Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೂರನೇ ವಾರದ ವೀಕೆಂಡ್ ನಿನ್ನೆ ನಡೆದಿದೆ. ಕಿಚ್ಚ ಸುದೀಪ್ ಮೂರನೇ ವಾರಾಂತ್ಯದ ಪಂಚಾಯಿತಿ ನಡೆಸಿದ್ದಾರೆ. ಸಖತ್ ಸ್ಟೈಲ್ ಆಗಿ ಸುದೀಪ್ ಕಾಣುತ್ತಿದ್ದರು. ಕಿಚ್ಚನ ಪಂಚಾಯ್ತಿಯಲ್ಲಿ ಈ ವಾರ ಒಂದು ಎಲ್ಲರಿಗೂ ಒಂದುಸರ್‌ಪ್ರೈಸ್ ಕಾದಿತ್ತು. ಬಿಗ್ ಬಾಸ್‌ನ ಎಲ್ಲ ಕಂಟೆಸ್ಟಂಟ್‌ಗಳಿಗೂ ಒಂದೊಂದು ಗಿಫ್ಟ್ ಕೊಟ್ಟಿದ್ದಾರೆ.
ಈ ಹಿಂದಿನ ಶನಿವಾರಗಳಿಗಿಂತ ಈ ವೀಕೆಂಡ್ ಡಿಫರೆಂಟ್ ಆಗಿತ್ತು. ಈ ವಾರದ ಸಂಪೂರ್ಣ ವಿಚಾರಗಳ ಬಗ್ಗೆ ಚರ್ಚಿಸಿದ ಕಿಚ್ಚ ಸುದೀಪ್ ಉಡುಗೊರೆ ಜೊತೆಗೆ ಮನೆಮಂದಿಗೆಲ್ಲ ಸಂದೇಶ ಕೂಡ ರವಾನಿಸಿದ್ದಾರೆ. ಕಿಚ್ಚನ ಕಿವಿ ಮಾತಿಗೆ ಸ್ಪರ್ಧಿಗಳೆಲ್ಲ ತಲೆದೂಗಿದ್ದಾರೆ.
ಈ ವಾರ ನಡೆದ ಟಾಸ್ಕ್, ಅಲ್ಲಾದ ತಪ್ಪು ಒಪ್ಪುಗಳು.. ಉತ್ತಮ ಯಾರು? ಕಳಪೆ ಯಾರು? ಈ ಯಾವುದನ್ನೂ ಈ ವೀಕೆಂಡ್‌ನಲ್ಲಿ ಸುದೀಪ್ ಮಾತನಾಡಿಲ್ಲ. ಈ ವಾರದ ಕಿಚ್ಚ ಪಂಚಾಯ್ತಿಯಲ್ಲಿ ನಡೆದಿದ್ದು ಕೇವಲ ವ್ಯಕ್ತಿತ್ವದ ಮಾತು.
ಇದನ್ನೂ ಓದಿ: ಗುರುತೇ ಸಿಗದಂತ ಪಾತ್ರದಲ್ಲಿ ವಿನೋದ್ ಪ್ರಭಾಕರ್: ಮರಿ ಟೈಗರ್‌ಗೆ ಸ್ಟಾರ್‌ಗಳ ಮೆಚ್ಚುಗೆ
ಬಿಗ್ ಬಾಸ್ ವೀಕ್ಷಕರು ಮನೆಯ ಸದಸ್ಯರಿಗೆ ಉಡುಗೊರೆಗಳನ್ನು ಕಳಿಸಿದ್ದಾರೆ. ಆ ಉಡುಗೊರೆಗಳಲ್ಲಿಯೇ ಅವರಿಗೊಂದು ಸೂಕ್ಷ್ಮ ಸಂದೇಶ ಕೂಡ ಅಡಗಿತ್ತು. ಕಾರ್ತಿಕ್ ಕತ್ತಿ ಜೊತೆಗೆ ತರಕಾರಿ, ಯೋಧನಾದವನು ಕತ್ತಿಯನ್ನು ಯುದ್ಧ ಭೂಮಿಯಲ್ಲಿ ಸರಿಯಾದ ವಿರೋಧಿಯ ಎದುರು ಬಳಸಬೇಕು ಎಂದು ಬರೆದಿದ್ದರು.
