Israel Hamas War : ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯಿಂದ ಪ್ರಾರಂಭವಾದ ಯುದ್ಧ ಇನ್ನೂ ಮುಂದುವರೆದಿದೆ. ಹಮಾಸ್ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್ ಗಳನ್ನು ಹಾರಿಸಿತ್ತು.
Israel hamas war updates : ಇಸ್ರೇಲಿ ದಾಳಿಗೆ 24 ಗಂಟೆಗಳಲ್ಲಿ 400 ಪ್ಯಾಲೆಸ್ತೀಯನ್ನರು ಮೃತಪಟ್ಟಿದ್ದಾರೆ. ಗಾಜಾದಲ್ಲಿ ಇದುವರೆಗೆ 19 ಪತ್ರಕರ್ತರು ಹತ್ಯೆಯಾಗಿದ್ದಾರೆ. ಇಷ್ಟು ದಿನ ವಾಯು ದಾಳಿ ನಡೆಸುತ್ತಿದ್ದ ಇಸ್ರೇಲ್ ಸೇನೆಯು ಸಧ್ಯ ಗಾಜಾದ ಮೇಲೆ ಯಾವುದೇ ಸಮಯದಲ್ಲಿ ಭೂ ದಾಳಿ ನಡೆಸಬಹುದು. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಗೊಂಡರೆ, ಯುಎಸ್ ಕಾರ್ಯನಿರ್ವಹಿಸುತ್ತದೆ.
Israel-Hamas War latest update : ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಬಾಧಿತರಾದ ಪ್ಯಾಲೆಸ್ಟೈನ್ ನಾಗರಿಕರಿಗೆ ಭಾರತ ನೆರವಿಗೆ ನಿಂತಿದೆ. 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳ ಪ್ಯಾಲೆಸ್ತೀನ್ಗೆ ಕಳುಹಿಸಿದೆ.
Israel Attack On Hamas: ಜೆರುಸಲೆಮ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೋಂದರ ಪ್ರಕಾರ, ಇಸ್ರೇಲ್ ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆ ಬಾಂಬ್ಗಳನ್ನು ಎಸಗಿದೆ, ಇದರಿಂದಾಗಿ ಅಲ್ಲಿ ಭಾರಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಇರಾನ್ನ ವಿದೇಶಾಂಗ ಸಚಿವರೂ ಸಿರಿಯಾಕ್ಕೆ ಬರಲಿದ್ದಾರೆ. ಆದರೆ ಅದಕ್ಕೂ ಮುನ್ನವೇ, ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದ್ದು, ಇರಾನ್ನ ವಿದೇಶಾಂಗ ಸಚಿವರು ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ಶಿಯಾ ಪಂಥದ ಲೆಬಾನೀಸ್ ಮಿಲಿಟರಿ ಗುಂಪಾದ ಹೆಜ್ಬೊಲ್ಲಾ ಸಹ ಕದನದಲ್ಲಿ ಭಾಗಿಯಾಗಿದೆ. ಈ ಕುರಿತು ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಹೆಜ್ಬೊಲ್ಲಾ, ತಾನು ಗಡಿಯ ಬಳಿಯಿರುವ ಇಸ್ರೇಲ್ ಆಕ್ರಮಿತ, ಸಿರಿಯಾದಲ್ಲಿನ ಗೋಲನ್ ಹೈಟ್ಸ್ ಪ್ರದೇಶದ ಬಳಿ ಇರುವ ಚೆಬಾ ಫಾರ್ಮ್ಸ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿಕೆ ನೀಡಿದೆ.
ಕಳೆದ 5 ದಿನಗಳಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಇಲ್ಲಿಯವರೆಗೆ ಒಟ್ಟು 2,700 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿಯಲ್ಲಿ 1,200 ಇಸ್ರೇಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 2,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದೇ ರೀತಿ ಹಮಾಸ್ನ 1,500 ಭಯೋತ್ಪಾದಕರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಇಸ್ರೇಲ್ನಲ್ಲಿರುವ ಮಗಳಿಗಾಗಿ ಆತಂಕಗೊಂಡ ಪಾಲಕರು..! ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಪೂಜಾಗೆ ಸಂಕಷ್ಟ... 2 ವರ್ಷಗಳಿಂದ ಇಸ್ರೇಲ್ನಲ್ಲಿ ಕಾರ್ಯನಿರ್ವಹಿಸುತ್ತಿರೋ ಪೂಜಾ... ಟಿಎಸಿಎಸ್ ಕಂಪನಿಯಿಂದ 2 ವರ್ಷಗಳ ಅವಧಿಗೆ ತೆರಳಿರೋ ಪೂಜಾ.. ಯುದ್ಧ ಹಿನ್ನಲೆ ಪೂಜಾ ತಂದೆ ತಾಯಿಗಳಿಗೆ ನಿಲ್ಲದ ಆತಂಕ
Israel-Hamas War: ಕೇವಲ ಬಾಂಬ್ ಹಾಗೂ ರಾಕೇಟ್ ಸದ್ದು ಮಾತ್ರ ಕೇಳಿಸುತ್ತಿದೆ. ಸುರಕ್ಷಿತವಾಗಿ ಇದ್ದೇವೆ ಎಂದು ಶಾಂತಿ ಆಲ್ಮೇಡಾ ತಿಳಿಸಿದ್ದಾರೆ. ಆಹಾರ ಹಾಗೂ ನೀರಿಗೆ ಯಾವುದೇ ತೊಂದರೆ ಇಲ್ಲವೆಂದು ಎಂದು ಕುಟುಂಬಸ್ಥರಿಗೆ ಶಾಂತಿ ತಿಳಿಸಿದ್ದು, ಭಾರತೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿದ್ದಾರೆ.
Israel-Hamas War: ಇಸ್ರೇಲ್ಗೆ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಇತರ ವಿಶ್ವ ನಾಯಕರಿಗೆ ಬೆಂಜಮಿನ್ ನೆತನ್ಯಾಹು ಧನ್ಯವಾದ ಅರ್ಪಿಸಿದರು. ಇಸ್ರೇಲ್ಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ನಾನು ವಿಶ್ವ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಅಂತಾ ಹೇಳಿದ್ದಾರೆ.
ಇಸ್ರೇಲ್ ಹಮಾಸ್ ಯುದ್ಧ: ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್, ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿರುವುದಕ್ಕೆ ಇಡೀ ಪ್ರಪಂಚವೇ ಬೆಚ್ಚಿಬಿದ್ದಿದೆ. ಹಮಾಸ್ ದಾಳಿಗೆ ತಕ್ಕ ತಿರುಗೇಟು ನೀಡಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಘೋಷಿಸಿದರು. ಇದೇ ವೇಳೆ ತಾನು ಸಂಪೂರ್ಣವಾಗಿ ಇಸ್ರೇಲ್ ಜೊತೆಗಿರುವುದಾಗಿ ಅಮೆರಿಕ ಹೇಳಿದೆ. ಅಷ್ಟಕ್ಕೂ ಅಮೆರಿಕ ಇಸ್ರೇಲ್ ಅನ್ನು ಏಕೆ ಕುರುಡಾಗಿ ಬೆಂಬಲಿಸುತ್ತದೆ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.