AUS vs NED: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದು ವಾರ್ನರ್ ಅವರ ODI ವೃತ್ತಿಜೀವನದ 22 ನೇ ಶತಕ ಮತ್ತು ಈ ವಿಶ್ವಕಪ್’ನಲ್ಲಿ ಅವರ ಸತತ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧ 163 ರನ್’ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.
ಈ ಶತಕದ ಆಧಾರದ ಮೇಲೆ, ವಾರ್ನರ್ ವಿಶ್ವಕಪ್ ಇತಿಹಾಸದಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ವಿಶ್ವಕಪ್’ನಲ್ಲಿ ಇದು ಅವರ ಆರನೇ ಶತಕವಾಗಿದೆ.
ಇದನ್ನೂ ಓದಿ: ನನಗೆ ಇಬ್ಬರು ಮಕ್ಕಳಿದ್ದಾರೆ, ಆದರೆ ನೀವು ಇನ್ನೂ: ವಿರಾಟ್ ಬಗ್ಗೆ ಇಂಗ್ಲೆಂಡ್ ಆಟಗಾರ ಹೀಗಂದಿದ್ದೇಕೆ
ಮತ್ತೊಂದೆಡೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶ್ವಕಪ್’ನಲ್ಲಿ ಸಚಿನ್ ಅವರ ಹೆಸರಿನಲ್ಲಿ 6 ಶತಕಗಳಿವೆ. ಅಂದಹಾಗೆ ವಿಶ್ವಕಪ್’ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ 7 ಶತಕ ಸಿಡಿಸಿರುವ ರೋಹಿತ್ ಶರ್ಮಾ ಹೆಸರಿನಲ್ಲಿದೆ.
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳು
- ರೋಹಿತ್ ಶರ್ಮಾ- 7
- ಸಚಿನ್ ತೆಂಡೂಲ್ಕರ್- 6
- ಡೇವಿಡ್ ವಾರ್ನರ್- 6
- ಕುಮಾರ್ ಸಂಗಕ್ಕಾರ- 5
- ರಿಕಿ ಪಾಂಟಿಂಗ್- 5
- ಸೌರವ್ ಗಂಗೂಲಿ- 4
ವಾರ್ನರ್ ಅವರು ವಿಶ್ವಕಪ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಬಾರಿಸಿದ ಆಸ್ಟ್ರೇಲಿಯಾದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಾರ್ಕ್ ವಾ, ರಿಕಿ ಪಾಂಟಿಂಗ್ ಮತ್ತು ಮ್ಯಾಥ್ಯೂ ಹೇಡನ್ ಈ ಸಾಧನೆ ಮಾಡಿದ್ದರು. 91 ಎಸೆತಗಳಲ್ಲಿ ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದ ವಾರ್ನರ್ ನಂತರ 104 ರನ್ ಗಳಿಸಿ ಪೆವಿಲಿಯನ್’ಗೆ ಮರಳಿದರು.
ಕಡಿಮೆ ಇನ್ನಿಂಗ್ಸ್’ನಲ್ಲಿ ODI ಶತಕಗಳು:
- 126 - ಹಾಶಿಮ್ ಆಮ್ಲ
- 143-ವಿರಾಟ್ ಕೊಹ್ಲಿ
- 153 – ಡೇವಿಡ್ ವಾರ್ನರ್*
- 186 - ಎಬಿ ಡಿವಿಲಿಯರ್ಸ್
- 188 - ರೋಹಿತ್ ಶರ್ಮಾ
ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ಪರ ಸತತ ಶತಕ
- 2 – ಮಾರ್ಕ್ ವಾ (1996)
- 2 – ರಿಕಿ ಪಾಂಟಿಂಗ್ (2003-07)
- 2 – ಮ್ಯಾಥ್ಯೂ ಹೇಡನ್ (2007)
- 2 – ಡೇವಿಡ್ ವಾರ್ನರ್ (2023)*
ವಿಶ್ವಕಪ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ಗಳನ್ನು ಗಳಿಸಿದ ಆರಂಭಿಕ ಆಟಗಾರ
- 16 - ಸಚಿನ್ ತೆಂಡೂಲ್ಕರ್
- 11 - ರೋಹಿತ್ ಶರ್ಮಾ
- 9 - ಆಡಮ್ ಗಿಲ್‌ಕ್ರಿಸ್ಟ್
- 9 – ಸನತ್ ಜಯಸೂರ್ಯ
- 9 - ಡೇವಿಡ್ ವಾರ್ನರ್
- 8 - ಕ್ರಿಸ್ ಗೇಲ್
ಪುರುಷರ ODI ವಿಶ್ವಕಪ್’ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್‌ಗಳು
- 1767: ಸಚಿನ್ ತೆಂಡೂಲ್ಕರ್
- 1303 : ಡೇವಿಡ್ ವಾರ್ನರ್
- 1289: ರೋಹಿತ್ ಶರ್ಮಾ
ಇದನ್ನೂ ಓದಿ: 40 ಎಸೆತಕ್ಕೆ ಗ್ಲೆನ್ ಮ್ಯಾಕ್ಸ್’ವೆಲ್ ಸ್ಪೋಟಕ ಶತಕ! ಅತಿ ವೇಗದ ಸೆಂಚುರಿ ಬಾರಿಸಿದ ಆಸೀಸ್ ಆಟಗಾರ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