ವಿನಯ್‌ಗೆ ಆನೆಯ ಸಣ್ಣ ವಿಗ್ರಹದ ಜೊತೆಗೆ ನಾನು ಆನೆ, ನನ್ನ ಸಮಕ್ಕೆ ಯಾರಿಲ್ಲ ಎಂದುಕೊಂಡು ಸಿಕ್ಕ-ಸಿಕ್ಕ ಹಾದಿ ಹಿಡಿದು ದಾರಿತಪ್ಪುವುದು ಬೇಡ ಎಂದು ಬರೆದಿದ್ದರು. ಇಶಾನಿಗೆ ಉಪ್ಪಿನಕಾಯಿಯನ್ನು ಉಡುಗೊರೆಯಾಗಿ ಕಳಿಸಿ, ಊಟಕ್ಕೆ ಉಪ್ಪಿನಕಾಯಿ ಚೆನ್ನಾಗಿರುತ್ತದೆ, ಆದರೆ ಅದು ಇರಲೇ ಬೇಕೆಂದೇನೂ ಇಲ್ಲ ಎಂದು ಬರೆದಿದ್ದರು. ಸಂಗೀತಾ ಶೇಂಗೇರಿಗೆ ಮೊದಲ ವಾರ ಕರ್ನಾಟಕದ ಕ್ರಶ್ ಆಗಿದ್ರಿ, ಆದರೆ ನಂತರದ ವಾರಗಳಲ್ಲಿ ಹೃದಯವನ್ನೇ ಕ್ರಶ್ ಮಾಡಿದ್ರಿ ಎಂದು ಹೇಳಿದ್ರು.
ತುಕಾಲಿ ಸಂತುಗೆ ಮೈಕ್ ಜೊತೆ ಅಭಿಪ್ರಾಯ ಓಪನ್ ಆಗಿರಲಿ ಎಂಬ ಸಂದೇಶ ನೀಡಲಾಯ್ತು. ಸಿರಿ ಅವರಿಗೆ ಆಮೆಯ ಬೊಂಬೆ ಕಳಿಸಿ ಮೊಲ ಮಲುಗುತ್ತದೆ ನಾನೇ ಗೆಲ್ಲುತ್ತೇನೆ ಎಂಬ ಭ್ರಮೆ ಬೇಡ ಎಂದು ಬರೆದಿದ್ರು. ನಮ್ರತಾಗೆ ಸ್ಪೂನ್ ಉಡುಗೊರೆಯಾಗಿ ಬಂದಿತ್ತು. ಹೀಗೆ ಪ್ರತಿಯೊಬ್ಬರಿಗೂ ಅಚ್ಚರಿಯ ಉಡುಗೊರೆ ಜೊತೆಗೆ ಸಂದೇಶವೂ ದೊರೆತಿದೆ. ಇದರ ಜೊತೆಗೆ ಕಿಚ್ಚನ ಕಿವಿ ಮಾತು ಸಹ ದೊರೆತಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 10 ಕಲರ್ಸ್ ಕನ್ನಡ ವಾಹಿನಿಯಲ್ಲಿ 9:30ಕ್ಕೆ ಹಾಗೂ ಜಿಯೋ ಸಿನಿಮಾದಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: ಹಿರಿಯ ನಟ ಸುರೇಶ್ ಹೆಬ್ಳೀಕರ್ ಇ-ಮೇಲ್ ಹ್ಯಾಕ್: 5 ಲಕ್ಷ ಹಣಕ್ಕೆ ಬೇಡಿಕೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.