳಿ ನಡೆಸಬಹುದು. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಗೊಂಡರೆ, ಯುಎಸ್ ಕಾರ್ಯನಿರ್ವಹಿಸುತ್ತದೆ.

Written by - Krishna N K | Last Updated : Oct 23, 2023, 09:41 PM IST
  • ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾಗಿ ಇಂದಿಗೆ 17ನೇ ದಿನ.
  • ಇಸ್ರೇಲಿ ದಾಳಿಗೆ ಕಳೆದ 24 ಗಂಟೆಗಳಲ್ಲಿ 400 ಪ್ಯಾಲೆಸ್ತೀಯನ್ನರು ಮೃತಪಟ್ಟಿದ್ದಾರೆ.
  • ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಪ್ಯಾಲೆಸ್ತೀನ್ ಜನರ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ.
ಗಾಜಾದ ಮೇಲೆ ಇಸ್ರೇಲ್‌ ಭಾರೀ ಬಾಂಬ್ ದಾಳಿ : 24 ಗಂಟೆಗಳಲ್ಲಿ 400 ಪ್ಯಾಲೆಸ್ತೀನ್ ಪ್ರಜೆಗಳ ಸಾವು title=

Israel Bombarded in Gaza : ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾಗಿ ಇಂದಿಗೆ 17ನೇ ದಿನ. ಸಂಘರ್ಷ ಇನ್ನೂ ಮುಗಿದಿಲ್ಲ. ಕಸವನ್ನು ನಾಶಪಡಿಸುವವರೆಗೂ ವಿರಮಿಸುವುದಿಲ್ಲ ಎಂದು ಇಸ್ರೇಲ್ ದಾಳಿ ಮುಂದುವರಿಸಿದೆ. ಅದರಲ್ಲೂ ಜನರು ವಾಸಿಸುವ ಸ್ಥಳ, ಆಸ್ಪತ್ರೆ, ಅಂತರಾಷ್ಟ್ರೀಯ ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಪ್ಯಾಲೆಸ್ತೀನ್ ಜನರ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ.

ಕಳೆದ 24 ಗಂಟೆಗಳಲ್ಲಿ ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 400 ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ 1,873 ಮಕ್ಕಳು ಮತ್ತು 1,023 ಮಹಿಳೆಯರು ಸೇರಿದಂತೆ 4,651 ಪ್ಯಾಲೆಸ್ತೀನ್‌ ಪ್ರಜೆಗಳು ಸಾವನ್ನಪ್ಪಿದ್ದಾರೆ, 14,245 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಮತ್ತೊಂದೆಡೆ, ಇಸ್ರೇಲಿ ಸೇನೆಯ ಪ್ರಕಾರ 365 ಸೈನಿಕರು ಸೇರಿದಂತೆ 1405 ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 500 ಜನ ಆಶ್ರಯ ಪಡೆದಿದ್ದ ಗಾಜಾದ 900 ವರ್ಷ ಹಳೆಯ ಚರ್ಚ್ ಮೇಲೆ ಇಸ್ರೇಲ್ ಬಾಂಬ್ ದಾಳಿ..!

ಸುದ್ದಿ ವಾಹಿನಿ ಅಲ್ ಜಜೀರಾ ಪ್ರಕಾರ, ಇಸ್ರೇಲಿ ಮಿಲಿಟರಿ ರಾಫಾ ಮತ್ತು ಜಬಾಲಿಯಾ ಶಿಬಿರಗಳು ಸೇರಿದಂತೆ 25 ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಿತು. ಜಬಾಲಿಯಾದಿಂದ ಇದುವರೆಗೆ 30 ಶವಗಳನ್ನು ಹೊರತೆಗೆಯಲಾಗಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಅಲ್ಲದೆ, ಇಸ್ರೇಲ್ ಮೇಲೆ ಇದುವರೆಗೆ 7400 ರಾಕೆಟ್‌ಗಳನ್ನು ಹಾರಿಸಿದೆ. ಅಕ್ಟೋಬರ್ 7 ರಂದು, ಹಮಾಸ್ ಒಂದೇ ದಿನದಲ್ಲಿ 5,000 ರಾಕೆಟ್‌ಗಳನ್ನು ಇಸ್ರೇಲ್‌ಗೆ ಹಾರಿಸಿದೆ ಎಂದು ವರದಿ ಮಾಡಿದೆ.

ಇಸ್ರೇಲ್-ಹಮಾಸ್ ಸಂಘರ್ಷವು 200,000 ಇಸ್ರೇಲಿ ನಾಗರಿಕರನ್ನು ಮನೆಗಳನ್ನು ಬಿಟ್ಟು ಓಡಿಹೋಗುವಂತೆ ಮಾಡಿದೆ. ಅವರನ್ನು ಗಾಜಾ ಮತ್ತು ಲೆಬನಾನ್‌ನ ಗಡಿಯಿಂದ ಸ್ಥಳಾಂತರಿಸಲಾಗಿದೆ. ಇಸ್ರೇಲ್‌ನಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅದೇ ಸಮಯದಲ್ಲಿ, 5 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 1400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದುವರೆಗೆ 700ಕ್ಕೂ ಹೆಚ್ಚು ಶವಗಳನ್ನು ಗುರುತಿಸಲಾಗಿದೆ ಎಂದು ಇಸ್ರೇಲ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. 

ಇದನ್ನೂ ಓದಿ: ಇಸ್ರೇಲ್ ನಾಯಕತ್ವವನ್ನು ತಿರುವುಹಾದಿಯಲ್ಲಿ ತಂದು ನಿಲ್ಲಿಸಿದ ಹಮಾಸ್‌ನ 'ಅಲ್ - ಅಕ್ಸಾ ಫ್ಲಡ್' ಕಾರ್ಯಾಚರಣೆ

ವೈಮಾನಿಕ ದಾಳಿಯ ನಂತರ, ಇಸ್ರೇಲ್ ಈಗ ಭೂ ದಾಳಿಗೆ ಸಿದ್ಧತೆ ಆರಂಭಿಸಿದೆ. ಇಸ್ರೇಲಿ ಸೇನೆಯು ಗಾಜಾ ಪಟ್ಟಿಯಿಂದ 5 ಕಿಲೋಮೀಟರ್ ದೂರದಲ್ಲಿ ಬೀಡುಬಿಟ್ಟಿದೆ. ಇಸ್ರೇಲ್ ಸೇನೆಯು ಗಾಜಾದ ಮೇಲೆ ಯಾವುದೇ ಸಮಯದಲ್ಲಿ ದಾಳಿ ನಡೆಸಬಹುದು ಎಂದು ಹೇಳಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News